ಕತೆಯಾದಳು ಹುಡುಗಿ

Author : ಯಶವಂತ ಚಿತ್ತಾಲ

Pages 158

₹ 125.00
Published by: ಪ್ರಿಸಂ ಬುಕ್ಸ್

Synopsys

ಚಿತ್ತಾಲರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಕೃತಿ ’ಕತೆಯಾದಳು ಹುಡುಗಿ’. ಇದೇ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಮಹಾರಾಷ್ಟ್ರದ ಗೌರವ ಪುರಸ್ಕಾರಗಳೂ ಪ್ರಾಪ್ತವಾಗಿದವು. ಕನ್ನಡದ ಶ್ರೇಷ್ಠ ಕಥಾಸಂಕಲನಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.

ಈ ಸಂಕಲನದ ಬೆನ್ನುಡಿಯಲ್ಲಿ ಕತೆಗಾರ ಶಾಂತಿನಾಥ ದೇಸಾಯಿ ಅವರು ಕತೆಗಳು ಕುರಿತು ’ಚಿತ್ತಾಲರಿಗೇ ವಿಶಿಷ್ಟವಾದ - 'ಚಿತ್ತಾಲತನದ ಮುದ್ರೆ ಬಿದ್ದ' – ಅವರ ಕಥನಕೌಶಲ್ಯದ ಒಂದು ಘಟ್ಟ 'ಸಂದರ್ಶನ', 'ಆಬೋಲಿನಿಗಳಲ್ಲಿ ಆಕಾರ ಪಡೆಯುತ್ತ 'ಆಟ'ದಲ್ಲಿ ಉಚ್ಯಾಂಕವನ್ನು ಮುಟ್ಟಿತ್ತು. ಆ ನಂತರದ ಕಾಲದಲ್ಲಿ ಫಲಿಸಿದ ಇಲ್ಲಿಯ ಕತೆಗಳು ಅವರ ಬರವಣಿಗೆಯ ಇನ್ನೊಂದು ಮಹತ್ವದ ಘಟ್ಟದ ಆರಂಭವನ್ನು ಸೂಚಿಸುತ್ತದೆ. ದಟ್ಟ ಅನುಭವಗಳ ಸೂಕ್ಷ್ಮಾತಿಸೂಕ್ಷ್ಮಗಳನ್ನು ಹಿಡಿಯಲು ತವಕಿಸುವ ಸcerರ್tತೆ ಹಾಗೂ ಜೀವಂತ ಭಾವನೆಗಳಲ್ಲಿ ಹುಟ್ಟಿಬರುವ ಸಾಂಕೇತಿಕತೆ, ಇವುಗಳ ಜೊತೆಗೆ ಚಿತ್ತಾಲರ ಆಸ್ಥೆಗಳ ಕ್ಷಿತಿಜವೂ ಅತ್ಯಂತ ವಿಸ್ತಾರಗೊಂಡದ್ದನ್ನು ಕಾಣಿಸುವ ಈ ಕತೆಗಳು ವೈವಿಧ್ಯಪೂರ್ಣವಾದ, ಕೆಲವು ವಿಷಯಗಳಲ್ಲಿ ಕನ್ನಡಕ್ಕೆ ಹೊಸತೆನ್ನಿಸುವ ಪ್ರಯೋಗಗಳಾಗಿವೆ. ಸೃಜನಶೀಲ ಕಲ್ಪಕತೆ ಹಾಗೂ ಚಿಂತನೆಗಳಲ್ಲಿ ದೃಷ್ಟಿಗೋಚರವಾದ ಮನುಷ್ಯ ಸಾಧ್ಯತೆಗಳಿಂದ ಮುಲಕಿತಗೊಂಡ, ಜೊತೆಗೆ ಬದುಕಿನ ಅನಂತ ರಹಸ್ಯಗಳ ಬಗ್ಗೆ ಬೆರಗು ತುಂಬಿದ ಪ್ರೀತಿಯುಳ್ಳ ಮನಸೊಂದು ಇಲ್ಲಿ ಕಾರ್ಯಪ್ರವೃತ್ತವಾಗಿದೆ. ಕನ್ನಡ ಕಥಾಪ್ರಪಂಚದಲ್ಲಿ 'ಆಟ'ದಂತೆ ’ಕತೆಯಾದಳು ಹುಡುಗಿ' ಕೂಡ ಒಂದು ಅತ್ಯಂತ ಗಟ್ಟಿಯಾದ ಮಹತ್ವದ ಕೃತಿ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಯಶವಂತ ಚಿತ್ತಾಲ
(03 August 1928 - 22 March 2014)

ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು ಯಶವಂತ ಚಿತ್ತಾಲ.  ಅವರೊಬ್ಬ ಮಹತ್ವದ ಲೇಖಕ. ನವ್ಯ ಸಾಹಿತ್ಯದ ಪ್ರಮುಖ ಕತೆಗಾರ ಚಿತ್ತಾಲರು ಕತೆ ಹೇಳುವುದರಲ್ಲಿ ಸಿದ್ಧಹಸ್ತರು. ಕತೆಗಳ ಮೂಲಕ ಬರವಣಿಗೆ ಆರಂಭಿಸಿದ ಯಶವಂತರ ಮೊದಲ ಕತೆ 'ಬೊಮ್ಮಿಯ ಹುಲ್ಲು ಹೊರೆ'. ಅವರ ಮೊದಲ ಕತೆಯನ್ನು ಕನ್ನಡದ ಮಹತ್ವದ ಕತೆಗಳಲ್ಲಿ ಒಂದು ಗುರುತಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹನೇಹಳ್ಳಿಯವರಾದ ಯಶವಂತ ಅವರು 1928ರ ಆಗಸ್ಟ್ 3ರಂದು ಜನಿಸಿದರು. ತಂದೆ ವಿಠೋಬ, ತಾಯಿ ರುಕ್ಕಿಣಿ. ಖ್ಯಾತ ಕವಿ ಗಂಗಾಧರ ಚಿತ್ತಾಲರು ಅವರ ಹಿರಿಯ ಸಹೋದರ. ಹನೇಹಳ್ಳಿ, ಕುಮಟೆ, ಧಾರವಾಡ, ಮುಂಬಯಿಗಳಲ್ಲಿ ...

READ MORE

Awards & Recognitions

Related Books