
‘ವಿಶ್ವನಾಥ ಕಾರ್ನಾಡರ ಆಯ್ದ ಕತೆಗಳು’ ವಿಶ್ವನಾಥ ಕಾರ್ನಾಡ್ ಅವರ ಕಥಾಸಂಕಲನವಾಗಿದೆ. ಮನುಷ್ಯ ಸಂಬಂಧಗಳಲ್ಲಿ ಎನೆಲ್ಲ ಇದ್ದರೂ ಎನೂ ಇಲ್ಲದೆ ಸೊನ್ನೆಗಳಾಗಿ ಬದುಕು ಸವೆಸುವ, ಪ್ರಾಮಾಣಿಕರಾಗಿರ ಬೇಕಾದ ಹಂಬಲ ಇದ್ದಷ್ಟೂ ಅದರಿಂದ ವಿಮುಖರಾಗಬೇಕಾದ ಅನಿವಾರ್ಯತೆ ಇರುತದೆ ಎಂಬುದನು ತಿಳಿಸುವ ಕಥಸಂಕಲನವಾಗಿದೆ.

ತುಳುನಾಡಿನ ಮುಲ್ಕಿ ಸಮೀಪದ ಕಾರ್ನಾಡಿನಲ್ಲಿ ಹುಟ್ಟಿದ ಡಾ. ಕೆ. ವಿಶ್ವನಾಥ ಕಾರ್ನಾಡರು (1940) ಓದಿಗೆ ಮತ್ತು ಉದ್ಯೋಗಕ್ಕಾಗಿ ಮುಂಬೈ ನಗರ ಸೇರಿದರು. ಕನ್ನಡ, ಇಂಗ್ಲಿಷ್ ಮತ್ತು ಇತಿಹಾಸ ಮೂರು ವಿಷಯಗಳಲ್ಲಿ ಎಂ.ಎ. ಮಾಡಿ, ಎಲ್. ಎಲ್.ಬಿ, ಬಿ.ಎಡ್.ಪದವಿ ಹಾಗೂ ಪಿಹೆಚ್.ಡಿ. ಪದವಿ ಪಡೆದಿದ್ದಾರೆ. ಮುಂಬೈಯ ಮಹರ್ಷಿ ದಯಾನಂದ ಕಾಲೇಜಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಮೂವತ್ತೈದು ವರ್ಷಗಳ ಕಾಲ ದುಡಿದು ನಿವೃತ್ತರಾಗಿದ್ದಾರೆ. ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ, ಎಂ.ಫಿಲ್ ಹಾಗೂ ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. 'ತುಳುವರ ಮುಂಬಯಿ ವಲಸೆ-ಸಾಂಸ್ಕೃತಿಕ ಅಧ್ಯಯನ' ಎಂಬ ಸಂಶೋಧನಾ ಕೃತಿಯೂ ಸೇರಿದಂತೆ ಒಂಬತ್ತು ಕಥಾ ...
READ MORE
ಹೊಸತು ಮೇ- 2002
ಇದು ಇಪ್ಪತ್ತೈದು ಕಥೆಗಳ ಸಂಕಲನ. ಪ್ರತಿ ಕ್ಷಣ ಕ್ಷಣಗಳಲ್ಲಿ ಆಯ್ದು ಕತೆಗಳ ನಡೆಯುವ ಘಟನೆಗಳೂ ಕಥೆಗೆ ವಸ್ತುಗಳೇ ಆಗಬಲ್ಲವು . ಚಲನಶೀಲ ಬದುಕನ್ನು ಹಿಡಿದು ನಿಲ್ಲಿಸಲಾಗದೆ ನಿರಂತರ ವಾಹಿನಿಗಳಾಗಿ ಕಥೆಗಳು ಮು೦ದುವರಿಯುತ್ತವೆ. ಮನುಷ್ಯ ಸಂಬಂಧಗಳಲ್ಲಿ ಏನೆಲ್ಲ ಇದ್ದರೂ ಏನೂ ಇಲ್ಲದೆ ಸೊನ್ನೆಗಳಾಗಿ ಬದುಕು ಸವೆಸುವ, ಪ್ರಾಮಾಣಿಕರಾಗಿರ ಬೇಕಾದ ಹಂಬಲ ಇದ್ದಷ್ಟೂ ಅದರಿಂದ ವಿಮುಖರಾಗಬೇಕಾದ ಅನಿವಾರ್ಯತೆ - ಇವೆಲ್ಲ ಇಲ್ಲಿನ ಕಥಾವಸ್ತುಗಳು.
