ಪಂಜೆ ಮಂಗೇಶರಾಯರ ಕತೆಗಳು

Author : ಪಂಜೆ ಮಂಗೇಶರಾಯ

Pages 224

₹ 195.00
Year of Publication: 2015
Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100/ 26617755

Synopsys

ಕನ್ನಡ ನವೋದಯ ಸಾಹಿತ್ಯದಲ್ಲಿ ಪ್ರಮುಖರಾದ ಪಂಜೆ ಮಂಗೇಶರಾಯರು ರಚಿಸಿರುವ ಕಥೆಗಳ ಒಟ್ಟು ಸಂಗ್ರಹ ರೂಪವೇ ’ ಪಂಜೆ ಮಂಗೇಶರಾಯರ ಕತೆಗಳು’.  ಈ ಪುಸ್ತಕವು ಮೊದಲಿಗೆ 1973 ರಲ್ಲಿ ಮೊದಲ ಮುದ್ರಣ ಕಂಡಿತ್ತು. ಅಂಕಿತ ಪುಸ್ತಕವು 2015 ರಲ್ಲಿ ಇವರ ಒಟ್ಟು ಕತೆಗಳನ್ನು ಸಂಪಾದಿಸಿ 2015 ರಲ್ಲಿ ಮರು ಮುದ್ರಿಸಿದೆ.

ಕನ್ನಡಕ್ಕೆ ಅನೇಕ ಹೊಸದನ್ನು ಕಾಣ್ಕೆಯಾಗಿ ತಂದ ಪಂಜೆ ಮಂಗೇಶರಾಯರು ಸುತ್ತಿನ ತುಳು, ಕೊಂಕಣಿ, ಕೊಡವ, ಭಾಷಿಕ ಸಂಸ್ಕೃತಿಯನ್ನು ಕನ್ನಡದೊಂದಿಗೆ ಒಂದಾಗಿಸಿದರು. ಶಾಲೆಗಳಲ್ಲಿ ಮಕ್ಕಳನ್ನು ಕುಣಿಸಿ, ತಾವೂ ಕುಣಿದು ಅವರ ಮನಸ್ಸನ್ನು ಅರಳಿಸಿದವರು. ಮಕ್ಕಳಿಗಾಗಿ ಹಾಡು, ಕತೆ, ಬರೆದವರು.

About the Author

ಪಂಜೆ ಮಂಗೇಶರಾಯ
(22 February 1874 - 24 October 1937)

ಪಂಜೆ ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ 1874 ಫೆಬ್ರುವರಿ 22 ರಂದು ಜನಿಸಿದರು. ಬಂಟ್ವಾಳದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮಂಗಳೂರಿನಲ್ಲಿ ಇಂಟರ್‌ ಮೀಡಿಯೇಟ್‌ ಶಿಕ್ಷಣ ಪಡೆದರು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು.  ಮಂಗೇಶರಾಯರ ಪ್ರಮುಖ ಕೃತಿಗಳೆಂದರೆ ಪಂಚಕಜ್ಜಾಯ, ಹುತ್ತರಿಹಾಡು, ತೆಂಕಣಗಾಳಿಯಾಟ (ಕವನ ಸಂಕಲನ), ಐತಿಹಾಸಿಕ ಕಥಾವಳಿ, ಕೋಟಿ ಚನ್ನಯ, ಅಜ್ಜಿ ಸಾಕಿದ ಮಗ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. 1937 ಅಕ್ಟೋಬರ್ 24 ರಂದು ಮಂಗೇಶರಾಯರು ನಿಧನರಾದರು. ...

READ MORE

Related Books