ಕಾಗೆ ಮತ್ತು ಕಡ್ಲೆಬೇಳೆ ಪಾಯಸ

Author : ಸಂತೋಷ್ ಅನಂತಪುರ

Pages 112

₹ 125.00
Year of Publication: 2020
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001,
Phone: 08022161900

Synopsys

ಲೇಖಕ ಹಾಗೂ ಕಥೆಗಾರ ಸಂತೋಷ ಅನಂತಪುರ ಅವರ ಕಥಾ ಸಂಕಲನ-ಕಾಗೆ ಮತ್ತು ಕಡ್ಲೆಬೇಳೆ ಪಾಯಸ. ಹರಿವ ತೊರೆಯ ಲಹರಿ, ಸಂಸಾರ ಬಂಧನಾತ್, ಹೇಳಿಕೊಳ್ಳಲಾಗದ ನಾನು, ಕಿ....ಕಾ...., ಚೆಂಡೆ, ಪೈದಂಗಳೆ, ಕಾಗೆ ಮತ್ತು ಕಡ್ಲೆಬೇಳೆ ಪಾಯಸ, ಮಧುಕರ ವೃತ್ತಿ ಎನ್ನದು, ನಂಬಿದ ದೈವ, ಜನ್ಮಾಂತರ ಹಾಗೂ ಗಂಧ ಹೀಗೆ ಒಟ್ಟು 11 ಕಥೆಗಳನ್ನು ಒಳಗೊಂಡಿದೆ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.

ಕೃತಿಗೆ ಮುನ್ನುಡಿ ಬರೆದ ಸಾಹಿತಿ ಡಾ. ನಾ. ದಾಮೋದರ ಶೆಟ್ಟಿ ‘ಹೇಳುವ ವಿಷಯ ಸೀಮಿತ ರೂಪದ್ದಾದರೂ, ಭಾಷೆ -ಭಾವಗಳ ಮೂಲಕ ವಸ್ತುವನ್ನು ಕಟ್ಟಿಕೊಡುವ ತಂತ್ರಗಾರಿಕೆ ಇದೆ. ಪ್ರಯೋಗಶೀಲತೆಯೂ ಇದೆ’ ಎಂದು ಕಥೆಗಳನ್ನು ಪ್ರಶಂಸಿಸಿದ್ದಾರೆ. 

About the Author

ಸಂತೋಷ್ ಅನಂತಪುರ

ಲೇಖಕ ಸಂತೋಷ್ ಅನಂತಪುರ ಅವರು ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರದವರು. ಕೇರಳ ರಾಜ್ಯದಲ್ಲೇ ಪದವಿಪೂರ್ವ ಶಿಕ್ಷಣ ಪೂರೈಸಿ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಹಾಗೂ ಮಂಗಳೂರು ವಿ.ವಿ.ಯಿಂದ ಪತ್ರಿಕೋದ್ಯಮದಲ್ಲಿ  ಸ್ನಾತಕೋತ್ತರ ಪದವಿ ಪಡೆದರು. ವಿದ್ಯಾ ಸಂಸ್ಥೆ ಹಾಗೂ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಸದ್ಯ, ಬೆಂಗಳೂರಿನಲ್ಲಿ ಇನ್ಫೋಸಿಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಥೆ-ಕವನ - ಲೇಖನಗಳು ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಜಿಡ್ಡು ಕೃಷ್ಣಮೂರ್ತಿ ಅವರ ಒಂದು ಆಂಗ್ಲ ಕೃತಿ ಹಾಗೂ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಕೃತಿಗಳು: ಕಾಗೆ ...

READ MORE

Related Books