ಜಂಬು ನೇರಳೆ

Author : ಬಾಳಾಸಾಹೇಬ ಲೋಕಾಪುರ

Pages 112

₹ 75.00




Year of Publication: 2014
Published by: ಕಣ್ವ ಪ್ರಕಾಶನ,
Address: ಕಾಳ ಕನಸ್ಸು #894. 1 ನೇ ಮುಖ್ಯ ರಸ್ತೆ, ನಿಸರ್ಗ ಬಡಾವಣೆ, ಚಂದ್ರ ಲೆಔಟ್ ಬೆಂಗಳೂರು.- 560072

Synopsys

ಲೇಖಕ ಬಾಳಾ ಸಾಹೇಬ ಲೋಕಾಪುರ ಅವರ ಸಣ್ಣೆ ಕಥೆಗಳ ಸಂಕಲನ-’ಜಂಬು ನೇರಳೆ’ . ಕೃತಿಗೆ ಬೆನ್ನುಡಿ ಬರೆದಿರುವ ಆರ್. ತಾರಿಣಿ ಶುಭದಾಯನಿ ಅವರು, ‘ಬಾಳಾ ಸಾಹೇಬ ಲೋಕಾಪುರ ಕತೆಗಾರಿಕೆಯ ಕಲೆ ಮತ್ತು ಪೊಲಿಟಿಕಲ್ ಆದ ದೃಷ್ಟಿಕೋನಗಳನ್ನು ತಂತಿನಡಿಗೆಯಂತೆ ಕಷ್ಟಪಟ್ಟು ನಡೆಯುವುದಕ್ಕಿಂತ ಕೊಂಡಗಳನ್ನು ಹಾಯುವಂತೆ ಧೈರ್ಯವಾಗಿ ಮುನ್ನೆಗೆಯೋಣ ಎನ್ನುವ ಮನೋಭಾವದವರು. ಹೀಗಾಗಿ, ನಿರ್ಭಿಡೆಯಿಂದ ತಮಗೆ ಕಂಡುಂಡ ಅನುಭವಗಳನ್ನು ತಾವು ಬದುಕಿ ಬಾಳಿದ ಪರಿಸರದಲ್ಲಿಟ್ಟು ಚಿತ್ರಿಸುವುದು ಅವರಿಗೆ ಇಲ್ಲಿ ಸಾಧ್ಯವಾಗಿದೆ. ಇದನ್ನೆಲ್ಲ ಪ್ರಜ್ಞಾಪೂರ್ವಕವಾಗಿ ಬರೆಯುವುದು ಒಬ್ಬ ಸೃಜನಶೀಲ ಲೇಖಕನ ಮಾದರಿಯಲ್ಲ ಎನ್ನುವುದನ್ನು ಅರಿತಂತೆ ಅವರು ಬರೆಯುವುದು ಮೆಚ್ಚುಗೆಯ ಅಂಶ ಎಂತಲೇ ಅನ್ನಿಸುತ್ತಿದೆ. ಈ ಸಣ್ಣಕತೆಗಳ ಕಟ್ಟಿನಲ್ಲಿ ಪುಟ್ಟ ಪುಟ್ಟ ಕತೆಗಳೇ ಹೆಚ್ಚಿದ್ದು ಚಿಕ್ಕ ಚೊಕ್ಕವಾಗಿವೆ. ಇರುವ ಎರಡು ದೊಡ್ಡ ಕತೆಗಳು ಕತೆಗಾರಿಕೆಯ ನೀಟ್ ನೆಸ್ ಅನ್ನು ಹೊಂದಿವೆ. ಇಲ್ಲಿ ಅನೇಕ ಬಗೆಯ ಕತೆಗಳಿದ್ದು ಅವುಗಳಲ್ಲಿ ಸಾಮಾಜಿಕ ಸ್ತರದಿಂದ ಹಿಡಿದು ವೈಯುಕ್ತಿಕವಾಗಿ ಮಿನುಗುವ ಅನುಭವಗಳು ಕಾಣುತ್ತವೆ. ಆಳದಲ್ಲಿ ಉಳಿವ ವಿಷಾದವನ್ನು ಕಹಿಯಾಗಿಸದೇ ಜೀವನ್ಮುಖಿಯಾಗಿ ನಿಲ್ಲುವ ಮಾನವೀಯತೆಗೆ ಇಲ್ಲಿ ಪ್ರಾಧಾನ್ಯತೆ . ಸಣ್ಣಕತೆಯೊಂದರ ಸಾರ್ಥಕತೆಯಾದರೂ ಅದೇ ಅಲ್ಲವೆ? ಅಷ್ಟರ ಮಟ್ಟಿಗೆ, ಇಲ್ಲಿನ ಕತೆಗಳು ಸಾಫಲ್ಯವನ್ನು ಪಡೆದಿವೆ ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

About the Author

ಬಾಳಾಸಾಹೇಬ ಲೋಕಾಪುರ

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಶಿರಹಟ್ಟಿಯವರಾದ ಲೇಖಕ ಬಾಳಾಸಾಹೇಬ ಲೋಕಾಪುರ 1955ರಲ್ಲಿ ಜನಿಸಿದರು. ನವ್ಯೊತ್ತರ ಸಾಹಿತಿಗಳಾದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಭೂಗೋಳ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ‘ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಜೈನ ಸಂವೇದನೆ’ ವಿಷಯದಲ್ಲಿ ಪಿಹೆಚ್ ಡಿ ಪಡೆದರು.  ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರಾದ ಇವರು ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕವಣಿಗಲ್ಲು, ಹಾರುವ ಹಕ್ಕಿ ಮತ್ತು ಆಕಾಶ, ತನು ಕರಗದವರಲ್ಲಿ, ಮತ್ತು ಕಂಗಳು ತುಂಬಿದ ಬಳಿಕ ಎಂಬ ಕತಾಸಂಕಲನಗಳು, ಉಧೊ ಉಧೊ, ಹುತ್ತ, ಬಿಸಿಲುಪುರ, ನೀಲಗಂಗಾ ಎಂಬ ಕಾದಂಬರಿಗಳು, ...

READ MORE

Related Books