ಬೆಂಗಳೂರಿನಲ್ಲಿ ಒಂದಿನ

Author : ವಿ. ರಾಘವ್‍ ಬಸು

₹ 100.00




Published by: ಬೈ ಡಿಸೈನ್‍
Address: ಬೈ ಡಿಸೈನ್ ಎಲೆಕ್ಟ್ರಾನಿಕ ಸಿಟಿ ಪೇಸ್ 1, ಎಲೆಕ್ಟ್ರಾನಿಕ ಸಿಟಿ ಬೆಂಗಳೂರು, ಕರ್ನಾಟಕ 560100
Phone: 080661 45807

Synopsys

ಹಲವು ಸಿನೆಮಾದ ಹಾಡುಗಳಿಗೆ ಸಾಹಿತ್ಯ, ಸಂಭಾಷಣೆ ಬರೆದಿರುವ ಅನುಭವ ಹೊಂದಿರುವ ರಾಘವ ಅವರು ಕಾದಂಬರಿ ಬರೆಯಲು ಹೊರಟು ಕಥೆಗಳ ಸಂಕಲನವನ್ನು ಹೊರ ತಂದಿದ್ದಾರೆ. ಮೂಲತಃ ಎಂಜಿನಿಯರ್‍ ಆಗಿರುವ ರಾಘವ್‍ ಅವರು ಪುಸ್ತಕಗಳ ಕುರಿತು ಮತ್ತು ಬರವಣಿಗೆಯ ಕುರಿತು ಬಹಳಷ್ಟು ಉತ್ಸಾಹ ಉಳ್ಳವರು. ಅವರ ಉತ್ಸಾಹದ ಚಿಲುಮೆ ಈ ಪುಸ್ತಕದಲ್ಲಿ ಉಕ್ಕಿ ಹರಿಯುವ ರೀತಿ ಪುಸ್ತಕ ಮೂಡಿ ಬಂದಿದೆ. ಸಣ್ಣ ಮತ್ತು ದೊಡ್ಡ ಕಥೆಗಳು ಸೇರಿ ಒಟ್ಟು 22 ಕಥೆಗಳನ್ನೊಳಗೊಂಡಿರುವ ಈ ಪುಸ್ತಕವು ಅತ್ಯಂತ ಆಕರ್ಷಕವಾಗಿ ಮೂಡಿ ಬಂದಿದೆ. ವಿಭಿನ್ನ ಕಥಾ ಹಂದರ ಹೊಂದಿರುವ ಕಥೆಗಳನ್ನು ಓದಲು ಮನಸ್ಸಿಗೆ ಬಹಳಷ್ಟು ಮುದ ನೀಡುತ್ತವೆ. ಪುಸ್ತಕಕ್ಕೆ ವಿಶೇಷವಾದ ಬ್ಲರ್ಬ್‍ ಬರೆದಿರುವ ರಾಘವ್‍, ಅಲ್ಲಿಂದಲೇ ಓದುಗರನ್ನು ಸೆಳೆಯುವತ್ತ ಯಶಸ್ವಿಯಾಗಿತ್ತಾರೆ. ವಿಶೇಷವಾಗಿ ಯುವಜನರನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವ ಕಥೆಗಳು ಬಹಳ ಇರುವುದರಿಂದ, ತುಂಬಾ ರೋಚಕವಾದ ಮತ್ತು ಮನಸ್ಸನ್ನು ತಿಳಿಗೊಳಿಸುವ ಕಥೆಗಳು ಪುಸ್ತಕದಲ್ಲಿ ಅಡಕವಾಗಿವೆ. ತುಂಬಾ ಕಷ್ಟಪಟ್ಟು ಓದುವ ಬದಲು, ಮೊದಲ ಪುಟದಿಂದ ಕೊನೆಯ ಪುಟದ ವರೆಗೆ ಸುಲಭವಾಗಿ ಓದಿಸಿಕೊಂಡು ಹೋಗುವ ಪುಸ್ತಕ ‘ಬೆಂಗಳೂರಿನಲ್ಲಿ ಒಂದಿನ’.

About the Author

ವಿ. ರಾಘವ್‍ ಬಸು
(06 July 1992)

ಮೂಲತಃ ಗಂಗಾವತಿಯವರಾದ ವಿ. ರಾಘವ ಬಸು ಅವರು ಆಕ್ಟ್ ಫೈಬರ್‌ ನೆಟ್‌ವರ್ಕ್‌‌ನಲ್ಲಿ ಸೀನಿಯರ್‌ ನೆಟ್‌ವರ್ಕಿಂಗ್‌ ಎಂಜಿನಿಯರ್‌ ಆಗಿದ್ದಾರೆ. ಎಚ್.ಎ.ಓ. ನಲ್ಲಿ ಸೋಷಿಯಲ್‌ ಮೀಡಿಯಾ ಎಕ್ಸ್‌ಕ್ಯುಟಿವ್‌. ಬೆಂಗಳೂರಿನ ಎಸ್‌ಅರ್‌ಎಸ್‌ಐಟಿಯಿಂದ ಎಂಜಿನಿಯರಿಂಗ್‌ ಪದವಿ ಪಡೆದಿರುವ ಅವರು ’ಬೆಂಗಳೂರಿನಲ್ಲಿ ಒಂದಿನ’ ಎಂಬ ಕಾದಂಬರಿ ಪ್ರಕಟಿಸಿದ್ದಾರೆ. ...

READ MORE

Related Books