ಅಯ್ದು ರೂಪಾಯಿ ಮತ್ತು ಇತರ ಕತೆಗಳು

Author : ಪ್ರಕಾಶ್‌ ಡಂಗಿ

Pages 80

₹ 99.00
Year of Publication: 2021
Published by: ಕಟ್ಟುಕತೆ ಕ್ರಿಯೇಷನ್ಸ್‌
Address: ಸುರಭಿ ಬಡಾವಣೆ, 2ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಹಳೇ ಯಲಹಂಕ, ಬೆಂಗಳೂರು-64
Phone: 9036250956

Synopsys

ಲೇಖಕ ಪ್ರಕಾಶ್‌ ಡಂಗಿ ಅವರ ಮೊದಲ ಕಥಾ ಸಂಕಲನ- ʻಅಯ್ದು ರುಪಾಯಿ ಮತ್ತು ಇತರ ಕತೆಗಳುʼ ಬರಹಗಾರ ಇಂದ್ರಕುಮಾರ್‌ ಎಚ್.ಬಿ ಅವರು ಬರೆದ ಮುನ್ನುಡಿಯಲ್ಲಿ,ʻಸರಳವಾದ ವಸ್ತು ವಿಚಾರಗಳನ್ನೇ ಸಮಾಧಾನದಿಂದ ಕಟ್ಟಿಕೊಡುತ್ತಾ ಅದರ ಮೂಲಕ ಗಂಭೀರವಾದ ಬೆಳವಣಿಗೆಯತ್ತ ನಿಧಾನವಾಗಿಯೇ ಸಾಗುತ್ತಿರುವ ಇವರ ಕಥೆಗಳು ತಮ್ಮ ಅನುಭವದ ನೆಲೆಯನ್ನು ಮೆಚ್ಚಿಕೊಂಡೇ ಸಾಗಿದರೂ, ಸ್ವಾರಸ್ಯಗಳ ವಿಶೇಷತೆಯಿಂದ ಮೆಚ್ಚುಗೆಯಾಗುತ್ತವೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

About the Author

ಪ್ರಕಾಶ್‌ ಡಂಗಿ
(22 July 1976)

ಲೇಖಕ ಪ್ರಕಾಶ್‌ ಡಂಗಿ ಅವರು ಬಾಗಲಕೋಟೆಯಲ್ಲಿ ದಂತ ವೈದ್ಯರು. ವಿಶ್ವಖುಷಿ ಪ್ರಕಾಶನದ ಪ್ರಕಾಶಕರು, ಸಾಹಿತ್ಯ, ಫೋಟೋಗ್ರಫಿ ಇವರ ಹವ್ಯಾಸಗಳು. ಆಕಾಶವಾಣಿಯಲ್ಲಿ ಕವಿತೆ ವಾಚಿಸಿದ್ದಾರೆ,. ಇವರ ಹಲವಾರು ಬರಹಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೃತಿಗಳು: ಅವಳ ನೆನಪಲ್ಲಿ (ಕವನ ಸಂಕಲನ- 2016), ನಾ..ನೀ ಕೇವಲ ಎರಡಕ್ಷರವಲ್ಲ (ಕವನ ಸಂಕಲನ-2018), ಅಯ್ದು ರುಪಾಯಿ ಮತ್ತು ಇತರ ಕತೆಗಳು ( ಕಥಾ ಸಂಕಲನ-2021) ...

READ MORE

Related Books