ಬೇಲಿ ಹೂ

Author : ವಿ ನಿಶಾ ಗೋಪಿನಾಥ್

Pages 138

₹ 150.00
Year of Publication: 2016
Published by: ಶಬ್ದಗುಣ ಪ್ರಕಾಶನ
Address: ವಿಟ್ಟಲವಾಡಿ, ವಡೇರಾ ಹೋಬಳಿ, ಕುಂದಾಪುರ -576201 ಉಡುಪಿ ಜಿಲ್ಲೆ.
Phone: 9449105052

Synopsys

ವಿ. ನಿಶಾ ಗೋಪಿನಾಥ ಅವರು ಬರೆದ ಕಥಾ ಸಂಕಲನ-ಬೇಲಿ ಹೂ. ಈ ಎಲ್ಲ ಕಥೆಗಳ ಒಂದು ಪ್ರಮುಖ ಅಂಶವೆಂದರೆ ದಮನಿತರ, ನಿರಾಕರಣೆಗೊಂಡವರ ನೆಲೆಯಲ್ಲಿ ಪಾತ್ರಗಳು ಸಾಗುವುದು. ಸಮಾಜದ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಕೆಳಗೆ ತಳ್ಳಲ್ಪಟ್ಟ ಮಹಿಳೆಯರ ಪ್ರಜ್ಞೆಯನ್ನು ಬಡಿದೆಚ್ಚರಿಸುವ ಬೇಗುದಿಯನ್ನು ಇಲ್ಲಿಯ ಕಥೆಗಳು ತೆರೆದಿಡುತ್ತವೆ. ಒಟ್ಟು 11 ಕಥೆಗಳ ಈ ಸಂಕಲನ ಓದುಗರನ್ನು ಪರಿಣಾಮಕಾರಿಯಾಗಿ  ತಟ್ಟುತ್ತದೆ.

About the Author

ವಿ ನಿಶಾ ಗೋಪಿನಾಥ್

ಕವಯತ್ರಿ ವಿ ನಿಶಾ ಗೋಪಿನಾಥ್ ಅವರು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸೊಣ್ಣನಾಯಕನ ಹಳ್ಳಿಯವರು. ಪ್ರಸ್ತುತ  ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಪತ್ರಿಕೋದ್ಯಮದಲ್ಲಿ ಪದವೀಧರೆಯಾಗಿದ್ದು ಇನ್ನೋವೆಟಿವ್‌ ಸಿಸ್ಟಮ್ಸ್‌ನಲ್ಲಿ ಕೆಲವು ಕಾಲ ಕಂಪ್ಯೂಟರ್ ಅಧ್ಯಾಪಕಿಯಾಗಿ ಕೆಲಸ ಮಾಡಿದ್ದಾರೆ. ಮಯೂರ, ವಿಜಯ ಹಾಗೂ ಕಸ್ತೂರಿ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವವಿದ್ದು ನಾಡಿನ ಹಲವು ಪತ್ರಿಕೆಗಳಲ್ಲಿ ಅವರ ಕವಿತೆಗಳು ಪ್ರಕಟವಾಗಿವೆ. 'ಬೇಲಿ ಹೂ' ಅವರ ಮೊದಲ ಕಥಾ ಸಂಕಲನ. ಸಾಮಾಜಿಕ ಕಳಕಳಿ ಹೊಂದಿರುವ ನಿಶಾ ಗೋಪಿನಾಥ್, ಹಲವಾರು ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ‘ನೀಲಿ ನಕ್ಷತ್ರ’ ಅವರ ಕವನ ಸಂಕಲನ. ...

READ MORE

Related Books