ಕೈಲಾಸಂ ಕತೆಗಳು

Author : ಟಿ.ಪಿ. ಕೈಲಾಸಂ

Pages 72

₹ 30.00




Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004

Synopsys

ಕೈಲಾಸಂ ಅವರ ನಾಟಕವನ್ನು ಬರೆದುಕೊಳ್ಳುವುದಕ್ಕೆ ಸಿದ್ದರಾಗಿ ಒಬ್ಬರು ಕುಳಿತಿದ್ದರಂತೆ. ಕೈಲಾಸಂ ಒಂದಿಷ್ಟು ಯೋಚಿಸಿ, ಬರ್‍ಕೊ.. ಸ್ಥಳ: ಕಸ್ಬಾ ಹೋಬ್ಳಿ ಅಂದರಂತೆ. ಲಿಪಿಕಾರ ಅದನ್ನು ’ಕಸಬಾ ಹೋಬಳಿ’ ಎಂದು ಬರೆದುಕೊಂಡರಂತೆ. ’ಅಲ್ಲ ಮಗು, ’ಸ’ಕ್ಕೆ ಇಳೀ ಕೊಟ್ಟು ’ಬವೊತ್ತು’ ಹಾಕು, ’ಕಸ್ಬಾ’ ಅಂತ ಬರಿ. ’ಬ’ಗೆ ಗುಡಿಸಿಕೊಟ್ಟು ’ಳವೊತ್ತು’ ಹಾಕು. ಹೋಬ್ಳಿ ಅಂದ ಬರಿ ಅಂದರಂತೆ, ಅದಕ್ಕೆ ಲಿಪಿಕಾರ ’ಕಸ್ಬಾ ಹೋಬ್ಳೀ’ ಅಂತ ಬರೆದರೆ ನೋಡಿದೋರೆಲ್ಲಾ ನಗುತಾರೆ! ಅಂದರಂತೆ. ’ಅದಕ್ಕೆ ಹಾಗೆ ಬರೆಯೋದು, ಅವರು ನಗಬೇಕು ಅಂತಾನೆ ಹಾಗೆ ಬರೆಯೋದ ಅಂದರಂತೆ. ಹೀಗೆ ಬರೆದು ಎಲ್ಲರನ್ನೂ ನಗಿಸುತ್ತಾ ತಾವು ಮಾತ್ರ ಎಲ್ಲ ದುಃಖಗಳನ್ನೂ ನುಂಗಿ ಒಂಟಿಯಾಗೇ ಬದುಕು ಸವೆಸಿದವರು ಕೈಲಾಸಂ.
ನಾಟಕಕಾರ ಕೈಲಾಸಂ ಕಥೆಗಳನ್ನು ಬರೆದದ್ದು ಅಪರೂಪವೇ, ಸಿಕ್ಕಿರೋದು ಐದೇ ಕಥೆಗಳು. ಅವುಗಳಲ್ಲೂ ಕಥೆಗಿಂತ ಅವರ ಭಾಷಾ ನೈಪುಣ್ಯತೆ ಎದ್ದು ಕಾಣುತ್ತದೆ. ಕನ್ನಡ-ತಮಿಳು-ತೆಲುಗು-ಉರ್ದು-ಇಂಗ್ಲಿಷ್‌ ಎಲ್ಲಾ ಭಾಷೆಗಳೂ ಈ ಐದು ಕಥೆಗಳಲ್ಲಿ ಮೇಳೈಸಿ ಆರನೆಯದೇ ಒಂದು ಭಾಷೆ ಸೃಷ್ಟಿಯಾಗಿದೆ. ಮೊದಲ ಓದಿಗೆ ಏನೂ ಅರ್ಥವಾಗುವುದಿಲ್ಲ ನಿಧಾನವಾಗಿ ಓದಬೇಕು. ಆಗಾಗ ಓದಬೇಕು. ಆಗಲೇ ಕೈಲಾಸಂ ಅರ್ಥವಾಗುವುದು ಎಂದು ಬೆನ್ನುಡಿಯಲ್ಲಿ ಪ್ರಕಾಶ ಕಂಬತ್ತಳ್ಲಿ ಬರೆದಿದ್ದಾರೆ.

About the Author

ಟಿ.ಪಿ. ಕೈಲಾಸಂ
(26 July 1885 - 23 November 1946)

ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ 26-07-1885ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ – ಕಲಮಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ 1908ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಬಿ ಎ ಪದವಿಗಳಿಸಿದರು. ಪ್ರೌಢವ್ಯಾಸಂಗಕ್ಕೆ ಲಂಡನ್ನಿಗೆ ತೆರಳಿ 6 ವರ್ಷಗಳ ಕಾಲ ಭೂಗರ್ಭಶಾಸ್ತ್ರ ಅಭ್ಯಸಿಸಿ 1915ಕ್ಕೆ ಬೆಂಗಳೂರಿಗೆ ಹಿಂತಿರುಗಿದರು. ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಶೋಧಕರಾಗಿ ಸೇರಿ 5 ವರ್ಷ ಉದ್ಯೋಗ ಮಾಡಿದರು. ಅನಂತರ ರಾಜೀನಾಮೆ ನೀಡಿ ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು. ವ್ಯಾಯಾಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕೈಲಾಸಂ ಕನ್ನಡ ...

READ MORE

Related Books