ಆಟಗಾಯಿ

Author : ಆನಂದ್ ಗೋಪಾಲ್

Pages 164

₹ 165.00
Year of Publication: 2021
Published by: ಸಂಕಥನ
Address: #72 , ಭೂಮಿಗೀತ, 6 ನೇ ತಿರುವು, ಉದಯಗಿರಿ, ಮಂಡ್ಯ – 571401
Phone: 9019529494

Synopsys

‘ಆಟಗಾಯಿ’ ಆನಂದ್ ಗೋಪಾಲ್ ಅವರ ಕಥಾಸಂಕಲನ. ಈ ಕೃತಿಗೆ ಕವಿ, ಪ್ರಕಾಶಕ ರಾಜೇಂದ್ರ ಪ್ರಸಾದ್ ಅವರ ಬೆನ್ನುಡಿ ಬರಹವಿದೆ. ಜಾಗತೀಕರಣ ನಂತರದ ಆಧುನಿಕ ಸಂವೇದನೆಗಳಿಗೆ ತೆರೆದುಕೊಳ್ಳುತ್ತಿದ್ದ ತೊಂಬತ್ತರ ದಶಕದ ಜನಜೀವನವು ಇಲ್ಲಿನ ಕಥೆಗಳಲ್ಲಿನ ಜೀವಾಳವಾಗಿದೆ. ಕಥನದ ಪರಿಭಾಷೆ ಮತ್ತು ಪರಿಕಲ್ಪನೆಗಳನ್ನು ಮೂರು ದಶಕದ ನಂತರದ ಈ ದಿನಗಳ ಧಾವಂತದ ಬದುಕಿನ ನಡುವೆಯೂ ಕಾಪಾಡಿಕೊಂಡು ಕಟ್ಟುವುದು ನೈಪುಣ್ಯತೆಯ ಮಾತು ಮಾತ್ರವಲ್ಲ ಅದು ಕಥೆಗಾರನ ಆಂತರ್ಯದೊಳಗೆ ಹುದುಗಿಕೊಂಡಿರುವ ಸೃಜನಶೀಲತೆಯ ಆತ್ಮಸ್ಥೈರ್ಯವೂ ಆಗಿದೆ ಎನ್ನುತ್ತಾರೆ.

ಕುಟುಂಬಗಳಲ್ಲಿನ ಹಲವು ಪಾತ್ರ, ಅವುಗಳ ಚಲನೆ, ಬೆಳವಣಿಗೆ ಮತ್ತು ನಿರ್ಗಮನಗಳು ಗಾಢವಾಗಿ ಕಥೆಗಾರನ ಮನಸ್ಸನ್ನು ಪರಿಣಾಮಿಸಿರುವುದನ್ನು ಇಲ್ಲಿನ ಎಲ್ಲಾ ಕಥಾಹಂದರಗಳಲ್ಲು ಕಾಣಬಹುದಾಗಿದೆ. ಇಂತಹದ್ದೊಂದು ಕುಟುಂಬ ವಾಸ್ತವವು ಇವತ್ತಿಗೂ ಇದೆ. ಆದರೆ ಅದು ಮತ್ತಷ್ಟು ಹಂತಗಳನ್ನು ದಾಟಿ ಹಲವು ಪಲ್ಲಟಗಳಿಗೆ ಸಿಲುಕಿ ಮತ್ತೊಂದು ಹಂತಕ್ಕೆ ಬದಲಾವಣೆಗೊಂಡಿದೆಯಷ್ಟೇ ಆ ಬದಲಾವಣೆಯು ಕಥೆಗಳನ್ನು ಓದುವಾಗ ಮನೋಭಿತ್ತಿಯಲ್ಲಿ ಮೂಡಬಹುದು. ಬಹುತೇಕ ಕಥೆಗಳಲ್ಲಿ ಪಾತ್ರದಂತೆಯೇ ಕಾಣಸಿಗುವ ಪತ್ರಗಳು ಮರೆತುಹೋದ ಒಂದು ಸೋದರ ಸಂಬಂಧದಂತೆ ಭಾಸವಾಗುತ್ತದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಆನಂದ್ ಗೋಪಾಲ್

ಹೊಸ ತಲೆಮಾರಿನ ಕಥೆಗಾರರಲ್ಲಿ ಆನಂದ್ ಗೋಪಾಲ್ ಬಹಳ ವಿಭಿನ್ನವಾಗಿ ನಿಲ್ಲುವವರು. ಕಥನದ ವಸ್ತು, ವಿಷಯ ಮತ್ತು ಪ್ರಸ್ತುತಿಗಳು 90 ಮತ್ತು 2000 ಮಧ್ಯಭಾಗದ ದಿನಗಳನ್ನು ನೆನೆಪಿಸುತ್ತವೆ. ಹಲವಾರು ಕಥಾ ಸ್ಪರ್ಧೆಗಳಲ್ಲಿ ಬಹುಮಾನ, ಮೆಚ್ಚುಗೆ ಪಡೆದಿರುವ ಅವರ ಕಥೆಗಳು ಓದುಗರ ಮನಸ್ಸಿನ ಬಹುಮಾನ ಪಡೆಯದೇ ಇರಲಾರವು.  ...

READ MORE

Related Books