ಕಸಾಂದ್ರ

Author : ಸಿ.ಎನ್. ರಾಮಚಂದ್ರನ್

Pages 120

₹ 80.00
Published by: ಅಂಕಿತ ಪುಸ್ತಕ
Address: 53, ಶ್ಯಾಮಸಿಂಗ್‌ ಕಾಂಪ್ಲೆಕ್ಸ್‌, ಗಾಂಧಿಬಜಾರ, ಬೆಂಗಳೂರು

Synopsys

'ನಾವು ಕಂಡ ಸತ್ಯವನ್ನು ಮತ್ತೊಬ್ಬರಿಗೆ ಕಾಣಿಸುವುದು ಹೇಗೆ?' - ಇದೊಂದು ರೀತಿಯಲ್ಲಿ ಎಲ್ಲ ಸಂವೇದನಾಶೀಲ ಮನಸ್ಸುಗಳ ಸಂಕಟ. ಈ ಸಂಕಟವನ್ನು ಸಿಎನ್‌ಆರ್ 'ಕಸಾಂದ್ರ'ನಲ್ಲಿ ಮನಗಾಣಿಸುವ ಕ್ರಮ ಅವರ ಕಥನ ಶಕ್ತಿಯ ಬಗೆಗೆ ನಮಗೆ ಗೌರವ ಮೂಡಿಸುತ್ತದೆ. ರಾಮಚಂದ್ರನ್‌  ಅವರದು ಮೂಲತಃ ಜಿಜ್ಞಾಸು ಪ್ರವೃತ್ತಿ. ಎಲ್ಲವನ್ನೂ ವಿಚಾರದ ಒರೆಗೆ ಹಚ್ಚಿ ನೋಡುದುದು ಅವರ ಕ್ರಮ. ಆದರೆ ಅವರಿಗೆ ಬದುಕಿನ ನಿಗೂಢಗಳ ಬಗ್ಗೆ ವಿಶ್ಲೇಷಣೆಯ ಆಚೆ ನಿಂತು ಅಣುಕಿಸುವ ಸತ್ಯದ ಬಗ್ಗೆ ಅಪಾರ ಕುತೂಹಲ. ಇಂತಹ ಅವನ ಕುತೂಹಲದ ಫಲವೇ ಈ ಕಥಾಸಂಕಲನ. ಅಡಿಗರು ಹೇಳು ಜಾಗೃತ ಸುಪ್ತಪ್ರಜ್ಞೆಗಳ ಹಠಾತ್‌ ಸಂಯೋಗ ಇಲ್ಲಿನ ಕತೆಗಳ ವಿನ್ಯಾಸವನ್ನು ರೂಪಿಸಿವೆ. ನಮ್ಮ ನಡುವಿನ ಮಹತ್ವದ ವಿಮರ್ಶಕರಾದ ಸಿ.ಎನ್‌. ರಾಮಚಂದ್ರನ್‌ ಅವರು ಈ ಸಂಕಲನದ ಕತೆಗಳ ಮೂಲಕ ಕನ್ನಡ ಸಣ್ಣಕಥಾ ಜಗತ್ತಿನ ಅಭಿವ್ಯಕ್ತಿ ಸಾಧ್ಯತೆಗಳನ್ನು ಹಿಗ್ಗಿಸುತ್ತಿರುವ ಮುಖ್ಯ ಕತೆಗಾರರೂ ಹೌದು ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಬರೆದಿದ್ದಾರೆ.

About the Author

ಸಿ.ಎನ್. ರಾಮಚಂದ್ರನ್

ರಾಮಚಂದ್ರನ್ ಅವರು ಜನಿಸಿದ್ದು (ಜ ೧೯೩೬) ಮೈಸೂರು ಜಿಲ್ಲೆಯ ಚಿಲ್ಕುಂದ ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಅಮೆರಿಕೆಯ ಮಯಾಮಿ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪದವಿ. ಕರ್ನಾಟಕ, ಮಹಾರಾಷ್ಟ್ರ, ಅಮೆರಿಕ, ಸೌದಿ ಅರೇಬಿಯಾ, ಸೋಮಾಲಿಯಾಗಳಲ್ಲಿ ಅಧ್ಯಾಪಕರಾಗಿ ಕಾರ್‍ಯ ನಿರ್ವಹಿಸಿದ್ದಾರೆ. ೧೯೯೬ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅಧ್ಯಾಪಕರಾಗಿ ನಿವೃತ್ತಿ. ಸಾಹಿತ್ಯ ವಿಮರ್ಶೆ, ವಸಾಹತೋತ್ತರ ಚಿಂತನೆ, ತೌಲನಿಕ ಸಾಹಿತ್ಯ, ಪರಂಪರೆ ಪ್ರತಿರೋಧ, ಎಡ್ವರ್ಡ್ ಸೈದ್, ಬಯಲುರೂಪ, ರಕ್ತ-ರೂಪಣೆ, ಹೊಸ ಮಡಿಯ ಮೇಲೆ ಚದುರಂಗ, ಗಿರೀಶ ಕಾರ್ನಾಡರ ಚಾರಿತ್ರಿಕ ನಾಟಕಗಳು ವಿಮರ್ಶಾ ಕೃತಿಗಳು. ಶೋಧ ಕಾದಂಬರಿ, ಕಸಾಂದ್ರ ಕಥಾ ಸಂಕಲನ. ಇನಾಂದಾರ್ ಪ್ರಶಸ್ತಿ, ...

READ MORE

Related Books