ಗ್ಯಾನಿ ಗುಲಾಬಿ

Author : ಕೃಷ್ಣ ಮಾಸಡಿ

Pages 88

₹ 6.00




Year of Publication: 1983
Published by: ಜಾಣಗೆರೆ ಪ್ರಕಾಶನ
Address: ಲಕ್ಷ್ಮೀ ನಾರಾಯಣ ಪುರ ಬೆಂಗಳೂರು- 560 021

Synopsys

ಈ ಕೃತಿ ಕೃಷ್ಣ ಮಾಸಡಿಯವರ ಎರಡನೇ ಕಥಾಸಂಕಲನ. ಇಲ್ಲಿ ಏಳು ಕತೆಗಳು ಕಲೆತುಕೊಂಡಿವೆ. ಹೆಂಡತಿಯ ಮಾಂಗಲ್ಯ ಕಳೆದದ್ದು ಪೋಲಿಸ್ ದೌರ್ಜನ್ಯದ ಒಂದು ಮುಖವನ್ನು ಪರಿಚಯಿಸಿದರೆ (ಮಳ ಶಂಕ್ರಿ ಮರೆಯಾದದ್ದು. ಕತೆ ಬದು ಕಿನ ಹೆಣಗಾಟ ಬದುಕನ್ನೇ ನಾಶಪಡಿಸಿಕೊಳ್ಳುವುದನ್ನು ಚಿತ್ರಿಸುತ್ತದೆ. ನಾಗರೀಕ ಹೆಣ್ಣೆಂದು ಸಮಯಕ್ಕೆ ತಕ್ಕ ಜೀವನವನ್ನು ಆರಿಸಿಕೊಳ್ಳ ಬೇಕಾದ ದುರಂತವನ್ನು ಬ್ಲೂ'ನಲ್ಲಿ ಕಾಣಬಹುದು. ಕರುಳಿನ ಕುಡಿಗಳ ಉಸಿರಿಗಾಗಿ ಉಸಿರನ್ನೇ ಪಣವೊಡ್ಡುವ ತಾಯಿ ಹೃದಯ ಕಾಣ ಇದೆ ಅಪ್ಪ ಮಕ್ಕಳು ಬದುಕು ಸಾವು ಇತ್ಯಾದಿ' ಯಲ್ಲಿ, ಜನರ ಗೇಲಿಗೆ ಗುರಿಯಾಗಿದ್ದ ಗ್ಯಾನಿಯ ವಿವಾಹದ ಬದುಕೂ ಗೇಲಿಯಲ್ಲೇ ಪರವಸಾನ ನಾಗುತ್ತದೆ (ನಿ ಮತ್ತು ಗುಲಾಬಿ'ಯಲ್ಲಿ, 'ಭ್ರಮೆ' ಆಳುವವರ, ರಕ್ತ ಕರ ಬಿಗಿಮುಷ್ಟಿ, ಕ್ರೂರತ್ವದಿಂದ ನಿಸ್ಸತ್ವಗೊಳ್ಳಲ್ಪಡುತ್ತಿರುವ ತರುಣರ ದುರಂತವನ್ನು ಅದ್ಭುತವಾಗಿ ನಿರೂಪಿಸುತ್ತದೆ. ಹೀಗೆ ಪ್ರತಿಯೊಂದು ಕತೆಯ ಸಾಮಾಜಿಕ ಬದುಕಿನ ಅನೇಕ ನೋವಿನ ಸ್ತರಗಳನ್ನು ಆಳವಾಗಿ ಕೆದಕುವಲ್ಲಿ ಯಶಸ್ವಿಯಾಗುತ್ತವೆ. ಎಂದು ಲೇಖಕರು ತಿಳಿಸುತ್ತಾರೆ.

About the Author

ಕೃಷ್ಣ ಮಾಸಡಿ

ಹೊನ್ನಾಳಿ ತಾಲ್ಲೂಕಿನ ಮಾಸಡಿಯಲ್ಲಿ ಜನಿಸಿದ ಕೃಷ್ಣ ಮಾಸಡಿಯವರು ಪತ್ರಕರ್ತರಾಗಿ, ಸಾಹಿತಿಯಾಗಿ, ಚಲನಚಿತ್ರ ನಿರ್ದೇಶಕರಾಗಿ ತಮ್ಮ ಪ್ರತಿಭೆಯನ್ನು ಕಾಣಿಸಿದ್ದಾರೆ. 'ಲಂಕೇಶ್ ಪತ್ರಿಕೆ'ಯಲ್ಲಿ ಆರಂಭಿಕ ವರದಿಗಾರರಾಗಿ, ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.ಕರ್ನಾಟಕ ಸರ್ಕಾರದ ಚಲನಚಿತ್ರ ಸಹಾಯಧನ (2012) ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಸಮಿತಿ ಸದಸ್ಯರೂ ಆಗಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಯು.ಆರ್. ಅನಂತಮೂರ್ತಿಯವರ 'ಅವಸ್ಥೆ' ಕಾದಂಬರಿ ಆಧಾರಿತ ಚಲನಚಿತ್ರವನ್ನು ನಿರ್ದೇಶಿಸಿದ್ದವರು ಮಾಸಡಿಯವರು. ತಮ್ಮದೇ ಕಾದಂಬರಿ 'ನಂಬಿಕೆಗಳು ಆಧರಿಸಿದ ಚಲನಚಿತ್ರವನ್ನೂ ನಿರ್ದೇಶಿಸಿದವರು. ಎಸ್. ನಿಜಲಿಂಗಪ್ಪ, ಡಿ. ದೇವರಾಜ ಅರಸು, ಪು.ತಿ.ನ., ಜಿ.ಎಸ್.ಎಸ್., ...

READ MORE

Related Books