ಕಥಾಜಗತ್ತು

Author : ಎಸ್. ದಿವಾಕರ್‌

Pages 572

₹ 288.00




Year of Publication: 2009
Published by: ಪ್ರಿಸಮ್ ಬುಕ್ಸ್ ಪ್ರೈ ಲಿ
Address: ನಂಬರ್ 53, 1ನೇ ಮಹಡಿ, 30ನೇ ತಿರುವು, 9ನೇ ಮುಖ್ಯರಸ್ತೆ, ಬನಶಂಕರಿ, ಬೆಂಗಳೂರು- 560070
Phone: 8026714108

Synopsys

ನೊಬೆಲ್ ಪ್ರಶಸ್ತಿ ಪುರಸ್ಕೃತ 50 ಸಾಹಿತಿಗಳ ಕಥೆಗಳನ್ನು ಇಲ್ಲಿ ಅನುವಾದಿಸಿ, ಸಂಪಾದಿಸಿದ ಕೃತಿ-ಕಥಾ ಜಗತ್ತು. ಸಾಹಿತಿ ಎಸ್. ದಿವಾಕರ ಅವರು ಸಂಪಾದಕರು. ವಸ್ತು ವೈವಿಧ್ಯತೆ, ನಿರೂಪಣಾ ಶೈಲಿಯ ವೈವಿಧ್ಯತೆ, ಪಾತ್ರಗಳ ಸೃಷ್ಟಿಯಲ್ಲಿ ಆಕರ್ಷಣೆ ಹೀಗೆ ಪ್ರತಿ ಕಥೆಯೂ ವಿಶಿಷ್ಟ. ಬೇರೆ ಬೇರೆ ದೇಶ-ಕಾಲಘಟ್ಟದಲ್ಲಿ ಕಥೆಗಳು ಪಡೆಯುವ ರೂಪುಗಳು, ಸನ್ನಿವೇಶಗಳು ವಿಭಿನ್ನ. ಇಂತಹ ಸಂಗತಿಗಳ ಕೂಲಂಕಷ ಅಧ್ಯಯನಕ್ಕೆ ಈ ಕೃತಿಯು ಉತ್ತಮ ಆಕರ ಗ್ರಂಥವಾಗಿಯೂ ಗಮನ ಸೆಳೆಯುತ್ತದೆ. ವಾಸ್ತವವಾದ, ನೈಸರ್ಗಿಕವಾದ, ಪ್ರತೀಕವಾದ, ಐಂದ್ರಜಾಲಿಕ ವಾಸ್ತವವಾದ, ಅದ್ಭುತ ರಮ್ಯ ಹೀಗೆ ವೈವಿಧ್ಯತೆಯನ್ನೂ ಇಲ್ಲಿ ಗುರುತಿಸಬಹುದು.

About the Author

ಎಸ್. ದಿವಾಕರ್‌
(28 November 1944)

ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು.  ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್‌, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು. ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ  ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ...

READ MORE

Awards & Recognitions

Related Books