ಉರುಸು

Author : ಆನಂದ ಭೋವಿ

Pages 96

₹ 120.00
Year of Publication: 2023
Published by: ಸಂಗಾತ ಪುಸ್ತಕ
Address: ಗಜೇಂದ್ರಗಡ ತಾಲ್ಲೂಕು, ಗದಗ ಜಿಲ್ಲೆ, ರಾಜೂರ ಅಂಚೆ- 582114
Phone: 9341757653

Synopsys

‘ಉರುಸು’ ಲೇಖಕ ಆನಂದ ಭೋವಿ ಅವರ ಕಥಾಸಂಕಲನ. ಈ ಕೃತಿಗೆ ಬಾಳಾಸಾಹೇಬ ಲೋಕಾಪೂರ ಹಾಗೂ ಜಿ.ಪಿ. ಬಸವರಾಜು ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಇಲ್ಲಿಯ ಕಥೆಗಳು ಗ್ರಾಮ ಜಗತ್ತಿನ ಅನಾಹುತ ಕೋಲಾಹಲಗಳನ್ನು ಮೈಯಾಗಿಸಿಕೊಂಡಿವೆ. ಗತದ ನೆನಪುಗಳು ಕಾಡುವ ಕಥೆಗಳಾಗಿ ಬದುಕಿನ ವಿದ್ರಾವಕ ಸಂಗಂತಿಗಳಾಗಿ ತಣ್ಣಗಿನ ತಲ್ಲಣಗಳನ್ನು ಅದರದೇ ಆದ ಗತಿಲಯದ ವಿನ್ಯಾಸದಲ್ಲಿ ರೂಪಗೊಂಡು ನಮ್ಮನ್ನು ತಟ್ಟುತ್ತವೆ. ಲೇಖಕರ ಗ್ರಾಮಲೋಕದ ತಿಳುವಳಿಕೆ, ಗ್ರಾಮೀಣರ ಭಾಷಿಕ ನುಡಿಗಟ್ಟಿನ ಮಧುರ ಸೃಜನ ಅಭಿವ್ಯಕ್ತಿಗಳು ಈ ಕಥೆಗಳನ್ನು ಚೆಂದವಾಗಿಸಿವೆ ಎನ್ನುತ್ತಾರೆ ಬಾಳಾಸಾಹೇಬ ಲೋಕಾಪೂರ. ಹಾಗೇ ಅನಾಹುತ ಪ್ರೇಮದ ವಿಲೋಮ ಆಕರ್ಷಣೆ ಹೇಳುವ ‘ಉರುಸು’, ಅಂತಹ ಕಥೆಯೊಂದಿಗೆ ಈರ್ಷೆ, ಕಾಮ, ಹಠ ಮತ್ತು ರಾಜಕೀಯ ಮೇಲಾಟ ಹಾಗೂ ಹೆಣ್ಣು ನಡೆಯ ಕ್ರೂರ ಕಥೆಯಾದ ‘ಹೋಳಿ ಹುಣ್ಣಿಮೆ’ ಯಂತಹ ಕಥೆಗಳಿವೆ. ‘ಆರಾಮ ಕುರ್ಚಿ’, ‘ಜೈಲು’, ‘ದಾರಿ ಮುಗಿಯುತ್ತಿದೆ’ ಇತ್ಯಾದಿ ಕಥೆಗಳು ಗ್ರಾಮಚರಿತ್ರೆ ಬಿಚ್ಚಿಡುವ ಪಥನಮುಖಿ ಚಲನೆಯ ವಿವಿಧ ಅಭ್ಯಾಸದಂತಿವೆ. ಓದಿನ ಖುಷಿ ಕೊಡುವ ಕಥೆಗಳು ಇವಾಗಿವೆ. ಅದಕ್ಕಾಗಿ ಲೇಖಕರು ಅಭಿನಂದನಾರ್ಹರಾಗಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಆನಂದ ಭೋವಿ

ಸವದತ್ತಿ ತಾಲೂಕಿನ ಉಗರಗೋಳದ ಆನಂದ ಭೋವಿಯವರು ಸದ್ಯ ನರಗುಂದ ತಾಲೂಕಿನ ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಪ್ಪತ್ತು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಾಗಿ ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. “ಮುತ್ತು ಕಟ್ಯಾಳ ನಮ್ಮವ್ವ”  2014ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪುರಸ್ಕೃತಗೊಂಡ ಕಥಾಸಂಕಲನ. ‘ಹಿಡಿ ಮಣ್ಣಿನ ಬೊಗಸೆ’ ಕಥಾಸಂಕಲನ, ‘ಸುಮ್ಮನಿರದ ಗಜಲ್’ ಕವನ ಸಂಕಲನ ಪ್ರಕಟಗೊಂಡಿವೆ. 2015ರಲ್ಲಿ ಬೇಂದ್ರೆ ಗ್ರಂಥ ಬಹುಮಾನ ದೊರಕಿದೆ. ಹಲವಾರು ಕತೆ ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಹಲವು ಕತೆಗಳು ಬಹುಮಾನ ಪಡೆದಿವೆ. ಚಿಕ್ಕುಂಬಿ ಮಠದಿಂದ ಅಜಾತಶ್ರೀ ...

READ MORE

Related Books