ಕಥಾ ಕಿನ್ನುರಿ

Author : ಚನ್ನಪ್ಪ ಕಟ್ಟಿ

Pages 330

₹ 320.00




Year of Publication: 2022
Published by: ನೆಲೆ ಪ್ರಕಾಶನ
Address: ಗುರು ಬಸವ ವಿದ್ಯಾ ನಗರ, ಸಿಂದಗಿ 586 128

Synopsys

ಕಥಾ ಕಿನ್ನುರಿ ಡಾ. ಚನ್ನಪ್ಪ ಕಟ್ಟಿ ಅವರ ಕತಾ ಸಂಕಲನ. 'ಕಥಾ ಕಿನ್ನುರಿ'ಯ ಕಥನವು ಕಟ್ಟುತ್ತಿರುವ ಲೋಕಕ್ಕೂ ಇಲ್ಲಿನ ಭಾಷೆಗೂ ನಡುವೆ ಹರಿಗಡಿಯದ ಸಂಬಂಧವಿದೆ. ಈ ಕತೆಗಳ ಅಸ್ತಿತ್ವವೇ ಇದರ ಭಾಷೆ, ಚನ್ನಪ್ಪ ಕಟ್ಟಿ ಅವರು ನೀಡುವ ವಿವರಗಳು, ತಿಳಿವಳಿಕೆ ಮತ್ತು ಭಾವನೆಗಳನ್ನು ಬೇರೊಂದು ಭಾಷೆಯಲ್ಲಿ ಹೇಳಲು ಸಾಧ್ಯವಿಲ್ಲ ಎನ್ನುವ ಅನುಭವ ಇದನ್ನು ಓದುವಾಗ ನಮಗಾಗುತ್ತದೆ. ಇದು ಕಟ್ಟಿಯವರ ಕತೆಗಳೇ ಸೃಷ್ಟಿಸಿಕೊಂಡಿರುವ ವಿಶಿಷ್ಟ ಭಾಷೆ. ಆಡುಮಾತಿನ ಲಯದ ತಿರುಳು ಮತ್ತು ಕಟ್ಟುತ್ತಿರುವ ವಿವರಗಳು ಒಂದು ಬಿಂದುವಿನಲ್ಲಿ ಪೂರ್ಣವಾಗಿ ಕೂಡಿ ಈ ಬರಹಗಳು ಕಾವ್ಯಾತ್ಮಕವಾಗುವತ್ತ ತುಡಿಯುತ್ತವೆ. ಬರಹಗಳುದ್ದಕ್ಕೂ ಬಳಸುವ ವಾಕ್ಯರಚನೆ, ಪದರಚನೆ ಮತ್ತು ಶಬ್ದಕೋಶ ಎಂಬ ಮೂರು ನೆಲೆಗಳಲ್ಲಿಯೂ ಒಂದು ಪ್ರದೇಶ, ಜಾತಿ ಮತ್ತು ಲಿಂಗವಿಶಿಷ್ಟವಾದ ಉಪಭಾಷೆಯ ಬಳಕೆ ಕೂಡ ನಮಗೆ ಇಲ್ಲಿ ಕಾಣಸಿಗುತ್ತದೆ. ಒಂದೊಂದು ಕತೆಯೂ ಭಾಷೆಯ ಭಿನ್ನ ಲಯಗಳನ್ನು ಒಳಗೊಳ್ಳುವುದರ ಜೊತೆಗೆ, ಒಂದೇ ಕತೆಯೊಳಗೆ ಹಲವು ಭಾಷೆಗಳು ಹುಟ್ಟಿಕೊಂಡಿರುವ ವಿಸ್ಮಯವೂ ಇಲ್ಲಿದೆ ಈ ಹಿನ್ನೆಲೆಯಲ್ಲಿ ಪುಸ್ತಕದ ಶೀರ್ಷಿಕೆ 'ಕಥಾ ಕಿನ್ನುರಿ' ಎಂಬುದಕ್ಕೆ ಹಲವು ಆಯಾಮಗಳು ಒದಗುತ್ತವೆ. 'ಕಿನ್ನುರಿ' ಎಂದರೆ ಕಿನ್ನರ ಸ್ತ್ರೀ ಎಂದು ತೇಜಶ್ರೀ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ. ಈ ಕತೆಯ ಒಳಪುಟಗಳಲ್ಲಿ ಮುಳುಗಡೆ ಮತ್ತು ಇತರ ಕತೆಗಳು ,ಪಾಲು, ಆಳು- ಮಗ, ಕರಿಯವ್ವನ ಜನ, ಎಡಗೈ ಯೋದನ ವೀರಗಲ್ಲು, ಮಾವ ಸತ್ತಿಲ್ಲ, ಚರಗ, ಮಾನದಂಡ ಬೆಂಕಿ ಇರದ ಬೆಳಕು ,ಮೃತ್ಯೋರ್ಮಾಮಮೃತಂಗಮಯ, ಜನಶತ್ರು, ಕಾಗಾರ ದನದ ರಂಗ್ಯಾ , ಬೇಲಿ , ಚಾಕು ಮಾರಲು ಬಂದ ಹುಡುಗ , ದಾವಲ ಮಲೀಕ ಕೀ ದೋಸ್ತರಾಹೋ ದೀನ್ , ಏಕತಾರಿ ,ಜುಮ್ಮಣ್ಣನ ಕಂಚಿನ ಮೂರ್ತಿ, ರತ್ನಾಗಿರಿ ಎಂಬ ಮಾಯೆ, ಬಾಲಕನ ಕಣ್ಣಲ್ಲಿ ಕಂಡ ಸಾವು, ಅಟ್ಟ ಹೊಸ್ತಿಲೊಳಗಣ ಹುತ್ತ ಊರ್ಧ್ವರೇತ, ಸುಖದ ನಾದ ಹೊರಡಿಸುವ ಕೊಳಲು ಏಕತಾರಿ ರಾಯಪ್ಪನ ಬಾಡಿಗೆ ಸಾಯಿಕಲ್ಲು ಎಂಬ ಕತೆಗಳಿವೆ.

About the Author

ಚನ್ನಪ್ಪ ಕಟ್ಟಿ
(01 May 1956)

ಡಾ. ಚನ್ನಪ್ಪ ಕಟ್ಟಿಯವರ ಪೂರ್ಣ ಹೆಸರು ಚನ್ನಪ್ಪ ಕನಕಪ್ಪ ಕಟ್ಟಿ. ಮೂಲತಃ  ಗದಗ ಜಿಲ್ಲೆ, ರೋಣ ತಾಲ್ಲೂಕು ಹಿರೇಹಾಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಹಿರೇಹಾಳ ಗ್ರಾಮದಲ್ಲಿ ಮುಗಿಸಿದ ಅವರು ಮಾಧ್ಯಮಿಕ ಶಿಕ್ಷಣವನ್ನು ಶ್ರೀ ವೀರಪುಲಿಕೇಶಿ ಮಾಧ್ಯಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಆನಂತರ ಶ್ರೀವೀರಪುಲಿಕೇಶಿ ಪದವಿ ಪೂರ್ವ ಮಹಾವಿದ್ಯಾಲಯ, ಬಾದಾಮಿಯಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದ ಅವರು, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡದಲ್ಲಿ ಇಂಗ್ಲಿಷ್ ನಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಸಿಂದಗಿಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ...

READ MORE

Related Books