ಅಂಬಿಗ ಮತ್ತು ದಡ

Author : ಸಿ.ಎಚ್. ರಾಜಶೇಖರ್

Pages 205

₹ 135.00
Year of Publication: 2013
Published by: ಸೌಮ್ಯಶ್ರೀ ಪುಸ್ತಕ ಪ್ರಕಾಶನ
Address: #658, 3ನೇ ಅಡ್ಡ ರಸ್ತೆ, ಟೀಚರ್‍ಸ್ ಕಾಲೋನಿ, ಅನೇಕಲ್ ಮುಖ್ಯ ರಸ್ತೆ, ಚಂದಾಪುರ, ಬೆಂಗಳೂರು
Phone: 7829068573

Synopsys

ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ಅಂಬಿಗ ಮತ್ತು ದಡ. 25 ಬಿಡಿ ಸಂಪುಟಗಳನ್ನು ಒಳಗೊಂಡ ಸಮಗ್ರ ಬುದ್ಧ ಸಾಹಿತ್ಯ ಮಾಲೆ-19ರ ಕೃತಿ. ಜಗತ್ತಿನ ಸರ್ವ ಶ್ರೇಷ್ಠ ಕಥೆಗಳೆಂದು ಪರಿಗಣಿಸಲಾದ ಅಮರ ಜಾತಕ ಕಥೆಗಳನ್ನು ಇಲ್ಲಿ ಸಂಕಲಿಸಲಾಗಿದೆ. ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ. ಜೀವನ-ಬದುಕು-ಬಾಳು ಎಂಬಿತ್ಯಾದಿ ಸೂಕ್ಷ್ಮ ಪರಿಕಲ್ಪನೆಗಳ ವಿಶಾಲಾರ್ಥಗಳನ್ನು ತಿಳಿಯ ಪಡಿಸುತ್ತವೆ. ಈ ಕೃತಿಯು 36 ಕತೆಗಳನ್ನು ಒಳಗೊಂಡಿದ್ದು, ದ್ವೇಷ ತೀರಿದ ಬಳಿಕ ಸ್ನೇಹ ತರವಲ್ಲ, ದುಷ್ಪರಿಂದ ಅವಮಾನಿತರಾಗುವುದೇ ದುಃಖ, ಗೆಳೆಯ ಇದ್ಯಾವ ಜಂತು,  ವಿಶ್ವಾಸಕ್ಕೂ ಮಿಗಿಲು ರಸ ಉಂಟೆ, ನರಬಲಿಯಲ್ಲ ಶೀಲವೇ ಚಂದ, ಕುಮಾರಿ ನೀನು ಸುಖವೇ ಸರಿ ಆದರೆ,  ಚಾಡಿಗೂ ಮಿಗಿಲು ತೀಕ್ಷ್ಯ ಶಸ್ತ್ರಾಘಾತವಿಲ್ಲ, ರಾಜ ನೀನೇಕೆ ದುಃಖಿಸುತ್ತಿಲ್ಲ, ಶೋಕ ಶಲ್ಯಯ ಕಿತ್ತವನೇ ಜ್ಞಾನಿ, ಆಕೆ ಚಂದನವ ಲೇಪಿಸಿ ಕಾಯುತ್ತಿರುವಳು, ದಾಸಿ ನಿನ್ನ ಒಡೆಯನ ಸಾವಿಗೇಕೆ ಅಳುತ್ತಿಲ್ಲ, ಧರ್ಮ ಒಲ್ಲದವರಿಗೆ ಧರ್ಮ ಕೊಡುವುದು ತರವಲ್ಲ, ದುರ್ಬಲರೆಂದು ದೌರ್ಜನ್ಯ ಎಸಗಿದರೆ ಕೇಡು ತಪ್ಪದು, ಪ್ರಭೂ ಏನಪ್ಪಣೆ, ಆಕೆ ಸದಾಚಾರಣಿಯೇ ಸರಿ, ರಾಜ ಒಪ್ಪಿಸಿಕೋ ಈ ಕುಲಟೆಯ, ನರಿಯಿಂದ ನಲುಗಲಿಲ್ಲ ಅವರ ಸ್ನೇಹ, ಮನುಷ್ಯ ಹೇಗೆ ದೇವರಂತೆ ಆಗಬಲ್ಲ, ಕರ್ತವ್ಯಹೀನರ ಜನರೇಕೆ ಕಡೆಗಣಿಸುವರು, ನಾನು ಬರಲಾರೆ ನಿನ್ನಲ್ಲಿ ದೋಷವಿದೆ, ಕಾಮನೆಗಳಿಗೆ ಮಿಗಿಲು ವಿಷವಿಲ್ಲ, ಮೈನಾ ಹಕ್ಕಿ ಬೇಕೆ, ಚಕ್ರವೇಕೆ ತಲೆಯ ಮೇಲೆ ತಿರುಗುತ್ತಲೇ ಇರುತ್ತದೆ, ಆಲವು ಮುತ್ತುಗದ ಮರವ ನುಂಗಿತು ನೋಡಾ, ಒಳಿತೆ ನಿನ್ನ ಕಾಯುವುದು ವೈರವಲ್ಲ, ಬೆಳೆದ ಪ್ರೇಮ ಕಳೆದರೂ ಚಿಂತೆ ತರವಲ್ಲ, ಸಮಗ್ರವನ್ನೂ ಅರಿತು ಸಮಯ ಬಂದಾಗ ಚಲಾಯಿಸು, ಮಣ್ಣಿನತಟ್ಟೆ ಕದ್ದವ, ಕಂಚಿನತಟ್ಟೆ ಕದಿಯಲಾರನೇ, ಕಾಗೆಯ ಕಥೆ, ಅಂಬಿಗ ಮತ್ತು ದಡ, ವೇದ ತೋರಿಕೆಗಲ್ಲ ಆಚರಣೆಯಿಂದಲೇ ಅರ್ಥ, ಧೂಳು ಹೊಗೆಗಳಿಂದ ಮುಕ್ತನೇ ಗರ್ಭವಾಸ ಗೆಲ್ಲುವ, ಘನತೆಗೆ ಚ್ಯುತಿ ಬರುವೆಡೆ ತಂಗುವುದು ತರವಲ್ಲ, ಆಶಂಕಾಕುಮಾರಿಯ ಪ್ರೇಮ ಕತೆ, ಭಂತೆ ಮಕ್ಕಳನ್ನು ಕೊಂದು ತಾವು ಸನ್ಯಾಸಿಯಾದಿರೆ, ರಾಜ ಎಲ್ಲಿ ನಿನ್ನ ಪ್ರಿಯ ಭದ್ರವತಿಕೆ,ಇವೇ ಇಲ್ಲಿನ ಮುಖ್ಯ ವಸ್ತುಗಳಾಗಿವೆ.

About the Author

ಸಿ.ಎಚ್. ರಾಜಶೇಖರ್

ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...

READ MORE

Related Books