ಎಲ್ಲವನ್ನು ಕಳೆದುಕೊಂಡು

Author : ತಿರುಪತಿ ನಾಯಕ್

Pages 104

₹ 90.00




Year of Publication: 2013
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಎಲ್ಲವನ್ನು ಕಳೆದುಕೊಂಡು- ತಿರುಪತಿ ನಾಯಕ್ ಅವರ ಎರಡನೇ ಕಥಾ ಸಂಕಲನ. ಕಥೆಯನ್ನು ಹೇಳುವುದು ಮಾನವನಿಗೇ ಅನಾದಿಕಾಲದಿಂದ ಅಂಟಿಕೊಂಡ ಹವ್ಯಾಸ. ಕಥೆಗಳನ್ನು ಬರೆಯುವಾಗ ಆತ್ಮದಲ್ಲಿ ಸ್ಫೋಟಗೊಳ್ಳುವ ವೈಚಾರಿಕ ಚಿಂತನೆಗಳನ್ನು ಹೇಳಬೇಕೆನಿಸುತ್ತದೆ. ಮತ್ತೆ ಇವುಗಳನ್ನು ಓದುಗನ ಆಸಕ್ತಿಗಳಿಗೆ ಮೆಚ್ಚುಗೆಯಾಗುವಂತೆ ಬರೆಯಬೇಕೋ ಅಥವಾ ಈಗಾಗಲೇ ಜನಪ್ರಿಯರಾಗಿರುವ ಕಥೆಗಾರರನ್ನು ಅನುಕರಿಸಬೇಕೋ ಎಂಬ ದ್ವಂದ್ವಗಳಲ್ಲಿ ಕಥೆಗಾರ ಬೀಳುವುದು ಸಹಜ. ಪ್ರಸ್ತುತ ಎಲ್ಲವನ್ನು ಕಳೆದುಕೊಂಡು ಕಥಾ ಸಂಕಲನದಲ್ಲಿ ಐದು ಕಥೆಗಳಿದ್ದು, ಪ್ರತಿ ಕಥೆಯೂ ಒಂದೊಂದು ಸಾಮಾಜಿಕ ಸಮಸ್ಯೆಗಳನ್ನು ತೆಗೆದುಕೊಂಡು ಮಂಥನ ನಡೆಸಲು ಪ್ರಯತ್ನಿಸುವಂತಿದೆ.

About the Author

ತಿರುಪತಿ ನಾಯಕ್

ತಿರುಪತಿ ನಾಯಕ್- 1968ರಲ್ಲಿ ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕು, ಆಶಿಹಾಳ ತಾಂಡದಲ್ಲಿ ಜನಿಸಿದರು. ಆಶಿಹಾಳ್, ಮುದಗಲ್, ಮುದ್ದೇಬಿಹಾಳ್, ಧಾರವಾಡ, ಚಿದಂಬರಂ ಊರುಗಳಲ್ಲಿ ವ್ಯಾಸಂಗ, ಕನ್ನಡ, ಅರ್ಥಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿ. ಮಲೆನಾಡಿನ ವಿವಿಧ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕ ವೃತ್ತಿ. ಕನ್ನಡ ಸಾಹಿತ್ಯ ಪರಿಷತ್ತು, ಭಾರತೀಯ ರೆಡ್‌ಕ್ರಾಸ್‌ನಲ್ಲಿ ಸಕ್ರಿಯ ಸೇವೆ. ಕನ್ನಡದ ಪ್ರಸಿದ್ದ ಪತ್ರಿಕೆಗಳಲ್ಲಿ ಬರೆದ ಅನುಭವ. ಆಕಾಶವಾಣಿಗಳಲ್ಲಿ ಹಲವಾರು ಚಿಂತನಗಳು, 'ಹಳ್ಳಿಗಳು ಸಾಯುತ್ತಿವೆ' ಪ್ರಬಂಧ ಸಂಕಲನಕ್ಕೆ ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, 'ಗಂಧ ಕುಸುಮ', 'ಭಾವ ಬಯಲು', 'ದೀಪವಿಲ್ಲದ ದಾರಿ', 'ದಮನಿತೆ' ಕವನ ಸಂಕಲನಗಳು. 'ಮುಳುಗಿದವರು', 'ನದಿ ...

READ MORE

Related Books