ದಲಿತ ಕಥೆಗಳು

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 270

₹ 75.00




Year of Publication: 1996
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ, ನೃಪತುಂಗ ರಸ್ತೆ, ಬೆಂಗಳೂರು- 2

Synopsys

‘ದಲಿತ ಕಥೆಗಳು’ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಎಲ್. ಹನುಮಂತಯ್ಯ ಹಾಗೂ ಬಿ. ಚಿನ್ನಸ್ವಾಮಿ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ಮಹತ್ವದ ಕೃತಿ. ದಲಿತರ ಜೀವನ, ಸಂಸ್ಕೃತಿ, ಸಂಪ್ರದಾಯಗಳನ್ನು ಕುರಿತು ದಲಿತೇತರರು ಬರೆದರೆ ಅದು ಬೆನ್ನಾಗಿರುತ್ತದೆ ನಿಜ: ಆದರೆ ದಲಿತ ಬರೆದಾಗ ಮಾತ್ರ ಅವರ ನೋವು ನಲಿವುಗಳ, ಅವರ ಅಭಿಮಾನದ, ಅವರ ನೋವು ನಲಿವುಗಳ, ಅವರ ಅಂತರಂಗದ ತುಡಿತ- ಮಿಡಿತಗಳ ಮತ್ತು ಅವರ ಪ್ರಾಮಾಣಿಕ ಅನಿಸಿಕೆಗಳ ಸ್ಪಷ್ಟ ನಿರ್ದಿಷ್ಟ ಚಿತ್ರಣ ಮೂಡಿಬರುವುದು ಸಾಧ್ಯ. ದಲಿತರ ಮತ್ತು ದಲಿತೇತರರ ಬದುಕಿನ ವಾತಾವರಣದಲ್ಲಿ ಇರುವ ಅಂತರ ಅಪಾರ. ಆ ವಾತಾವರಣವರಿಯದ ಲೇಖಕರು ಎಷ್ಟೇ ಸೊಗಸಾಗಿ ಬರೆದರೂ ಅದು ಸ್ಪಷ್ಟ ನಿರ್ದಿಷ್ಟ ಆಗಲಾರದು. ಈ ದೃಷ್ಟಿಯಿಂದ ದಲಿತರು ಸೃಷ್ಟಿಸಿದ ಸಾಹಿತ್ಯವನ್ನು ಪ್ರತ್ಯೇಕವಾಗಿ ಪ್ರಕಟಿಸಿದರೆ ಅದರಿಂದ ಲಾಭವೇ ಹೊರತು ನಷ್ಟವೇನಿಲ್ಲ. ಇಲ್ಲಿ ಪ್ರತ್ಯೇಕ ಎಂಬುದು ಮುಖ್ಯ ಪ್ರವಾಹದಿಂದ ದೂರ, ಭಿನ್ನ ಎಂಬ ಅರ್ಥದಲ್ಲಿ ಇಲ್ಲ. ಸಾಹಿತ್ಯ ಒಂದೇ ಆದರೂ ವಿಶಿಷ್ಟ ವಿಶೇಷಕ್ಕಾಗಿ ಪ್ರತ್ಯೇಕತೆಯನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆ. ಅಲ್ಲದೆ ದಲಿತ ಸಾಹಿತ್ಯ ಸಮಗ್ರ ಅಧ್ಯಯನಕ್ಕೆ ಇದು ತುಂಬ ಅನುಕೂಲ.

ತೂತಿನ ದುಡ್ಡು ಮತ್ತು ನೀರು -ಡಾ. ಅರವಿಂದ ಮಾಲಗತ್ತಿ

ಅಹಿಂಸಾ ಚಪ್ಲಿಯ ಐಯ್ಯಪ್ಪ -ಡಾ. ಅರವಿಂದ ಮಾಲಗತ್ತಿ

ಸಂಜೀವ ಮತ್ತು ಅವನ ಮನಿ -ಈರಣ್ಣ ಕೋಸಗಿ

ಮೂಗನ ಪಾಡು -ಬಿ. ಚಿನ್ನಸ್ವಾಮಿ

ಲೆಕ್ಕ -ಜನಾರ್ಧನ ಎರ್ಪಕಟ್ಟೆ

ಅಸ್ಪೃಶ್ಯ -ಜನಾರ್ಧನ ಎರ್ಪಕಟ್ಟೆ

ಕಾಲ -ಮ.ನ. ಜವರಯ್ಯ

ಸ್ಫೋಟ -ಮ.ನ. ಜವರಯ್ಯ

ಕಳ್ಳುಬಳ್ಳಿ -ಬಿ.ಟಿ. ಜಾಹ್ನವಿ

ಮಾರಿಕೊಂಡವರು -ದೇವನೂರ ಮಹಾದೇವ

ಅಮಾಸ -ದೇವನೂರ ಮಹಾದೇವ

ಕ್ಷಾಮ -ಬರಗೂರು ರಾಮಚಂದ್ರಪ್ಪ

ಗಾಳಿಪಟ -ಸಿ. ಬಸವಲಿಂಗಯ್ಯ

ಬಿಟ್ಟಿಗೂಸ -ಬಾನಂದೂರು ಕೆಂಪಯ್ಯ

ಟೋಕ್ಲ ಮಾಗಿ ಮಾಡಿದ್ದು -ಬೆನಕನಹಳ್ಳಿ ಜಿ. ನಾಯಕ

ಅಲ್ಲಿ ಆ ಅಳು ಈಗಲೂ -ಮೊಗಳ್ಳಿ ಗಣೇಶ್

ನನ್ನಜ್ಜನಿಗೊಂದಾಸೆಯಿತ್ತು -ಮೊಗಳ್ಳಿ ಗಣೇಶ್‌

ಫಾಲ್ಗುಣಿ -ಮೋಹನ ನಾಗಮ್ಮನವರ

ಆವಾರಿ -ರಾಮಕೃಷ್ಣ ಗುಂದಿ

ಕುಯಿಲು -ಲಕ್ಷ್ಮಣ್‌

ಹಬ್ಬ ಮತ್ತು ಬಲಿ -ಬಿ.ಟಿ. ಲಲಿತಾ ನಾಯಕ್‌

ಚೆಲುವಿ -ವೀರ ಹನುಮಾನ

ಬೂದಿ ಮತ್ತು ಹಂಬು -ಡಾ.ಎಂ.ಎಸ್‌. ಶೇಖರ್‌

ಮತಾಂತರ -ಸಿದ್ಧಲಿಂಗಯ್ಯ

ದನ ಕಾಯುವವನು -ಸುಬ್ಬು ಹೊಲೆಯಾರ್‌

ಕೊಟ್ಟಿಗೆ ಬಂದ ಕಡಸು -ಸೋಮಣ್ಣ ಹೊಂಗಳ್ಳಿ

ಮಂದಿರದಿಂದ ಮಸೀದಿಯೆಡಗೆ -ಡಿ.ಎಸ್‌. ವೀರಯ್ಯ  ಕಾಡುಕೊತ್ತನಹಳ್ಳಿ

 

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books