ಕತೆಗಾರ ಜಯಪ್ರಕಾಶ ಮಾವಿನಕುಳಿ ಅವರ ಕತೆಗಳ ಸಂಗ್ರಹ ’ಬ್ರಹ್ಮ ರಾಕ್ಷಸ’. ಜಯಪ್ರಕಾಶ ಅವರ ಕತೆಗಳಲ್ಲಿ ಕಂಡು ಬರುವ ಆಧುನಿಕ ಸಮಾಜದ ಸಂಕಷ್ಟಗಳನ್ನು ಸಂವೇದನಾಶೀಲ ವ್ಯಕ್ತಿಗಳ ಸಂಕಟ, ತೊಳಲಾಟಗಳನ್ನು ತಮ್ಮ ಕತೆಗಳಲ್ಲಿ ಚಿತ್ರಿಸುತ್ತಾರೆ. ಅತ್ಯಂತ ಪರಿಣಾಮಕಾರಿಯಾಗಿ ತಮ್ಮ ಭಾಷೆಯ ಮೂಲಕ, ರೂಪಕಗಲ ಮೂಲಕ ಅಪರೂಪದ ಕತೆಗಳನ್ನು ಕಟ್ಟಿಕೊಡುತ್ತಾರೆ.
ಅಶಾಂತ, ವಾಡೆಯ ಗತವೂ ಮತ್ತು ಇವನ ಕಥೆಯೂ, ವಿಲಾಪ, ವಿದಾಯ, ಅಪಲಾಪ, ಹುಸೇನ ಸಾಬಿ ಮಗಳ ಮದುವೆ ಪ್ರಸಂಗ, ಪಾಲು, ಅಮಾಯಕರು, ಲಾಸ್ಟ್ ಬೆಲ್, ತೊರೆದವರು, ಪ್ರೀತಿಯಿಂದ ಕರೆದ ಹುಡುಗಿ , ಹೂವಿನ ತೋಟಕೆ ನೀರಿಲ್ಲ, ಪ್ರಶ್ನೆಗಳು, ಉಣಬೇಕು ಒಟ್ಟಿಗೆ ಇದ್ದಷ್ಟು, ಬ್ರಹ್ಮರಾಕ್ಷಸ ಮುಂತಾದ ಕತೆಗಳ ಸಂಗ್ರಹ ಇಲ್ಲಿವೆ.
ಜಯಪ್ರಕಾಶ ಮಾವಿನಕುಳಿ ವೃತ್ತಿಯಲ್ಲಿ ಓರ್ವ ಕನ್ನಡ ಸಾಹಿತ್ಯದ ಕವಿ, ಕಾದಂಬರಿಕಾರ, ವಿಮರ್ಶಕ, ಸಂಪಾದಕ, ಆಕಾಶವಾಣಿಯ ಧ್ವನಿ ಕಲಾವಿದ, ನಾಟಕಕಾರ, ರಂಗ ನಿರ್ದೇಶಕ ಮತ್ತು ರಂಗಭೂಮಿ ಚಲನಚಿತ್ರ ನಟ. ಕನ್ನಡ ಸಾಹಿತ್ಯಕ್ಕೆ ಇವರು ನಾಟಕಗಳು, ಕಾದಂಬರಿ, ಸಣ್ಣಗಳು, ಕಾವ್ಯ ಮತ್ತು ಇತರರೊಡನೆ ಸಂಪಾದನೆಯು ಸೇರಿದಂತೆ ಸುಮಾರು ಎಪ್ಪತ್ತು ಪುಸ್ತಕಗಳನ್ನು ಕೊಟ್ಟಿರುವುದು ಇವರ ಉಡುಪಿಯ ಎಂ.ಜಿ.ಎಂ ಕಾಲೇಜಿನ ಪ್ರಾಚಾರ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. 1978ರಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು 4 ಕಥಾ ಸಂಕಲನಗಳು, 4 ಕವನ ಸಂಕಲನಗಳು, 7 ನಾಟಕಗಳು, 12 ಸಂಪಾದಿತ ಕೃತಿಗಳು ಹಾಗೂ ಇತರ ಕೃತಿಗಳೊಂದಿಗೆ 60ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ...
READ MOREಸಣ್ಣಕತೆ-2016