ಜೆನ್ ಕಥೆಗಳು-ಬೌದ್ಧ ಧರ್ಮದ ಜೀವಾಳವೇ ಎನ್ನಲಾಗುವ ಜೆನ್ ಕಥೆಗಳನ್ನು ಲೇಖಕ ಗಿರೀಶ ತಾಳಿಕಟ್ಟೆ ಅವರು ಸಂಗ್ರಹಿಸಿದ ಕೃತಿ ಇದು. ಜೀವನ ಪ್ರೀತಿ, ನೀತಿ, ಸ್ಫೂರ್ತಿ-ಈ ಬೋಧನಾ ಅಂಶಗಳನ್ನು ಹೊಂದಿರುವ ಕಥೆಗಳು ಇದ್ದು, ಓದುಗರ ಮೇಲೆ ಧನಾತ್ಮಕ ಪರಿಣಾಮ ಹಾಗೂ ವ್ಯಕ್ತಿತ್ವವನ್ನು ಕ್ರಿಯಾಶೀಲವಾಗಿ ನಿರ್ಮಿಸಿಕೊಳ್ಳುವತ್ತ ನೆರವಾಗುತ್ತವೆ. ಉತ್ತಮ ಬೋಧೆಗಳ ಅಧ್ಯಾತ್ಮ ಕೃತಿಯು ಇದಾಗಿದೆ.
ಪತ್ರಕರ್ತ, ಬರಹಗಾರ ಗಿರೀಶ್ ತಾಳಿಕಟ್ಟೆ ಅವರು ಜನಿಸಿದ್ದು 1984 ನವೆಂಬರ್ 13. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಇವರು ಹುಟ್ಟೂರು. ಪ್ರಸ್ತುತ ನಾನು ಗೌರಿ ಪತ್ರಿಕೆಯ ಸಹ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ಹೊರತರುತ್ತಿದ್ದ ಗೈಡ್ ಮಾಸಿಕದ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹವ್ಯಾಸ ಹಾಗೂ ಆಸಕ್ತಿಯಿಂದ ಇವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಟರ್ನಿಂಗ್ ಪಾಯಿಂಟ್ (ವ್ಯಕ್ತಿ ವಿಕಸನ ಬರಹಗಳು), ಕಾಡುವ ಕತೆಗಳು, ನನ್ನ ಕೈಗಂಟಿದ ನೆತ್ತರು (ಅನುವಾದ) ಮುಂತಾದವು ಇವರ ಪ್ರಮುಖ ಕೃತಿಗಳು. ...
READ MORE