ಗೋವಿನ ಜಾಡು

Author : ಗುರುಪ್ರಸಾದ್‌ ಕಂಟಲಗೆರೆYear of Publication: 2018
Published by: ಕಂಟಲಗೆರೆ ಬುಕ್ಸ್

Synopsys

ಗುರುಪ್ರಸಾದ್ ಕಂಟಲಗೆರೆ ಅವರ ಕಥಾ ಸಂಕಲನ ‘ಗೋವಿನ ಜಾಡು’. ದಲಿತ ಸಮುದಾಯದ ತವಕ ತಲ್ಲಣಗಳನ್ನು ಒಳಗೊಂಡ ಕಥೆಗಳಲ್ಲಿ ಸಾಮಾನ್ಯವಾಗಿ ಕಾಣಿಸುವ ಸಮಸ್ಯೆಗಳು ಎರಡು ಬಗೆಯವು. ಒಂದು, ಕಥೆಗಾರನಿಗೆ ತಾನು ಹೇಳಬೇಕಾದ ಕಥೆಯೇ (ವಸ್ತುವೇ) ಮುಖ್ಯವಾಗಿ, ಶಿಲ್ಪ ಹಾಗೂ ಭಾಷೆ ಸೊರಗುವುದು. ಎರಡನೆಯದು, ಕಥೆಗಾರ ತಾನು ಮುಖಾಮುಖಿ ಆಗಲು ಹೊರಟಿರುವ ತಲ್ಲಣದ ಭಾಗವಾಗಿಯೇ ಕಥೆ ನಿರೂಪಿಸುವುದರಿಂದ ಉಂಟಾಗುವ ತೊಡಕುಗಳು. ಈ ತೊಡಕುಗಳ ಸಂದರ್ಭದಲ್ಲಿ ಕಥೆ ತನ್ನ ಧ್ವನಿಶಕ್ತಿಯನ್ನು ಮುಕ್ಕಾಗಿಸಿಕೊಂಡು ಭಾವುಕ ನೆಲೆಯಲ್ಲಿ ಕೊನೆಗೊಳ್ಳುತ್ತದೆ. ಇವುಗಳ ಜೊತೆಗೆ ಮತ್ತೊಂದು ಸಮಸ್ಯೆಯೂ ಇದೆ: ಊರುಕೇರಿಯ ನುಡಿಗಟ್ಟನ್ನು ಬಳಸುವ ಉಮೇದು ಮತ್ತು ಭಾಷೆಯ ಮೋಹಕತೆಗೆ ಮರುಳಾಗಿ, ಆತ್ಯಂತಿಕ ಸಂಕಟಗಳನ್ನು ಕೂಡ ಮೋಹಕವಾಗಿ ಚಿತ್ರಿಸುವುದು. ಈ ಸಮಸ್ಯೆಗಳನ್ನು ಸಾಕಷ್ಟು ಮಟ್ಟಿಗೆ ನಿವಾರಿಸಿಕೊಂಡಿರುವುದು ‘ಗೋವಿನ ಜಾಡು’‌ ಸಂಕಲನದ ವಿಶೇಷ. ಕೃತಿಯಲ್ಲಿ ಒಟ್ಟು ಎಂಟು ಕಥೆಗಳಿವೆ.

About the Author

ಗುರುಪ್ರಸಾದ್‌ ಕಂಟಲಗೆರೆ

ತಮ್ಮ ಅನುಭವಗಳನ್ನು ಗಟ್ಟಿಯಾಗಿ ಕಥೆಗಳ ಮೂಲಕ ದನಿಸಿದವರು ಗುರುಪ್ರಸಾದ್‌ ಕಂಟಲಗೆರೆ. ಮೂಲತಃ ತುಮಕೂರಿನ ಕಂಟಲಗೆರೆಯವರು. ವೃತ್ತಿಯಲ್ಲಿ ಶಿಕ್ಷಕರು. ತಮ್ಮ ವೃತ್ತಿಯೊಂದಿಗೆ ಸಾಹಿತ್ಯ ಪ್ರೇಮವನ್ನು ಸಮಾನವಾಗಿ ನಿರ್ವಹಿಸುತ್ತಿರುವವರು. ತಮ್ಮ ಸಂವೇದನೆಗಳನ್ನು ಅಚ್ಚರಿ ಎನ್ನುವಂತೆ ಅಚ್ಚಿಳಿಸುವ ಯುವ ಬರೆಹಗಾರ. ಪ್ರಜಾವಾಣಿ, ವಿಜಯಕರ್ನಾಟಕ ಕತಾ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನ ಪಡೆದಿದ್ದಾರೆ. 2017 ನೇ ಸಾಲಿನ ‘ಅನನ್ಯ ಪ್ರಶಸ್ತಿ’ ಅವರ ’ಗೋವಿನ ಜಾಡು’ ಕತಾ ಸಂಕಲನಕ್ಕೆ ಲಭಿಸಿದೆ. ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಅವರ ಮತ್ತೊಂದು ಕೃತಿ. ...

READ MORE

Related Books