ಸಂಜೆ ಬಿಸಿಲು

Author : ಎ.ಪಿ. ಮಾಲತಿ

Pages 164

₹ 60.00
Year of Publication: 2004
Published by: ಅತ್ರಿ ಬುಕ್ ಸೆಂಟರ್
Address: ಶರಾವತಿ ಕಟ್ಟಡ ಬಲ್ಮಠ ಮಂಗಳೂರು -575001

Synopsys

ಹೆಣ್ಣಿನ ಮೌನಕ್ಕೆ ಧ್ವನಿಯಾಗುವ, ಅವಳ ಅಂತರಂಗದ ಧ್ವನಿಗೆ ಭಾಷೆ, ಅವಳ ಹೃದಯದ ನಲಿವು ನೋವಿನ ಮಿಡಿತಗಳ ರೂಪು ‘ಸಂಜೆ ಬಿಸಿಲು’. ಎ. ಪಿ. ಮಾಲತಿ ಅವರ ಎರಡನೆ ಕಥಾಸಂಕಲನ ಇದಾಗಿದೆ. ಇಲ್ಲಿಯ ಎಲ್ಲ ಕತೆಗಳು ಕನ್ನಡದ ಜನಪ್ರಿಯ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. 'ಯೋಗ' ಕತೆ ಮಲೆಯಾಳ ಭಾಷೆಗೆ, 'ಅರ್ಹತೆ' ತೆಲುಗು ಭಾಷೆಗೆ ಅನುವಾದಗೊಂಡಿದ್ದು 'ಇಲ್ಲದವರು' ಕತೆ ಬೆಂಗಳೂರು ಆಕಾಶವಾಣಿಯಿಂದ ನಾಟಕರೂಪದಲ್ಲಿ ಪ್ರಸಾರವಾಗಿದೆ

About the Author

ಎ.ಪಿ. ಮಾಲತಿ
(06 May 1944)

ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ  ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್‌, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...

READ MORE

Related Books