ಮೋಹದ ಮೂಟೆಯ ತೂತುಗಳು

Author : ಎಸ್‌. ಬಿ. ಜೋಗುರ

Pages 144

₹ 115.00
Year of Publication: 2017
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮ, ಕಲಬುರಗಿ- 585101

Synopsys

ಕತಾಲೋಕದಲ್ಲಿ ತನ್ನದೇಯಾದ ವಿಶಿಷ್ಟ ಶೈಲಿ ಮತ್ತು ಕಥನ ಕ್ರಮದಿಂದಲೇ ನಾಡಿನ ಸಾರಸ್ವತ ಲೋಕದ ಗಮನ ಸೆಳೆದ ಎಸ್.ಬಿ. ಜೋಗುರ ಅವರು ‘ಮೋಹದ ಮೂಟೆಯ ತೂತುಗಳು’ ಎನ್ನುವ ಈ ಸಂಕಲನದಲ್ಲಿ ವಿಭಿನ್ನ ವಸ್ತು, ವಿಷಯ ಮತ್ತು ತಂತ್ರಗಾರಿಕೆಯ ಮೂಲಕ ಗಮನ ಸೆಳೆದಿದ್ದಾರೆ. ಇಲ್ಲಿರುವ ಬಹುತೇಕ ಕತೆಗಳು ಓದುಗರಿಗೆ ಒಂದು ಬಗೆಯ ಆಪ್ತ ಮತ್ತು ಗಾಢ ಅನುಭವಗಳನ್ನು ನೀಡುತ್ತವೆ. ಸಂಕಲನದ ಬಹುತೇಕ ಕತೆಗಳ ಭಾಷೆ ಬಯಲು ಸೀಮೆಯದಾಗಿದ್ದು, ನಿರೂಪಣಾ ಕ್ರಮ ತೀರಾ ಅನನ್ಯವಾಗಿದೆ. ಈ ಕೃತಿಯಲ್ಲಿ ಅತ್ಯುತ್ತಮವಾದ ಕತೆಗಳನ್ನು ಒಳಗೊಂಡಿದ್ದು ಅನೇಕ ರೀತಿಯಿಂದ ವಿಶಿಷ್ಟವಾಗಿದೆ.

About the Author

ಎಸ್‌. ಬಿ. ಜೋಗುರ

ವೈಚಾರಿಕ ಬರಹಗಾರ ಎಸ್‌. ಬಿ. ಜೋಗುರ ಅವರುಕಥೆಗಳನ್ನೂ, ಕಾದಂಬರಿ, ಲೇಖನಗಳನ್ನು ಬರೆದಿದ್ದಾರೆ.ಇವರ  ನಿದರ್ಶನ' ಕಾದಂಬರಿಯು ಒಂದು ಕುಟುಂಬದ ಮೂರು ತಲೆಮಾರಿನ ಬದುಕನ್ನು ಕೇವಲ 147 ಪುಟಗಳಲ್ಲಿ ಅನಾವರಣಗೊಳಿಸಿದ ಕಾದಂಬರಿಯಾಗಿದೆ. ಅಸ್ಪಶ್ಯತೆಯೆಂಬ ವಿಷ ಕೂಸಿನ ಸುತ್ತ, ಓಡಿ ಹೋದ ಹುಡುಗ ಮರಳಿ ಬಂದ ಕಥೆ, ‘ಅಂತರಾಳದ ಮಾತು, ಇರದೇ ತೋರುವ ಬಗೆ’ ಅವರ ಮತ್ತೆರಡು ಕೃತಿಗಳು.  ಕತೆಗಾರ ಮತ್ತು ಪತ್ರಕರ್ತ ಎಸ್. ಬಿ. ಜೋಗುರ ಅವರು ಮೂಲತಃ ಸಿಂದಗಿಯವರು. ಧಾರವಾಡದಲ್ಲಿ ನೆಲೆಸಿದ್ದರು. ‘ಮುಗ್ಗಲು ಮನಸಿನ ಪದರು’ ಅವರ ಕತಾ ಸಂಕಲನ. ಸಿಂದಗಿಯಲ್ಲಿ ‘ಜೋಗುರ ಪತ್ರಿಕೆ’ ನಡೆಸುತ್ತಿದ್ದರು. ಕಾರವಾರದ ಕರಾವಳಿ ಮುಂಜಾವು ಪತ್ರಿಕೆ ...

READ MORE

Related Books