ಸೀತಾಳೆದಂಡೆಯ ಸದ್ದಿಲ್ಲದ ಕಥೆಗಳು

Author : ಭಾರತಿ ಹೆಗಡೆ

Pages 248

₹ 220.00
Year of Publication: 2019
Published by: ವಿಕಾಸ ಪ್ರಕಾಶನ
Address: #1541, 16ನೇ ಮುಖ್ಯರಸ್ತೆ, ಎಂ. ಸಿ. ಲೇಔಟ್‌, ವಿಜಯನಗರ, ಬೆಂಗಳೂರು-40
Phone: 9900095204

Synopsys

’ಸೀತಾಳೆದಂಡೆಯ ಸದ್ದಿಲ್ಲದ ಕಥೆಗಳು’ ಭಾರತಿ ಹೆಗಡೆ ಅವರ ಮೊದಲ ಪುಸ್ತಕವಲ್ಲದಿದ್ದರೂ ಮೊದಲ ಕಥಾ ಸಂಕಲನ. ಇಲ್ಲಿ ಆಯ್ದುಕೊಂಡಿರುವ ವಸ್ತು, ಪಾತ್ರಗಳು, ಪರಿಸರ, ನಿರೂಪಣೆಯ ತಂತ್ರ ಎಲ್ಲವೂ ಭಿನ್ನವಾದದ್ದು. ಒಂದು ರೀತಿಯಿಂದ ಸಂಪ್ರದಾಯವನ್ನು ಪ್ರಶ್ನಿಸುವ ಮಟ್ಟಕ್ಕೆ ಯಾವುದೇ ಕಥೆಗಳು ಏರುವುದಿಲ್ಲ. ಬದಲಿಗೆ, ಆ ಸಂಪ್ರದಾಯಗಳು ಆಯಾ ಪಾತ್ರಗಳಿಗೆ ಸರಿಯಾಗಿ ವರ್ತಿಸದಿದ್ದಾಗ ಆಗುವ ಘರ್ಷಣೆಯನ್ನೂ, ಆ ಪಾತ್ರಗಳು ನಿಭಾಯಿಸುವ ರೀತಿಯನ್ನು ಲೇಖಕರು ಸಶಕ್ತವಾಗಿ ನಿರೂಪಿಸಿದ್ದಾರೆ. ಬೌದ್ಧಿಕ ಹಾಗೂ ಭಾವಾತಿರೇಕವೂ ಅಲ್ಲದ ಆದರೆ, ವ್ಯವಸ್ಥೆಯ ವಿರುದ್ಧ ತಮ್ಮದೇ ರೀತಿ ಸಿಡಿಯುವ ಪಾತ್ರಗಳು ಓದುಗರೊಂದಿಗೆ ಮುಖಾಮುಖಿಯಾಗುತ್ತವೆ.

 

 

About the Author

ಭಾರತಿ ಹೆಗಡೆ
(01 April 1969)

ಪತ್ರಕರ್ತೆ, ಕವಯತ್ರಿ ಭಾರತಿ ಹೆಗಡೆಯವರ ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ಸದ್ಯ ಬೆಂಗಳೂರಿನಲ್ಲಿ ವಾಸವಿದ್ದಾರೆ. ಪ್ರಸ್ತುತ ಸೆಲ್ಕೋ ಫೌಂಡೇಶನ್ ನಲ್ಲಿ ಪ್ರೊಗ್ರಾಮ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಸಿನಿಮಾದಲ್ಲಿ ಮಹಿಳೆಯರ ಕುರಿತಾದ ಬರಹಗಳ ಸಂಗ್ರಹ ‘ಮೊದಲ ಪತ್ನಿಯ ದುಗುಡ’ ಪುಸ್ತಕವನ್ನು ಪ್ರಕಟಿಸಿದ್ದಾರೆ. ...

READ MORE

Related Books