ಮಿಲ್ಟ್ರಿ ತಾತ ಕಥೆ ಹೇಳ್ತಾರೆ

Author : ಬಾಬು ಕೃಷ್ಣಮೂರ್ತಿ

Pages 52

₹ 120.00
Year of Publication: 2023
Published by: ಅಯೋಧ್ಯಾ ಬುಕ್ಸ್
Address: 1571, 36ನೇ ಕ್ರಾಸ್, ಡಾ. ಪುನೀತ್ ರಾಜಕುಮಾರ್ ರೋಡ್, ಬನಶಂಕರಿ 2ನೇ ಹಂತ, ಬೆಂಗಳೂರು, ಕರ್ನಾಟಕ 560070
Phone: 096209 16996

Synopsys

`ಮಿಲ್ಟ್ರಿ ತಾತ ಕಥೆ ಹೇಳ್ತಾರೆ’ ಬಾಬು ಕೃಷ್ಣಮೂರ್ತಿ ಅವರ ಕಥಾಸಂಕಲನವಾಗಿದೆ. ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀ ಬಾಬು ಕೃಷ್ಣಮೂರ್ತಿಯವರು ಐವತ್ತು ವರ್ಷಗಳ ಹಿಂದೆ ಬರೆದಿದ್ದ; ಬರೆದು ಬಹುಮಾನ ಪಡೆದಿದ್ದ ‘ಮಿಲ್ಟ್ರಿ ತಾತ ಕತೆ ಹೇಳ್ತಾರೆ’. ಮಕ್ಕಳ ಸಾಹಿತ್ಯ ಜಗತ್ತಿನ ಈ ಅನನ್ಯ ಕೃತಿ, ಮಕ್ಕಳಲ್ಲಿ ಸ್ವಾತಂತ್ರ್ಯಯೋಧರ ಬಗ್ಗೆ ಪ್ರೀತ್ಯಭಿಮಾನ ಉಕ್ಕಿಸುವ ಈ ಪುಸ್ತಕ ಈಗ ಸರ್ವಾಂಗಸುಂದರವಾಗಿ ವರ್ಣಮಯವಾಗಿ ಪುನರ್ಮುದ್ರಣಗೊಂಡಿದೆ.

About the Author

ಬಾಬು ಕೃಷ್ಣಮೂರ್ತಿ

ಸಾಹಿತ್ಯ, ಪತ್ರಿಕೋದ್ಯಮ ಎರಡು ಕ್ಷೇತ್ರಗಳಲ್ಲೂ ಚಿರಪರಿಚಿತರಾದ ಬಾಬು ಕೃಷ್ಣಮೂರ್ತಿ ಹುಟ್ಟಿದ್ದು ಬೆಂಗಳೂರು. ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಅತೀವ ಆಸಕ್ತಿ. ಅವರ ಸಂಪಾದಕತ್ವದಲ್ಲಿ ಬಾಲಮಂಗಳ (ಪಾಕ್ಷಿಕ), ಬಾಲಮಂಗಳ ಚಿತ್ರಕಥಾ (ಮಕ್ಕಳ ವ್ಯಂಗ್ಯ ಚಿತ್ರ ಪಾಕ್ಷಿಕ), ಗಿಳಿವಿಂಡು (ಶಿಶು ಪಾಕ್ಷಿಕ ಪತ್ರಿಕೆ) ಪ್ರಕಟವಾಗಿವೆ. ಇವರು ರಚಿಸಿದ ಸ್ವಾತಂತ್ರ್ಯವೀರ ಚಂದ್ರಶೇಖರ ಆಜಾದ್ ಕುರಿತು ಆರು ವರ್ಷ ಕಾಲ ಸಂಶೋಧನೆ, ಸ್ಥಳವೀಕ್ಷಣೆ ನಡೆಸಿ ರಚಿಸಿದ ಕೃತಿ ‘ಅಜೇಯ’. ಅವರ ಪ್ರಮುಖ ಕೃತಿಗಳು - ಅಜೇಯ (1974), ಸಿಡಿಮದ್ದು ನೆತ್ತರು ನೇಣುಗಂಬ (1984), ಅದಮ್ಯ (1984), ರುಧಿರಾಭಿಷೇಕ (2005), ಡಾ. ಸಿ.ಜಿ. ಶಾಸ್ತಿಒಂದು ಯಶೋಗಾಥೆ (2007), 1857-ಭಾರತದ ಸ್ವಾತಂತ್ರ್ಯ ಸಂಗ್ರಾಮ (2007), ...

READ MORE

Related Books