ಮೊದಲ ಗಿರಾಕಿ

Author : ಮಚ್ಚೇಂದ್ರ ಪಿ.ಅಣಕಲ್.

Pages 88

₹ 60.00




Year of Publication: 2011
Published by: ವಿಶ್ವಕರ್ಮ ಪ್ರಕಾಶನ
Address: ಮ.ನಂ- 19-1-298, ಮಹಾದೇವ ಕಾಲೋನಿ, ಶಿವನಗರ ಬೀದರ 585401
Phone: 9449825431

Synopsys

ಮೊದಲ ಗಿರಾಕಿ--ಲೇಖಕ ಮಚ್ಛೇಂದ್ರ ಅಣಕಲ್ ಅವರ ಕಥಾಸಂಕಲನ. ಒಟ್ಟು 11 ಕತೆಗಳಿವೆ .2010 ರಲ್ಲಿ ಅಮೆರಿಕದ 6ನೇ ಅಕ್ಕ ಕಥಾ ಸ್ಪರ್ಧೆಯಲ್ಲಿ ಆಯ್ಕೆಯಾದ *'ಡಾಂಬಾರು ದಂಧೆ*' ಈ ಸಂಕಲನದಲ್ಲಿದೆ.  *ಮೊದಲ ಗಿರಾಕಿ*  ಕತೆಯಲ್ಲಿ ಅಮಾಯಕ ಹೆಣ್ಣೊಂದು ವೇಶ್ಯೆಯಾಗಿ  ಅನೈತಿಕ ದಾರಿ ಹಿಡಿಯುವ ಪರಿಯನ್ನು ಸೂಚಿಸುತ್ತದೆ. *ಶಿಕ್ಷಣೆಂಬೋ ಬಿ.ಎಡ್ಡು..* ಕತೆಯಲ್ಲಿ ನಿರುದ್ಯೋಗ ಕುರಿತು ಚಿತ್ರಿಸಿದರೆ ಮಲ್ಯ, ಭಯ ಮತ್ತಿತರ ಕತೆಗಳು ಕೆಳವರ್ಗದ ಜನಾಂಗದ ಕುರಿತು ಚಿತ್ರಿಸುತ್ತವೆ. ಈ ಕೃತಿಗೆ  *ಕೆ.ನೀಲಾ* ಅವರು ಮುನ್ನುಡಿ ಬರೆದು ‘ಕತೆಗಳುದ್ದಕ್ಕೂ ಅನೇಕ ಸೂಕ್ಷ್ಮ ಸಂಗತಿಗಳನ್ನು ಕಥನಗೊಳಿಸಿದ್ದಾರೆ.ಜಾತಿ ವ್ಯವಸ್ಥೆಯ ವಿರುದ್ಧ ಅವರ ಭಾವನೆಗಳು ಕತೆಗಳಲ್ಲಿ ಪಾತ್ರಗಳ ಮೂಲಕ ಹೊರಹಾಕಿದ್ದಾರೆ. ಬೀದರ ಜಿಲ್ಲೆಯ ಗ್ರಾಮೀಣ ಭಾಷೆಯು ತುಂಬ ಚೆನ್ನಾಗಿ ಬಳಸಿಕೊಂಡಿದ್ದಾರೆ" ಎಂದು ಪ್ರಶಂಸಿಸಿದ್ದಾರೆ. ವೀರಶೆಟ್ಟಿ ಪಾಟೀಲ್ ಹಿನ್ನುಡಿ ಬರೆದಿದ್ದಾರೆ.

 

About the Author

ಮಚ್ಚೇಂದ್ರ ಪಿ.ಅಣಕಲ್.
(12 June 1979)

ಮಚ್ಚೇಂದ್ರ ಪಿ ಅಣಕಲ್ ಮೂಲತ: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದಲ್ಲಿ 12-06-1979 ರಂದು ಜನಿಸಿದರು. ಸದ್ಯ ಕಲಬುರಗಿ ನಿವಾಸಿ. ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕರು. ಪತ್ರಿಕೋದ್ಯಮ ಹಾಗೂ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಎಂ.ಇಡಿ ಪದವೀಧರರು.  ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಹಾಗೂ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ ಅನುಭವವಿದೆ. 2002 ರಲ್ಲಿ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭದ ತಿಂಗಳ ಕಥಾ ಸ್ಪರ್ಧೆಯಲ್ಲಿ ಇವರ 'ಲಾಟರಿ'ಕತೆ  ಬಹುಮಾನ ಪಡೆದಿದೆ . 2010 ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ 6ನೇ ಅಕ್ಕ ವಿಶ್ವ ಕಥಾ ಸ್ಪರ್ಧೆಯಲ್ಲಿ  ...

READ MORE

Related Books