ದೇವರ ಕಾಲೋನಿ

Author : ಚಂದ್ರಶೇಖರ್‌ ಬಂಡಿಯಪ್ಪ

Pages 96

₹ 110.00
Year of Publication: 2021
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್
Address: #745, 12ನೇ ಮುಖ್ಯ ರಸ್ತೆ, 3ನೇ ಬ್ಲಾಕ್‌, ರಾಜಾಜಿನಗರ ಬೆಂಗಳೂರು- 560010
Phone: 9945939436

Synopsys

ಲೇಖಕ ಚಂದ್ರಶೇಖರ್‌ ಬಂಡಿಯಪ್ಪ ಅವರ ಕಥಾಸಂಕಲನ-ʻದೇವರ ಕಾಲೋನಿʼ. ಕೃತಿಯಲ್ಲಿ ದೇವರ ಕಾಲೋನಿʼ, ಚೈನಾಸೆಟ್ ಮತ್ತು ಉಯಿಲು ಎಂಬ 3 ವಿಭಿನ್ನ ಕಥೆಗಳಿವೆ. ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರು ಮುನ್ನುಡಿ ಬರೆದು, ದೇವರ ಕಾಲೋನಿ, ಚೈನಾಸೆಟ್, ಉಯಿಲು ಎಂಬ ಮೂರು ಶೀರ್ಷಿಕೆಗಳಲ್ಲಿ ಸಂಚರಿಸುವ ಮೂರು ಕಥಾವಸ್ತುಗಳು ತೀರಾ ಭಿನ್ನವಾಗಿವೆ. ಅಚ್ಚರಿ ಹುಟ್ಟಿಸುವಷ್ಟು ಭಿನ್ನತೆ. ಇಂಥ ಬರಹಗಾರ ಮಾತ್ರ ಅನಾವರಣ ಮಾಡುವ ಅಗೋಚರ ಲೋಕ. "ದೇವರ ಕಾಲೋನಿ"ಯಲ್ಲಿ ಮೂಡಿರುವ ಚಿತ್ರಗಳು ಮತ್ತು ಪಾತ್ರಗಳು ಇದುವರೆಗೂ ಎಲ್ಲೂ ದಾಖಲಾದವುಗಳಲ್ಲ. ‘ಚೈನಾಸೆಟ್"ನಲ್ಲಿರುವ ಅಂತ್ಯ ಬೆಚ್ಚಿ ಬೀಳಿಸುತ್ತದೆ. "ಉಯಿಲು" ಕಥೆಯ ಸ್ವಾಮಿಗೌಡರ ವೈಚಾರಿಕತೆ ಅಪರೂಪವಾದದ್ದು. ಚಂದ್ರಶೇಖರ್‌ಗೆ ಸ್ಫೋಟಿಸುವ, ಸೂಕ್ಷ್ಮವಾಗಿ ಅವಲೋಕಿಸುವ ಮತ್ತು ಎಲ್ಲವನ್ನು ಮಾನವೀಯ ನೆಲೆಯಲ್ಲಿ ಗ್ರಹಿಸುವ ಚೈತನ್ಯವಿದೆ. ಹಲವು ಮಿತಿಗಳ ನಡುವೆಯೂ ಈ ಪುಸ್ತಕ ನನ್ನನ್ನು ಅಲುಗಿಸಿದೆ. ಚಿಂತನೆಗೆ ಹಚ್ಚಿದೆʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.

About the Author

ಚಂದ್ರಶೇಖರ್‌ ಬಂಡಿಯಪ್ಪ

ಚಂದ್ರಶೇಖರ್‌ ಬಂಡಿಯಪ್ಪ ಅವರ ಹುಟ್ಟೂರು ಮಂಡ್ಯ ಜಿಲ್ಲೆಯ ಉಮ್ಮಡಹಳ್ಳಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ಬಯೋಸೈನ್ಸ್) ಪದವೀಧರರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಇಡಿ. ಪದವೀಧರರು. ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ(KANFIDA)ದಿಂದ ಫಿಲ್ಮ್‌ ಟೆಕ್ನಾಲಜಿಯಲ್ಲಿ  ಡಿಪ್ಲೊಮಾ ಪಡೆದಿದ್ದಾ‌ರೆ. ಕನ್ನಡದ ಖ್ಯಾತ ನಿರ್ದೇಶಕರಾದ ಎಸ್‌. ನಾರಾಯಣ್‌ ಹಾಗೂ ರಾಜೇಂದ್ರಸಿಂಗ್‌ ಬಾಬು ಅವರ ಹಲವಾರು ಚಿತ್ರಗಳಿಗೆ ಸಹನಿರ್ದೇಶಕರಾಗಿ, ನಂತರ ತಾವೇ ಸ್ವತಂತ್ರ ನಿರ್ದೇಶಕರಾಗಿ, ಆನೆ ಪಟಾಕಿ, ರಥಾವರ, ಮತ್ತು ತಾರಾಕಾಸುರ, ಚಿತ್ರಗಳನ್ನು ನಿರ್ದೇಶಿಸಿದ್ದಾರೆ.  ಸಿನಿಮಾಗಳಿಗೆ ಚಿತ್ರಕಥೆ ಬರೆಯುವುದರ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತೋಡಗಿಸಿಕೊಂಡಿದ್ದಾರೆ. ‘ದೇವರ ಕಾಲೋನಿ’ ಇವರ ಮೊದಲ ಕಥಾ ಸಂಕಲನ. ...

READ MORE

Related Books