ಒಂದು ಸೇರು ಮದ್ಯ ಅರೆಸೇರು ಮಾಂಸ!

Author : ಜಗದೀಶ.ಬ.ಹಾದಿಮನಿ

₹ 80.00
Year of Publication: 2021
Published by: ಪ್ರತೀಕ್ಷಾ ಪ್ರಕಾಶನ
Address: ಪ್ರತೀಕ್ಷಾ ನಿಲಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಹತ್ತಿರ ಹುನಗುಂದ - 587118 ಬಾಗಲಕೋಟ ಜಿಲ್ಲೆ
Phone: 9880001565

Synopsys

ಲೇಖಕ ಜಗದೀಶ ಹಾದಿಮನಿ ಅವರ ಕಥಾ ಸಂಕಲನ ಒಂದು ಸೇರು ಮದ್ಯ ಅರೆಸೇರು ಮಾಂಸ! ಪಾತ್ರಗಳು ಅಕ್ಬರ್ ಅಬುಲ್ ಫಜಲ್ ಸಲೀಮ್/ಜಹಾಂಗೀರ್ ಮೆಹರುನ್ನೀಸಾ/ನೂರ್‌ಜಹಾನ್ ಅಲಿಖುಲಿಖಾನ್ ಬೇಗ್ ಕುತುಬುದ್ದೀನ್ ಮಿರ್ಜಾ ಘಿಯಾಸ್‌ಬೇಗ್ ರಾಜಾ ವೀರಸಿಂಗ್‌ದೇವ ಬುಂದೇಲಾ ರೂಪರಾಶಿ ನೂರ್‌ಜಹಾನ್‌ಳಿಗಾಗಿಯೇ ಜಹಾಂಗೀರ್‌ನು ಹೊರಟ ಹಾದಿ ಹುಡುಕುತ್ತಾ......... ಬಹುಕಾಲದಿಂದಲೂ ನನ್ನನ್ನು ಕಾಡುತ್ತಾ ಬಂದಿರುವ ಮುಸ್ಲಿಂ ರಾಜಮನೆತನದ ಪ್ರಮುಖ ಎರಡು ಮಹಿಳಾ ಪಾತ್ರಗಳೆಂದರೆ ರಜಿಯಾ ಸುಲ್ತಾನ್ ಹಾಗೂ ನೂರ್ ಜಹಾನ್. ಕಾರಣ: ಸಾಮ್ರಾಜ್ಯವನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯವಿದ್ದರೂ ದುರಂತ ಅಂತ್ಯ ಕಂಡಿದ್ದರಿಂದ. ಅದು, ಪುರುಷ ಪ್ರಾಬಲ್ಯವು ಸ್ತ್ರೀಯನ್ನು ನಿರಾಕರಿಸಿದ್ದರಿಂದಲೋ ಅಥವಾ ಸ್ವಯಂಕೃತ ಅಪರಾಧದಿಂದಲೋ ಹೀಗೆ ಎಂದು ನಿರ್ದಿಷ್ಟವಾಗಿ-ನಿಸ್ಸಂಶಯವಾಗಿ ಒರೆಗಚ್ಚಲಾಗದು. ಆದರೂ ಕೋಟಿ ಕೋಟಿ ನಕ್ಷತ್ರಗಳ ಮಧ್ಯೆ ಸೂರ್ಯ-ಚಂದ್ರರಂತೆ ಮಿನುಗಿ ಮರೆಯಾಗಿದ್ದಂತೂ ಸತ್ಯ. ಅಷ್ಟೇ ಅಲ್ಲ, ದೇದಿಪ್ಯಮಾನದಂತೆ ಹತ್ತಿ, ಹೊತ್ತಿ ಉರಿದು ಬೆಳಕಾಗಿ, ಯುವತಾರೆಗಳಿಗೆ ಹೆದ್ದಾರಿಯನ್ನೇ ತೆರೆದು ತೋರಿದ್ದೂ ನಿತ್ಯಸತ್ಯ. ಇದನ್ನು, ಯಾರೂ ಅಲ್ಲಗಳೆಯಲಾರರು; ಅಲ್ಲಗಳೆಯಲಾಗದು. ಇಲ್ತಮಷ್‌ಗೆ, ಕೈಗೆ ಬಂದ ಹಿರಿಯಮಗ ನಾಸಿರ್-ಉದ್-ದೀನ್ ಮಹಮ್ಮದ್‌ನು ಅಕಾಲಿಕವಾಗಿ ತೀರಿದ ಬಳಿಕ ಗಂಡು ಮಕ್ಕಳಿದ್ದರೂ ಅವರೆಲ್ಲರೂ ಅಸಮರ್ಥರೆಂದರಿತು ರಜಿಯಾಳಿಗೆ ಉತ್ತರಾಧಿಕಾರತ್ವ ನೀಡಿದನೆಂದರೆ, ಅವನ ದೂರದೃಷ್ಟಿ ಮೆಚ್ಚಲೇಬೇಕು. ಇದರಿಂದ, ಅವನು ಗತಿಸಿದ ನಂತರ ಹುಟ್ಟಿದ ಶತ್ರುಗಳ ಸಂಖ್ಯೆ ಅಪಾರ. ಆ ವಿರೋಧಿ ಬಣಗಳನ್ನೆಲ್ಲಾ ಬಗ್ಗುಬಡಿದು, ಹಿಗ್ಗಿನಿಂದ ಇನ್ನೇನು ಇತಿಹಾಸ ಪುಟಪುಟಗಳಲ್ಲಿ ಶಾಶ್ವತ ರಾರಾಜಿಸುತ್ತಾಳೆನ್ನುವುದರೊಳಗೇ ಸೋತು-ಸೆರೆಯಾಗಿ-ಮರೆಯಾಗುತ್ತಾಳೆ (ಕ್ರಿ.ಶ.1240). ಹೀಗೆ ಕತೆ ಸಾಗುತ್ತದೆ. 

About the Author

ಜಗದೀಶ.ಬ.ಹಾದಿಮನಿ

ಲೇಖಕ ಜಗದೀಶ.ಬ.ಹಾದಿಮನಿ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಳಮಳ್ಳಿ  ಗ್ರಾಮದವರು. ತಂದೆ ಬಸವಂತರಾಯ. ತಾಯಿ - ಧನಪೂರ್ಣ. ಬಾಗಲಕೋಟೆ ಜಿಲ್ಲೆಯ ವಿಜಯ ಮಹಾಂತೇಶ ಪ್ರೌಢಶಾಲೆಯಲ್ಲಿ ಶಿಕ್ಷಣ, ಹುನಗುಂದದ ವ್ಹಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವ್ಹಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪಿಯುಸಿ, ಹುನಗುಂದದ ಸರಕಾರಿ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಟಿ.ಸಿ.ಎಚ್ ‌ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಾಹ್ಯ ಅಭ್ಯರ್ಥಿಯಾಗಿ ಬಿ.ಎ ಪದವಿ, ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣದ ಮೂಲಕ ಕನ್ನಡದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದಾರೆ.  ಕೃತಿಗಳು:  ...

READ MORE

Related Books