ಜೀವನದಿ

Author : ಸಿ.ಎಸ್. ಆನಂದ

Pages 104

₹ 60.00




Year of Publication: 2013
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮು, ಕಲಬುರಗಿ-585101
Phone: 9448124431

Synopsys

ಲೇಖಕ ಸಿ.ಎಸ್. ಆನಂದ ಅವರ ಕಥಾ ಸಂಕಲನ-ಜೀವನದಿ. ಡಾ. ಬಸವರಾಜ ಸಬರದ ಅವರು ಕೃತಿಗೆ ಬೆನ್ನುಡಿ ಬರೆದು ‘ವಾಸ್ತವದಲ್ಲಿ ನಾವಿಂದು ಮುನ್ನಡೆಯುತ್ತಿರುವ ಅಸಹಾಯಕತೆ, ಸೋಗಲಾಡಿತನ, ತಳಮಳ, ಸಂಕಟ, ವಂಚನೆ, ವಿಕೃತ ಮನಸ್ಸಿನ ಹಲವಾರು ಮುಖಗಳ ಹರಿಯುವಿಕೆಯ ಪ್ರತಿರೂಪವೇ ಈ ‘ಜೀವನದಿ’ಯಾಗಿದೆ.ಬದುಕಿನಲ್ಲಿ ದ್ವಂದ್ವಗಳು ಹುಟ್ಟಿಸುವ ತಲ್ಲಣ, ಮೌಲ್ಯಗಳ ಭ್ರಷ್ಟತೆಯಿಂದ ಉಂಟಾದ ಆಘಾತಗಳು, ಪ್ರೀತಿಯ ಹಿಂದಿನ ವಂಚನೆಗಳು, ಕೌಟುಂಬಿಕ ಸಂಬಂಧಗಳ ಒಡಕಿಗೆ ಬೇಸರ, ಸಾಮಾಜಿಕ ಸಂಬಂಧಗಳ ಕಪಟಗಳ ಬಗ್ಗೆ ವಿರೋಧ ಹೀಗೆ ಇವೆಲ್ಲವನ್ನೂ ಕಥೆಯಾಗಿಸುವ ಪರಿ ಗಮನಾರ್ಹ. ಬದುಕಿನ ವಿರೋಧಾಭಾಸಗಳು ಕಥೆಗಾರನನ್ನು ಆಳವಾಗಿ ಕೆದಕಿವೆ. ಉತ್ತರ ಕರ್ನಾಟಕದ ಪ್ರಾದೇಶಿಕ ಭಾಷೆಯ ಸೊಗಡಿನಿಂದ ಕಥೆ ಹೆಣೆಯುವಲ್ಲಿ ವಿಶಿಷ್ಟ ಪ್ರಾವಿಣ್ಯತೆಯನ್ನು ಲೇಖಕರು ತೋರಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

 

About the Author

ಸಿ.ಎಸ್. ಆನಂದ

ಯುವ ಸಾಹಿತಿ ಸಿ.ಎಸ್. ಆನಂದ: ಮೂಲತಃ ಕಲಬುರಗಿಯವರು. ವೃತ್ತಿಯಿಂದ ಇಂಗ್ಲಿಷ್ ಉಪನ್ಯಾಸಕರು. ಇವರ ಕಥೆ, ಕವನ, ಪ್ರಬಂಧ, ವಿಮರ್ಶಾತ್ಮಕ ಲೇಖನಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಾಸ್ತವದ ಮತ್ತು ಸಂಕೇತವಾದದ ಪದರುಗಳ ಪರಿಮಿತಿಯನ್ನು ತಮ್ಮ ಕಥೆ-ಕಾವ್ಯದಲ್ಲಿ ಬಹಳ ಸುಲಭವಾಗಿ ಮೀರಲೆತ್ನಿಸುತ್ತ ಮುನ್ನಡೆಸಿದ್ದಾರೆ. ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಸುಮಾರು ಮೂವತ್ತೂ ಹೆಚ್ಚು ಭಾಷಣಗಳು, ಕಲಬುರಗಿ ದೂರದರ್ಶನ ಕೇಂದ್ರ ಮತ್ತು ಬೆಂಗಳೂರು ದೂರದರ್ಶನ ಚಂದನ ವಾಹಿನಿಯಲ್ಲಿ ಇವರ ಸಂದರ್ಶನಗಳು ಪ್ರಸಾರಗೊಂಡಿವೆ. ಕೃತಿಗಳು:  ಹಡೆದವ್ವ, ಜೀವನದಿ ( ಕಥಾಸಂಕಲನಗಳು), ಒಡಲಹಾಡು, ಮಧುರ ಹನಿಗಳು (ಕವನ ಸಂಕಲನಗಳು) ತಲ್ಲಣಿಸದಿರು ಮನವೆ (ವಚನಗಳ ಸಂಕಲನ), ಬಸವನಾಡಿನ ಬೆಳಕು (ಜಾನಪದ ತ್ರಿಪದಿಗಳ ಸಂಕಲನ), ಸಂಪ್ರೀತಿ (ಮುಕ್ತಕಗಳ ...

READ MORE

Related Books