ಬಯಲಲಿ ತೇಲುತಾ ತಾನು

Author : ಅಕ್ಷಯ್‌ ಪಂಡಿತ್

Pages 112

₹ 100.00
Year of Publication: 2021
Published by: ಸಂಕಥನ
Address: #72 , ಭೂಮಿಗೀತ, 6 ನೇ ತಿರುವು, ಉದಯಗಿರಿ, ಮಂಡ್ಯ – 571401
Phone: 9886133949

Synopsys

ಲೇಖಕ ಅಕ್ಷಯ್‌ ಪಂಡಿತ್‌ ಅವರ ಕಥಾ ಸಂಕಲನ- ʻ ಬಯಲಲಿ ತೇಲುತಾ ತಾನುʼ. ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಕಥೆಗಳು ಹಾಗೂ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಕಥೆಗಳ ಸಂಕಲನ ಈ ಕೃತಿ. ‘ಬಯಲಲಿ ತೇಲುತಾ ನಾನು’ ಕಥೆಗೆ ʻ2021ಈ ಹೊತ್ತಿಗೆ ಕಥಾ ಪ್ರಶಸ್ತಿʼ ಲಭಿಸಿದೆ. ಬರಹಗಾರ ಕರ್ಕಿ ಕೃಷ್ಣಮೂರ್ತಿ ಅವರು ಬೆನ್ನುಡಿ ಬರೆದು ʻನಮ್ಮ ನಿಲುಕಿನಲ್ಲಿ ಇರುವ ಮರವೊಂದರ ಅದೇ ರೆಂಬೆ ಕೊಂಬೆಗಳ ನಡುವೆ , ʻಅದೋ ಅಲ್ಲಿ ನೋಡಿʼ ಎನ್ನುತ್ತ, ನಾವು ಇದುವರೆಗೂ ಗಮನಿಸಿರದ ಹೊಸ ಹಕ್ಕಿಯೊಂದನ್ನು ಕಾಣಿಸುತ್ತಾರೆ ಅಕ್ಷಯ್‌ ಪಂಡಿತ್.‌ ಆ ಹಕ್ಕಿಯ ಬಣ್ಣ, ವಿನ್ಯಾಸ, ಬಿನ್ನಾಣಗಳು ಓದುಗನನ್ನು ಮೋಡಿ ಮಾಡದೇ ಇರಲಾರವುʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.

About the Author

ಅಕ್ಷಯ್‌ ಪಂಡಿತ್

ಲೇಖಕ ಅಕ್ಷಯ್‌ ಪಂಡಿತ್‌ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂಜಿನಿಯರಿಂಗ್ ಪದವೀಧರರು. ಬೆಂಗಳೂರಿನ ನಾಸ್ಡ್ಯಾಕ್‌ ಸಾಫ್ಟವೇರ್‌ ಕಂಪನಿಯಲ್ಲಿ ಪ್ರಾಡೆಕ್ಟ್‌ ಮ್ಯಾನೇಜರ್‌ ಹುದ್ದೆ ನಿರ್ವಹಿಸುತ್ತಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಕಥೆಗಳು ಪ್ರಕಟವಾಗಿವೆ. ʻಬಯಲಲಿ ತೇಲುತಾ ತಾನುʼ ಕಥಾ ಸಂಕಲನಕ್ಕೆ 2021ರ ಸಾಲಿನ ʻಈ ಹೊತ್ತಿಗೆ ಕಥಾ ಪ್ರಶಸ್ತಿʼ,  2014ರ ವಿಜಯ ಕರ್ನಾಟಕ ಯುಗಾದಿ ಕಥಾಸ್ಪರ್ಧೆಯಲ್ಲಿ ' ಎಲ್ಲೂ ಸಲ್ಲದವರು ' ಕಥೆ ಮೊದಲ ಬಹುಮಾನವನ್ನು ಪಡೆದಿದೆ ಮತ್ತು 2016ರಲ್ಲಿ ' ಭಾರತ್ ಸಿಟಿ ' ಕತೆ ತೃತೀಯ ಬಹುಮಾನ ಪಡೆದಿದೆ.        ...

READ MORE

Related Books