ಸಹನಾ

Author : ಡಾ. ಶಾಲಿನಿ. ವಿ. ಎಲ್‌

Pages 100

₹ 220.00




Year of Publication: 2017
Published by: ನೋಷನ್ ಪ್ರೆಸ್
Address: 38, ಎಂಸಿ ನಿಕೋಲಸ್ ರಸ್ತೆ, ಚೆಟ್‌ಪರಟ್‌, ಚೆನ್ನೈ, ತಮಿಳುನಾಡು-600031
Phone: 9036805460

Synopsys

ಕಳೆದುಕೊಂಡ ಜೀವನವನ್ನು ಕಟ್ಟಿಕೊಳ್ಳಲು ಚೆನ್ನೈ ನಗರವನ್ನು ಅರಸಿ ಬರುವ ಯುವ ಪ್ರಸೂತಿ ತಜ್ಞೆ 'ಸಹನಾ' ಎಂಬ ಹೆಣ್ಣು ಮಗಳು ಕಥಾನಾಯಕಿ. ಆದರ್ಶಗಳನ್ನು ಬೆನ್ನಿಗೆ ಕಟ್ಟಿಕೊಂಡು ಎಲ್ಲವನ್ನು ತೊರೆದು ಬಂದ ಈ ಹೆಣ್ಣುಮಗಳಿಗೆ ಪರಸ್ಥಳದಲ್ಲಿ ಆಸರೆಯಾಗಿ ನಿಲ್ಲುವ ಶುದ್ದ ಮನಸ್ಸಿನ ವ್ಯಕ್ತಿತ್ವವು ಬದುಕಿನ ಆಶಯವಾದ ಕಥೆ ಇದಾಗಿದೆ. ಅಂದುಕೊಂಡ ನೆಮ್ಮದಿಯ ಜೀವನ ನೆಲೆಯೂರುವ ಹೊಸ್ತಿಲಲ್ಲಿ, ಹಳೆಯ ಕಹಿ ಘಟನೆಗಳು ಬಿಚ್ಚಿಕೊಂಡು ಬದುಕು ಸತ್ಯಶೋಧನೆಯೆಡೆಗೆ ತಿರುಗಿ ಸಾಗುತ್ತದೆ. ಜೀವನದ ಉದ್ದೇಶ-ನಿಲುವುಗಳು ಉತ್ತಮವಾಗಿದ್ದರೆ ದುಷ್ಟ ಮನಸ್ಸುಗಳಿಂದ ರಕ್ಷಣೆ ಪಡೆಯಬಹುದು. ಇಂತಹ ಆದರ್ಶವನ್ನು ನಂಬಿರುವ ಹೆಣ್ಣಿನ ಬದುಕಿನ ತಿರುವುಗಳ ಸಾರವೇ ’ಸಹನಾ’ ಒಳಗೊಂಡಿದೆ.

 

About the Author

ಡಾ. ಶಾಲಿನಿ. ವಿ. ಎಲ್‌
(10 April 1991)

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ವೈಜಕೂರು ಗ್ರಾಮದಲ್ಲಿ ಲೇಖಕಿ ಡಾ. ಶಾಲಿನಿ ವಿ.ಎಲ್. ಅವರು 11 ಏಪ್ರಿಲ್ 1991 ರಲ್ಲಿ ಜನಿಸಿದರು. ಆದರೆ, ಬೆಳೆದಿದ್ದು ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಹಳೇಬೀಡಿನಲ್ಲಿ. ಹಾಸನದಲ್ಲಿ ಎಂಬಿಬಿಎಸ್‌ ಪದವಿ ನಂತರ ಅನ್ನಾಮಲೈ ಯೂನಿವರ್ಸಿಟಿ, ಚಿದಂಬರಂನಿಂದ ಡಿಪಿಎಚ್‌ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ವೈದ್ಯರಾದರೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯ ಫಲವಾಗಿ ’ಸಹನಾ- ಆದರ್ಶಗಳೊಂದಿಗೆ ಜೀವನ’ ಹಾಗೂ ’ಅನರ್ಘ್ಯ ರತ್ನ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ, ಅವರ ಸಾಹಿತ್ಯ ಸೇವೆಗೆ 2019 ನೇ ಸಾಲಿನ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಬೇಲೂರು ತಾಲ್ಲೂಕು ಹಗರೆ ಪ್ರಾಥಮಿಕ ...

READ MORE

Related Books