ಪಿಂಗಳೇಶನ ಜಾತಕ

Author : ಬಸವರಾಜ್ ತೂಲಹಳ್ಳಿ

Pages 200

₹ 150.00
Year of Publication: 2016
Published by: ನಿವೇದಿತ ಪ್ರಕಾಶನ
Address: ನಂ. 3437, 1ನೇ ಮಹಡಿ, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀ ನಗರ, ಬನಶಂಕರಿ 2ನೇ ಹಂತ, ಬೆಂಗಳೂರು -28
Phone: 8050 917296

Synopsys

ಬಸವರಾಜ್ ತೂಲಹಳ್ಳಿ ಅವರ ಮೂರನೇ ಕಥಾ ಸಂಕಲನ ’ಪಿಂಗಳೇಶನ ಜಾತಕ’. ಮೊನಚಾದ ಭಾಷೆ, ಹಳ್ಳಿ ಸೊಗಡಿನ ಸಂಭಾಷಣೆಯನ್ನು ಲೇಖಕರು ತಮ್ಮ ಕಥೆಯುದ್ದಕ್ಕೂ ಕಟ್ಟಿಕೊಡುತ್ತಾರೆ.

ಈ ಸಂಕಲನಕ್ಕೆ ಹೆಸರಿಟ್ಟ ಮೊದಲಕತೆ ‘ಪಿಂಗಳೇಶನ ಜಾತಕ!’ ಇದೊಂದು ಕಿರುಕಾದಂಬರಿಯಂತಿದೆ. ತನ್ನ ಮಗ ಪಿಂಗಳ ಕವಿಯಾಗುವನೆಂಬ ಜಾತಕಫಲ ಕೇಳಿ ತಲೆಬಿಸಿಮಾಡಿಕೊಂಡ ತಂಗಳಪ್ಪ ಅವನು ದುಡ್ಡುಮಾಡುವ ಡಾಕ್ಟರ್‍ ಅಥವಾ ಇಂಜಿನಿಯರ್‍  ಆಗಲೆಂದು ಬಯಸುತ್ತಾನೆ.‘ಅಪ್ಪನ ಕನಸು’ಎಂಬ ತನ್ನ ಮೊದಲ ಕವನಸಂಕಲನ ಬಿಡುಗಡೆಮಾಡಿಸಲು ಹೊಲವನ್ನೆ ಮಾರಿ ಪಿಂಗಳನು ಕವಿಯಾಗುವಷ್ಟರಲ್ಲಿ ತಂಗಳ ಹೃದಯಾಘಾತದಿಂದ ಸತ್ತುಹೋಗಿರುತ್ತಾನೆ. ಅನಗತ್ಯ ವಿವರಗಳಲ್ಲಿ ವಿಹರಿಸುವ ಹಾಗೂ ವ್ಯಂಗ್ಯಗಳಿಂದ ತುಂಬಿ ತುಳುಕುವ ಕಥನ ಜಾಳಾಗಿ ಕಥಾ ವಸ್ತುವಿನ ಮೇಲೆ ಕೇಂದ್ರೀಕೃತವಾಗುತ್ತದೆ. ಇಲ್ಲಿರುವ ಅನೇಕ ಕತೆಗಳು ವಿಡಂಬನಾತ್ಮಕವಾಗಿಯೂ, ಸಾಮಾಜಿಕ ಕ್ರೌರ್ಯದ ಒಳಸುಳಿಗಳನ್ನು ಪರಿಚಯಿಸುತ್ತಾ ಸಾಗುತ್ತದೆ.

 

About the Author

ಬಸವರಾಜ್ ತೂಲಹಳ್ಳಿ

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ತೂಲಹಳ್ಳಿಯಲ್ಲಿ 1962 ರಲ್ಲಿ ಜನಿಸಿದರು. ಉಪಜೀವನಕ್ಕೆ ಕಿರಾಣಿ ಅಂಗಡಿ ನಿರ್ವಹಣೆಯ ಜತೆಗೇ ಮೈಸೂರು ವಿಶ್ವವಿದ್ಯಾಲಯದಿಂದ ’ಐ.ಸಿ.ಸಿ ಅಂಡ್ ಸಿ.ಇ’ ಮೂಲಕ ಪದವಿ ನಂತರ 1992 ರಲ್ಲಿ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿ. 1992 ರಿಂದ ದಾವಣಗೆರೆ, ಹರಪನಹಳ್ಳಿ, ಕೊಟ್ಟೂರುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 1996ರಲ್ಲಿ ಡಿಸೆಂಬರ್‍ ನಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಆಂಗ್ಲಭಾಷಾ ಉಪನ್ಯಾಸಕರಾಗಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯಿಂದ ನೇಮಕಗೊಂಡರು. ಪ್ರಸ್ತುತ ದಾವಣಗೆರೆ ಜಿಲ್ಲೆಯ ಹರಿಹರದ ದ.ರಾ.ಮ ಸರಕಾರೀ ...

READ MORE

Related Books