ಎಲ್ಲರ ಮನೆ

Author : ವಿರೂಪಾಕ್ಷ ದೇವರಮನೆ

Pages 112

₹ 120.00




Year of Publication: 2019
Published by: ಸಾವಣ್ಣ ಎಂಟರ್‌ಪ್ರೈಸಸ್
Address: ಬಸವನಗುಡಿ, ಬೆಂಗಳೂರು

Synopsys

ವಿರುಪಾಕ್ಷ ದೇವರಮನೆ ಅವರು ಬರೆದಿರುವ ಕಥಾ ಸಂಕಲನ”ಎಲ್ಲರ ಮನೆ’. ಹೆಸರೇ ಹೇಳುವಂತೆ ಇಲ್ಲಿನ ಕತೆಗಳು ನಮ್ಮ ನಿಮ್ಮಲ್ಲರ ಮನೆಯದ್ದೂ ಆಗಿರಬಹುದು. ಬರಹಗಾರ ಜೋಗಿ ಅವರು ಈ ಕೃತಿಯ ಕುರಿತು ’ದೇವರಮನೆಯಿಂದ ಮನಸಿನ  ಅರಮನೆಗೆ. ಏನನ್ನೂ ಹೇಳದೇ ಎಲ್ಲವನ್ನೂ ಹೇಳುವ ಕತೆಗಳೆಂದರೆ ನನಗಿಷ್ಟ. ನಮ್ಮನ್ನು ಅನಾದಿಕಾಲದಿಂದ ಪೊರೆಯುತ್ತಾ ಬಂದದ್ದು ಇಂಥ ಪುಟ್ಟ ಪುಟ್ಟ ಕತೆಗಳೇ. ಅವನ್ನು ದೂರದಿಂದಲೇ ತೋರಿಸಿ ನಮ್ಮ ಕಣ್ಣು ಅವುಗಳ ಮೇಲೆ ಕೀಲಿಸುವಂತೆ ಮಾಡುವುದಕ್ಕೆ ಕಥನಕಾರರು ಬೇಕು.
ಡಾ. ವಿರೂಪಾಕ್ಷ ದೇವರಮನೆ, ತಾವು ಬದುಕಿನಲ್ಲಿ ಕಂಡ, ಗ್ರಹಿಸಿದ, ಊಹಿಸಿದ, ನಡೆದ, ನಡೆಯಬಹುದಾದ, ಮನಸ್ಸಿನೊಳಗೇ ನಡೆದ ಘಟನೆಗಳಿಗೆ ಕಥೆಯ ರೂಪ ಕೊಟ್ಟಿದ್ದಾರೆ. 
ಇದೊಂದು ರೀತಿಯಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಥರದ ಕತೆಗಳು. ನಮ್ಮೊಳಗನ್ನು ಅವರು ಕಥೆಯೆಂಬ ಮಾಪನದಲ್ಲಿ ಸ್ಕ್ಯಾನ್ ಮಾಡಿ, ನಿಮ್ಮ ಒಳಗಿರುವುದು ಇದು ಅಂತ ಹೇಳುತ್ತಾರೆ. ಅದಕ್ಕೆ ಚಿಕಿತ್ಸೆ ಮಾಡಿಕೊಳ್ಳಬೇಕಾದವರು ನಾವು. ಇವತ್ತು ನಮಗೆ ಎರಡು ಥರದ ಕನ್ನಡಿಯೂ ಬೇಕು. ಹೊರಗಿನದನ್ನು ತೋರುವ ಪಾರದರ್ಶಕವಾದ ಕಿಟಕಿಯ ಗಾಜು, ನಮ್ಮನ್ನೇ ನಮಗೆ ತೋರುವ ಒಂದು ಬದಿಗೆ ಪಾದರಸ ಬಳಿದ ಕನ್ನಡಿ ಗಾಜು. ಈ ಕತೆಗಳು ಏಕಕಾಲಕ್ಕೆ ಕಿಟಕಿಯೂ ಹೌದು, ಕನ್ನಡಿಯೂ ಹೌದು’ ಎಂದಿರುವುದು ಈ ಕೃತಿಯ ವಿಶೇಷತೆಯನ್ನು ತಿಳಿಸುತ್ತದೆ. 

About the Author

ವಿರೂಪಾಕ್ಷ ದೇವರಮನೆ

ವಿರೂಪಾಕ್ಷ ದೇವರಮನೆ ಮೂಲತಃ ಹೊಸಪೇಟೆಯ ನಾಗೇನಹಳ್ಳಿಯವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಹಾಗೂ ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಮನೋವೈದ್ಯಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು 2008ರಿಂದ ಉಡುಪಿಯ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಲೇಖಕರಾದ ವೈದ್ಯರು ಮಾನವ ಸಂಬಂಧಗಳು, ಸಂಬಂಧಗಳಲ್ಲಿ ಸಂವಹನ ಹಾಗೂ ಸಾಮರಸ್ಯ, ಪೇರೆಂಟಿಂಗ್, ಮಕ್ಕಳ ಆರೈಕೆ ಹಾಗೂ ಪೋಷಣೆ ಕುರಿತು ಹಾಗೂ ಉಪನ್ಯಾಸಗಳ ಮೂಲಕ ಪರಿಚಿತರು. ಮಕ್ಕಳು, ಹದಿಹರೆಯದವರು ಮತ್ತು ಯುವಜನತೆಯ ಶಿಕ್ಷಣ, ಬೆಳವಣಿಗೆ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಆಸಕ್ತಿ ಹೊಂದಿದ್ದು ಮದ್ಯವ್ಯಸನಿಗಳ ಮಕ್ಕಳಿಗಾಗಿ ...

READ MORE

Reviews

ಮನೋಕಥನಗಳು

ಮನಶಾಸ್ತ್ರೀಯ ಸಮಸ್ಯೆಗಳನ್ನು ವಿಶ್ಲೇಷಿಸುವ ಬರಹಗಳ ಮೂಲಕ ಪುಚಿತರಾಗಿರುವ ಡಾ. ವಿರೂಪಾಕ್ಷ ಈಗಾಗಲೇ ಮಕ್ಕಳಃತ್ರ ಮಾತಾಡಿ ಪ್ಲೀಸ್‌, ನೀನಿಲ್ಲದೆ ನನಗೇನಿದೆ ಕೃತಿಗಳ ಮೂಲಕ ಜನಪ್ರಿಯರಾಗಿರುವವರು. ಮಾನವ ಸಂಬಂಧಗಳ ಸಂವರ್ಧನೆಯ ಹಾಗೂ ಕೌಟುಂಬಿಕ-ಸಾಮಾಜಿಕ ಸಾಮರಸ್ಯದ ಅಗತ್ಯ ಕುರಿತಂತೆ ಪರಿಣಾಮಕಾರಿ ಸಲಹೆ-ಸೂಚನೆಗಳನ್ನು ನೀಡುವ ಮೂಲಕ ದಿನನಿತ್ಯದ ಹತ್ತುಹಲವು ಮನೋದೈಹಿಕ ತೊಳಲಾಟಗಳಿಗೆ ಪರಿಹಾರ ಕಾಣಿಸುವ ಕೆಲಸವನ್ನು ನಿರ್ವಹಿಸುತ್ತ ಬಂದಿರುವ ಮನೋವೈದ್ಯ ಅವರು. ಈಗ ಪ್ರಕಟವಾಗಿರುವ ’ಎಲ್ಲರ ಮನೆ’ಯಲ್ಲಿ ಬದುಕಿನ ಯಶಸ್ಸೆಂದರೆ ಪರಿಪೂರ್ಣರೊಂದಿಗೆ ಜೀವಿಸುವುದಲ್ಲ ನಮ್ಮ ಹಾಗೂ ಇತರರ ಅಪೂರ್ಣತೆಗಳ ಜೊತೆಗೂ ಆನಂದವಾಗಿರುವುದು' ಎಂಬ ಸಕಾರಾತ್ಮಕ ಸಂದೇಶವನ್ನೊಳಗೊಂಡ 36 ಸಣ್ಣ ಸಣ್ಣ ಕಥೆಗಳಿವೆ. “ ’ಎಲ್ಲರ ಮನೆ ದೋಸೆಯ ತೂತೇ' ಎನಿಸಿದರೂ ತೂತುಗಳನ್ನು ವೀಕ್ಷಿಸುತ್ತ ಆಯಸ್ಸು ಕಳೆಯುವುದಕ್ಕಿಂತ ಬದುಕನ್ನು ಆಪ್ತಗೊಳಿಸುವುದರಲ್ಲಿ ಸಾರ್ಥಕತೆಯಿದೆ'' ಎಂದು ಈ ಪುಟ್ಟ ಪುಟ್ಟ ಕಥೆಗಳು ನಿತ್ಯ ಸಂಸಾರದಲ್ಲಿ ಕಾಣಿಸಿಕೊಳ್ಳುವ ಅಪಾರ್ಥಜನ್ಯ ಅಥವಾ ಅಹಂಜನ್ಯ ಸಂಘರ್ಷಗಳನ್ನು

ಹೇಗೆ ನಿವಾರಿಸಿಕೊಳ್ಳಬಹುದೆಂಬುದನ್ನು ರೂಪಕಸದೃಶವಾಗಿ ತಿಳಿಸಿಕೊಡುತ್ತಲೇ ಶಿಕ್ಷಣ, ಉದ್ಯೋಗ ಇತ್ಯಾದಿ ಕರ್ತವ್ಯ ಕ್ಷೇತ್ರಗಳಲ್ಲಿನ ಮಾನಸಿಕ ತೊಳಲಾಟಗಳಿಗೆ ಬೇಕಾದ ಔಷಧಿ ನಮ್ಮೊಳಗೇ ಇದೆ ಎಂಬ ಕಿವಿಮಾತನ್ನು ; ನಮ್ಮ ಮುಖವಾಡಗಳ ಹಿಂದಿನ ನೈಜ ಚಹರೆಯನ್ನು ಎಲ್ಲರಿಗಿಂತ ಮುಂಚಿತವಾಗಿ ಗುರುತಿಸಬೇಕಾದವರು ನಾವೇ ಎಂಬ ಹಿತವಚನವನ್ನು ಮಿತ್ರಸಮ್ಮಿತ ಶೈಲಿಯಲ್ಲಿ ನೀಡುತ್ತವೆ. ಸರಾಗವಾಗಿ ಓದಿಸಿಕೊಂಡು ಹೋಗುವ ಈ ಕಿರುಕತೆಗಳ ಹಿಂದಿನ ಮುಖ್ಯ ಕಾಳಜಿ, ಬದುಕು ಸೀದುಹೋಗುವ ಮುನ್ನವೇ ಅದನ್ನು ಮಗುಚಿಹಾಕಿ ಸಮಸ್ಯೆಯ ಇನ್ನೊಂದು ಮುಖದ ದರ್ಶನ ಮಾಡಿದರೆ ಸಮಸ್ಯೆಗೆ ಪರಿಹಾರ ಅಸಾಧ್ಯವೇನಲ್ಲ ಎಂಬುದೇ ಆಗಿದೆ. ಇಂಥ ಸಕಾರಾತ್ಮಕ ದೃಷ್ಟಿಕೋನವೇ ಈ ಕತೆಗಳನ್ನು ಮತ್ತೆ ಮತ್ತೆ ಓದಿಕೊಳ್ಳುವಂತೆ ಮಾಡುತ್ತದೆ.

ಜಕಾ 01 ಡಿಸೆಂಬರ್‌ 2019

ಕೃಪೆ : ಉದಯವಾಣಿ

Related Books