ಆರನೇ ಬೆರಳು

Author : ಬಸವಣ್ಣೆಪ್ಪಾ ಕಂಬಾರ

Pages 120

₹ 110.00




Published by: ಚಂದನ ಪ್ರಕಾಶನ
Address: ಬೆಳಗಾವಿ

Synopsys

ಲೇಖಕ ಬಸವಣ್ಣೆಪ್ಪ ಕಂಬಾರ ಅವರ ಕಥಾ ಸಂಕಲನ ಆರನೇ ಬೆರಳು. ಈ ಕೃತಿಗೆ ಎಂ.ಜಿ.ರಾಘವೇಂದ್ರರು ಬೆನ್ನುಡಿಯನ್ನು ಬರೆದಿದ್ದಾರೆ. ‘ಕನ್ನಡ ಕಥಾ ಸಾಹಿತ್ಯ ಲೋಕದಲ್ಲಿ ದಶಕದಿಂದ ಧ್ಯಾನಸ್ಥರಾಗಿ, ಪ್ರಕ್ಷುಬ್ಧ ಘಟನೆಗಳನ್ನು ತೀವ್ರವಾಗಿ ಕಾಡುವಂತೆ ನಿಷ್ಠೆಯಿಂದ ಓದಿಸಿಕೊಂಡು ಹೋಗುವಂತೆ ಬರೆಯುವ ಬಸವಣ್ಣೆಪ್ಪ ಕಂಬಾರ ಉತ್ತರ ಕರ್ನಾಟಕದ ಗಣ್ಯ ಕಥೆಗಾರರು, ಕಥೇಯ ನೇಯ್ದೆ, ಶಬ್ದಗಳ ತೂಕ,ವಿಷಯ, ವಸ್ತುಗಳ ತಾಕಲಾಟ ಪ್ರತಿಮೆಯೊಳಗೊಂದು ಹೂ ಮನಸ್ಸು ಬಿಡಿಸುವಲ್ಲ ನಿಸ್ವೀಮರು ಓದುಗರಿಗೆ ಜೀವಿತ ಜಗತ್ತಿನ ಲಯವನ್ನು ಛಂದೋಬದ್ದವಾಗಿ ಹಾಗು ಆಡು ಮಾತುಗಳ ಭಾವ, ಸಂಸ್ಕೃತಿ ಭೂಗೊಲಗಳ ಸಶಕ್ತ ಸಂಯಮವನ್ನು ಜಾತಿ, ಹಳ್ಳಿಗಳ ಬದುಕು, ಆಮಿಷ, ಮೋಹ,ದೌರ್ಜನ್ಯ ಜೊತೆಗೆ ಸಾಂಪ್ರದಾಯಕ ಹಿಂಸೆ ಕತೇಯ ಉತ್ತೇಜನಗಳು. ಕಥೆಗಳ ಅಂತ್ಯವಂತು ಹಣಿಗೆ ಕಣ್ಣಿಟ್ಟು ಹೊಡೆದಂತೆ ಬೆಚ್ಚಿಬೀಟಿಸುತ್ತದೆ ಹೊಳೆದದ್ದು ತಾರೇಯಾದರು ಉಆದದ್ದು ಆಕಾಶ ಎಂಬಂತೆ ಈ ನೆಲದ ಜೀವಂತ ದನಿ ಇಲ್ಲಿನ ಕತೆಗಳು ಮುಂದಿನ ಸಂಗತಿಗಳಿಗೆ ಗ್ರಾಮ್ಯ ಭಾರತದ ತೆರೆದಿಟ್ಟ ಹಸಿ ಹೃದಯಗಳು. ಇಲ್ಲಿ ಚರಿತ್ರೆ ಹಿಂದೆ ದಾಳಿಯು ಏಕಕಾಲದಲ್ಲಿ ಜರಗುತ್ತವೆ. ಈ ಕಥೆಗಳನ್ನು ಓದಿದ ಮೇಲೆ ಮನಸ್ಸು ಪರ್ಯಾಯ ಜಗತ್ತಿನ ಅನುಸಂಧಾನದಲ್ಲಿ ಉಳಿಯುವಂತೆ ಮಾಡುತ್ತವೆ ಎಂಬುದಾಗಿ ಎಂ.ಜಿ ರಾಘವೇಂದ್ರರು ಬೆನ್ನುಡಿಯಲ್ಲಿ ಹೇಳಿದ್ದಾರೆ.

About the Author

ಬಸವಣ್ಣೆಪ್ಪಾ ಕಂಬಾರ
(10 January 1976)

ಬೆಳಗಾವಿ ಜಿಲ್ಲೆಯ ಘೋಡಗೇರಿಯವರಾದ ಬಸವಣ್ಣೆಪ್ಪ ಕಂಬಾರ ಅವರು ಕನ್ನಡದ ಭರವಸೆಯ ಕತೆಗಾರರಲ್ಲಿ ಒಬ್ಬರು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಸವಣ್ಣೆಪ್ಪಾ ಅವರು ’ಆಟಿಕೆ’, ’ಗಾಂಧಿ ಪ್ರಸಂಗ’ ಮತ್ತು ಗರ್ದಿ ಗಮ್ಮತ್ ಎಂಬ ಮೂರು ಕತಾ ಸಂಕಲನ ಪ್ರಕಟಿಸಿದ್ದಾರೆ. ಅವರ ಆಟಿಕೆ’ ಸಂಕಲನಕ್ಕೆ ಛಂದ ಪುಸ್ತಕ ಬಹುಮಾನ, ಶಿವಮೊಗ್ಗ ಕರ್ನಾಟಕ ಸಂಘದ ಯು.ಆರ್‌. ಅನಂತಮೂರ್ತಿ ಕತಾ ಪ್ರಶಸ್ತಿ, ಧಾರವಾಡದ ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ನ ಬೇಂದ್ರೆ ಪುಸ್ತಕ ಬಹುಮಾನ ಸಂದಿವೆ. ...

READ MORE

Related Books