ಇವರದ್ದು ಇನ್ನೊಂದು ಕತೆ

Author : ನಾ. ಡಿಸೋಜ

Pages 104

₹ 35.00
Year of Publication: 2002
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ಇವರದ್ದು ಇನ್ನೊಂದು ಕತೆ’ ನಾ. ಡಿಸೋಜ ಅವರ ಕಥಾಸಂಕಲನವಾಗಿದೆ. ಈ ಸಮಾಜದ ಎಲ್ಲ ಅನಿಷ್ಟಗಳನ್ನು ತೊಡೆದುಹಾಕುವತ್ತ ಹೆಜ್ಜೆಯಿರಿಸಿ. ಮನುಷ್ಯ ತಾನು ಸುಧಾರಣೆಗೊಳ್ಳಬೇಕೆಂಬುದೇ ಆಗಿರುತ್ತದೆ. ಸಮಾಜದ ಚೌಕಟ್ಟಿನಲ್ಲಿ ಬರೆಯಲಾದ ಕಥೆಗಳಾದರೂ ಅವು ಎಲ್ಲ ಸಮಾಜದ ಒಳಹೊರಗನ್ನು ಪ್ರತಿನಿಧಿಸುತ್ತವೆ.

About the Author

ನಾ. ಡಿಸೋಜ

ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ.  ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ಕಥೆಗಳನ್ನು ಬರೆಯುತ್ತಿದ್ದರು. ಡಿಸೋಜರ ಮೊದಲ ಕಾದಂಬರಿ ‘ಬಂಜೆ ...

READ MORE

Reviews

ಹೊಸತು- ನವೆಂಬರ್‌ -2003

ನಾ. ಡಿಸೋಜರ ಕಥೆಗಳು ಎಲ್ಲ ಕಾಲದಲ್ಲೂ ಎಲ್ಲ ಜನರಿಂದಲೂ ಪ್ರಶಂಸೆಗೊಳಗಾಗಲು ಕಾರಣ ಅವರ ಕಥೆಗಳಲ್ಲಿ ಮೂಡಿಬರುವ ಬಡವರಿಗಾಗಿ ಮಿಡಿಯುವ ಮಾನವೀಯತೆ ಮತ್ತು ಹೃದಯವಂತಿಕೆ ಎಂದು ಧಾರಾಳವಾಗಿ ಹೇಳಬಹುದು. ಕ್ರೈಸ್ತ ಸಮಾಜದ ಚೌಕಟ್ಟಿನಲ್ಲಿ ಬರೆಯಲಾದ ಕಥೆಗಳಾದರೂ ಅವು ಎಲ್ಲ ಸಮಾಜದ ಒಳಹೊರಗನ್ನು ಪ್ರತಿನಿಧಿಸುತ್ತವೆ. ಅವರ ಕಥೆಗಳ ಒಟ್ಟು ಆಶಯ ಈ ಸಮಾಜದ ಎಲ್ಲ ಅನಿಷ್ಟಗಳನ್ನು ತೊಡೆದುಹಾಕುವತ್ತ ಹೆಜ್ಜೆಯಿರಿಸಿ. ಮನುಷ್ಯ ತಾನು ಸುಧಾರಣೆಗೊಳ್ಳಬೇಕೆಂಬುದೇ ಆಗಿರುತ್ತದೆ.

Related Books