ತುದಿಯೆಂಬೋ ತುದಿಯಿಲ್ಲ

Author : ರಾಘವೇಂದ್ರ ಪಾಟೀಲ

Pages 544

₹ 300.00




Year of Publication: 2009
Published by: ಆನಂದಕಂದ ಗ್ರಂಥಮಾಲೆ
Address: ಮಲ್ಲಾಡಿಹಳ್ಳಿ, ಕರ್ನಾಟಕ - 577531
Phone: 9480455604

Synopsys

‘ತುದಿಯೆಂಬೋ ತುದಿಯಿಲ್ಲ’ ಹಿರಿಯ ಲೇಖಕ ರಾಘವೇಂದ್ರ ಪಾಟೀಲರ 2009ರ ವರೆಗಿನ ಕಥೆಗಳ ಸಂಕಲನ. ಇಲ್ಲಿ ಒಡಪುಗಳು ಸಂಕಲನದಿಂದ ಒಡಪುಗಳು, ನೀನು, ಕೆಮಿಲಿಯಾನ್ ಮಾತ್ತು ಸಾಪೇಕ್ಷತೆ, ತಪ್ಪೊಪ್ಪಿಗೆ, ಅಂತರಗಂಗಿ, ಬೆತ್ತಲು, ಬ್ಯಾಟ್ಸ್..ಬ್ಯಾಟ್ಸ್, ಗಿಡ ಕಡಿಯಾಕ ಹೋದದ್ದು, ಸುಂಕದ ಪಟ್ಟಣದ ಪಟೇಲರು, ಆಶಾ ಮೇಡಂ ಎಂಬ ಕತೆಗಳಿವೆ. ಹಾಗೇ ‘ಪ್ರತಿಮೆಗಳು’ ಸಂಕಲನದ ‘ಪ್ರತಿಮೆಗಳು’, ‘ಡುಂ-ಡುಮಕ್’, ‘ಮಾಧುರಿ’, ‘ಜೈಲಿನಲ್ಲಿ’, ‘ಕಾಡಜ್ಜ’, ‘ನಿರೀಕ್ಷೆಗಳು’, ‘ಕನಸುಗಳೇ ಹಾಗೆ’ ಹಾಗೂ ‘ಬಸತ್ತಿ’ ಕಥೆಗಳು ಸಂಕಲನಗೊಂಡಿವೆ. ಹಾಗೇ ‘ದೇಸಗತಿ’ ಸಂಕಲನದ ‘ಕಥಿಯ ಹುಚ್ಚಿನ ಕರಿಟೊಪಿಗಿಯ ರಾಯ’, ‘ದೇಸಗತಿ’, ‘ಒಂದು ಸೊಲಿಗಿ ಗೋದಿ’, ‘ಬೆಳ್ಳಕ್ಕಿಗಳ ಲೋಕದಲ್ಲಿ’, ‘ಉರುಳುವ ಗಾಲಿ..ಗುಡು ಗುಡು ಮುಗಿಲು’ ಹಾಗೂ ‘ಲಯ’ ಎಂಬ ಕಥೆಗಳು ಸಂಕಲನಗೊಂಡಿವೆ. ಹಾಗೇ ಮಾಯಿಯ ಮುಖಗಳು ಸಂಕಲನದ ಮಾಯಿಯ ಮುಖಗಳು, ದೀಬರ ದಿಂಡೀ ದೀಬರ ದೀಂಡಿ ಕುಬಸಾ ಎಲ್ಲಿಟ್ಟೆ...ತುದಿಯೆಂಬೋ ತುದಿಯಿಲ್ಲ ಕಥೆಗಳು ಸಂಕಲನಗೊಂಡಿವೆ. ಜೊತೆಗೆ ಇಷ್ಟೂ ಸಂಕಲನಗಳ ಮುನ್ನುಡಿಯಲ್ಲಿ ಈ ಕೃತಿಯಲ್ಲಿ ಸಂಕಲನ ಮಾಡಿದ್ದಾರೆ.

About the Author

ರಾಘವೇಂದ್ರ ಪಾಟೀಲ
(16 April 1951)

ಕನ್ನಡದ ಸೃಜನಶೀಲ ಬರಹಗಾರ ರಾಘವೇಂದ್ರ ಪಾಟೀಲರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನವರು. ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಅಧ್ಯಾಪಕ, ಪ್ರಾಂಶುಪಾಲರಾಗಿಯೂ ದುಡಿದವರು. ಬಾಲ್ಯದಿಂದಲೂ ಬರೆಹದ ತುಡಿತವಿದ್ದ ಅವರು ಕಥಾರಚನೆಯಿಂದ ಕಾದಂಬರಿ, ಪ್ರವಾಸಸಾಹಿತ್ಯ, ವಿಮರ್ಶೆ ಇನ್ನಿತರ ಪ್ರಕಾರಗಳತ್ತ ವಿಸ್ತಾರಗೊಂಡು ಹಲವು ಕೃತಿಗಳನ್ನು ರಚಿಸಿದ್ದಾರೆ.  ‘ಒಡಪುಗಳು, ಪ್ರತಿಮೆಗಳು, ಮಾಯಿಯ ಮುಖಗಳು, ದೇಸಗತಿ’ ಅವರ ಕತಾ ಸಂಕಲನಗಳಾದರೆ ‘ಬಾಳವ್ವನ ಕನಸುಗಳು, ತೇರು’ ಕಾದಂಬರಿಗಳು. ಜೊತೆಗೆ ಆನಂದಕಂದರ ಬದುಕು-ಬರಹ, ವಾಗ್ವಾದ ಅವರ ವಿಮರ್ಶಾಕೃತಿಗಳು. ಕಥೆಯ ಹುಚ್ಚಿನ ಕರಿಟೊಪಿಗಿಯರಾಯ, ತುದಿಯೆಂಬ ತುದಿಯಿಲ್ಲ ಪಾಟೀಲರ  ನಾಟಕಗಳು, ಇವರ ತೇರು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.  ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ...

READ MORE

Related Books