ಸಂಕ (ಕಥೆಗಳು)

Author : ನವೀನ ಗಂಗೋತ್ರಿ

Pages 136

₹ 120.00
Year of Publication: 2018
Published by: ಸ್ನೇಹ ಬುಕ್ ಹೌಸ್,
Address: #133, 1ನೇ ಅಡ್ಡರಸ್ತೆ, ಜ್ಞಾನಗಂಗೋತ್ರಿ, ಬಾಲಾಜಿ ಬಡಾವಣೆ, ಮಲ್ಲತ್ತಹಳ್ಳಿ, ಬೆಂಗಳೂರು-560056

Synopsys

ನವೀನ ಗಂಗೋತ್ರಿ ಅವರ ಕಥೆಗಳ ಸಂಕಲನ-ಸಂಕ. ಕಾಡಿನಲ್ಲಿ ಕಂದಕಗಳನ್ನು ದಾಟಲು ನಿರ್ಮಿಸಿರುವ ಹಗ್ಗದ ಕಿರುದಾರಿ. ಇದನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿರುತ್ತದೆ. ಕಾಡಿನಲ್ಲಿ ಏರಿಳಿತಗಳು ಇರುವುದರಿಂದ ಕಂದಕಗಳನ್ನು ದಾಟಲು ಸಾಕಷ್ಟು ಶ್ರಮ ಹಾಗೂ ಸಮಯ ಹೆಚ್ಚುವುದರಿಂದ ಇಂತಹ ಕಿರು ಸೇತುವೆಗಳನ್ನು ಮರದ ಸಣ್ಣ ಕಟ್ಟಿಗೆಗಳನ್ನು ಹಗ್ಗದಿಂದ ಕಟ್ಟಿ ದಾರಿ ಮಾಡಿಕೊಳ್ಳಲಾಗಿರುತ್ತದೆ. ಈ ಸಂಕ ಮುರಿದು ಬಿದ್ದರೆ ಕಂದಕ ದಾಟಲಾಗದು. ಕೆಳಗೆ ಪ್ರವಾಹದ ರೀತಿಯಲ್ಲಿ ನೀರು ಹರಿಯುತ್ತಿರುತ್ತದೆ. ಇಂತಹ ಸಂದಿಗ್ದತೆಯ ಕಥಾವಸ್ತುವನ್ನು ಒಳಗೊಂಡಿರುವ ಕಥೆಗಳನ್ನು ಇಲ್ಲಿ ಸಂಕಲಿಸಲಾಗಿದೆ.

About the Author

ನವೀನ ಗಂಗೋತ್ರಿ

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರಾದ ನವೀನ್‌ ಗಂಗೋತ್ರಿ ಅವರು ರಾಷ್ಟ್ರೀಯ ಸಂಸ್ಕೃತಿ ಸಂಸ್ಥಾನದಲ್ಲಿ ಅಧ್ಯಯನ ನಡೆಸಿದ್ದಾರೆ. ಶೃಂಗೇರಿಯ ರಾಜೀವ ಗಾಂಧಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಯಾಗಿದ್ದ ಅವರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರು. ’ಸಂಕ’ ಎಂಬ ಸಣ್ಣಕತೆಗಳ ಸಂಕಲನ ಪ್ರಕಟಿಸಿರುವ ಅವರು ಕನ್ನಡದ ಪ್ರಮುಖ ಪತ್ರಿಕೆಗಳಿಗೆ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ. 2013ರ 'ವಿಜಯವಾಣಿ ದೀಪಾವಳಿ ಕಥಾಸ್ಪರ್ಧೆ'ಯಲ್ಲಿ ಮೊದಲ ಬಹುಮಾನ ಪಡೆದಿದ್ದಾರೆ. ಅಮೇರಿಕಾ ಕನ್ನಡ ಒಕ್ಕೂಟ 'ಅಕ್ಕ' ದ ಕಥಾಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆ ಗಳಲ್ಲಿ ಬಹುಮಾನ ಗಳಿಸಿರುವ ನವೀನ್ ಉತ್ತರಕನ್ನಡ ಜಿಲ್ಲೆಯ ಪುಟ್ಟ ಹಳ್ಳಿಯಿಂದ ಸ್ವಪ್ರಯತ್ನದಿಂದ ಬೆಳೆದುಬಂದ ...

READ MORE

Related Books