ಕೂರ್ಮಾವತಾರ

Author : ಕುಂ. ವೀರಭದ್ರಪ್ಪ

Pages 400

₹ 225.00




Year of Publication: 2014
Published by: ಸ್ನೇಹ ಬುಕ್ ಹೌಸ್‌
Address: 165,10ನೇ ಮುಖ್ಯರಸ್ತೆ, ಶ್ರೀನಗರ, ಪಿಇಎಸ್ ಕಾಲೇಜು ಹತ್ತಿರ, ಬೆಂಗಳೂರು.
Phone: 9845031335

Synopsys

“ಕೂರ್ಮಾವತಾರ” ಕು. ವೀರಭದ್ರಪ್ಪನವರ 19 ಸಣ್ಣ ಕತೆಗಳ ಸಂಕಲನ. ಈ ಕಥೆಗೆ ರಾಷ್ಟ್ರೀಯ ಪ್ರಶಸ್ತಿ ಹಾಗೂ ವೈಯಕ್ತಿಕ ಕಥಾಪ್ರಶಸ್ತಿ ಲೇಖಕ ಕುಂ. ವೀರಭದ್ರಪ್ಪ ಕನ್ನಡ ಸಣ್ಣ ಕಥೆಯ ಭಾಷೆಗೆ ಹೊಸ ಮೊನಚು ಕೊಟ್ಟವರು. ಕಥೆಯ ವಸ್ತು, ನಿರೂಪಣಾ ಶೈಲಿ, ಗ್ರಾಮೀಣ ಸೊಗಡಿನ ಭಾಷೆ ಎಲ್ಲವೂ ಅವರ ಕಥೆ-ಕಾದಂಬರಿಗಳ ಒಟ್ಟು ಆಕರ್ಷಣೆಯಾಗಿದೆ. ಈ ದಿಸೆಯಲ್ಲಿ ಕೂರ್ಮಾವತಾರ ಸಣ್ಣ ಕಥೆಗಳ ಸಂಕಲನವೂ ಸೇರುತ್ತದೆ.

About the Author

ಕುಂ. ವೀರಭದ್ರಪ್ಪ
(01 October 1953)

ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು. ಶಿವರಾಜ್ ...

READ MORE

Related Books