ಆ ಬದಿಯ ಹೂವು

Author : ದೀಪ್ತಿ ಭದ್ರಾವತಿ

Pages 120

₹ 90.00




Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ, 100 ಅಡಿ ರಸ್ತೆ, ರಾಜೇಂದ್ರನಗರ, ಶಿವಮೊಗ್ಗ
Phone: 978338197610

Synopsys

`ಆ ಬದಿಯ ಹೂವು’  ದೀಪ್ತಿ ಭದ್ರಾವತಿ ಅವರ ಮೊದಲ ಕಥಾ ಗುಚ್ಚ. ಓದುಗನ ಮುಖಕ್ಕೇ ಹಿಡಿದ ಕನ್ನಡಿಯಂತೆ ಇಲ್ಲಿನ ಕತೆಗಳು ಕಾಣುವುದು ವಿಶೇಷ. 

ಮೊದಲ ಕಥೆ ತಿಮ್ಮಯ್ಯ ಮಾರ್ಕೆಟ್,ಯಾವುದೇ ನಗರಪ್ರದೇಶಗಳಲ್ಲಾದರೂ ವಲಸೆ ಬಂದವರು ವ್ಯಾಪಾರಸ್ಥರಾಗುತ್ತಾರೆ ಸ್ಥಳೀಯರು ಕೊಂಡು, ನಗರ ಮತ್ತು ವಲಸಿಗರನ್ನು ಜೀರ್ಣೋದ್ಧಾರ ಮಾಡುತ್ತಾರೆ.

ಇಲ್ಲೂ ಹಾಗೆ ಭದ್ರಾವತಿಯ ತುಂಬು ಬಿಸಿಲನ್ನು ಹೊತ್ತು ತಂದ ಬೆಂಕಿಪುರಕ್ಕೆ ಇಳಂಗೋವನ್ ಎಂಬ ವ್ಯಕ್ತಿ ತಮಿಳುನಾಡಿನಿಂದ ಬಂದು ತಿಮ್ಮಯ್ಯ ಮಾರ್ಕೆಟಿನಲ್ಲಿ ಸಣ್ಣದೊಂದು ಅಂಗಡಿ ತೆರೆದು ವ್ಯಾವಹಾರಿವಾಗಿ ತನ್ನ ಚಾಣಾಕ್ಷತನದಿಂದ ಮುಂದೆ ಬಂದು ಕೆಲವರ ದ್ವೇಷ ಕಟ್ಟಿಕೊಂಡು ಎದುರು ಅಂಗಡಿಯ ಮಲ್ಲೇಶನಿಂದ ವ್ಯಾಪಾರದ ಜಿದ್ದಿನ ಜಗಳದಲ್ಲಿ ಕೊಲೆಯಾಗುತ್ತಾನೆ,ಕೊಲೆ ಮಾಡಿದ ಮಲ್ಲೇಶ ಜೈಲ್ ಸೇರಿದ್ರೆ ಇತ್ತ ಇಳಂನ ಹೆಂಡತಿ ಮಾರಿಮುತ್ತು ಮಾರುಕಟ್ಟೆಗೆ ಯಾವುದೇ ವ್ಯಾಪಾರದ ಅನುಭವವಿಲ್ಲದೆ ವ್ಯವಹಾರದ ಜ್ಞಾನವೂ, ಇಲ್ಲದೇ ಕಾಲಿಡುತ್ತಾಳೆ. ಅತ್ತ ಮಲ್ಲೇಶನ ಹೆಂಡತಿ ಜಾಂಬವತಿ ಗಂಡನ ಬದಲಿಗೆ ವ್ಯಾಪಾರ ಮಾಡುತ್ತಾಳೆ ,ಇದೊಂದು ಕಥೆ ನಾಲ್ಕು ಪಾತ್ರಗಳಿಂದ ತುಂಬಿದ್ರು ನಗರದ ಜೀವನ ಬಹುಪಾಲು ಮಾರುಕಟ್ಟೆಯನ್ನೇ ಅವಲಂಬಿಸಿರುತ್ತೆ.

ಇದೊಂದೇ ಅಲ್ಲಾ , ಮನುಷ್ಯನ ಯಾಂತ್ರಿಕ ಜೀವನ ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳ ಬೆಲೆ ಏರಿಳಿತಗಳಂತೆ ಜೀವನವೂ ಅದರ ತಕ್ಕಡಿ ಬಟ್ಟಿನಂತೆ ಕಾಣುತ್ತವೆ , ಕಥೆ ಇಷ್ಟು ಬೇಗ ಮುಗಿದೆ ಹೋಯಿತು ಎನ್ನುವುದರೊಳಗೆ ಎದುರು ನಿಂತು ಕರೆವ ರಸ್ತೆ ಬದಿಯ ಹೂವಿನಂತೆ ಮತ್ತೊಂದು ಕಥೆ ಆರಂಭವಾಗುತ್ತದೆ.

About the Author

ದೀಪ್ತಿ ಭದ್ರಾವತಿ

ದೀಪ್ತಿ ಭದ್ರಾವತಿ -ದಕ್ಷಿಣ ಕನ್ನಡದ ಮರವಂತೆ ಮೂಲದವರು. ಚಿಕ್ಕಮಂಗಳೂರಿನ ನಕ್ಕರಿಕೆ ಎಂಬ ಕುಗ್ರಾಮದಲ್ಲಿ ಹುಟ್ಟಿದ್ದು, ಹೆಸರು ಕೇವಲ ದೀಪ್ತಿ ಮಾತ್ರ ಆದರೆ ಭದ್ರಾವತಿಯ ಜೊತೆ ಅವಿನಾಭಾವ ಸಂಬಂಧ ಇರುವುದರಿಂದ ಹಾಗೂ ಅವರ ಜೀವನದಲ್ಲಿ ಬಾಲ್ಯದಿಂದ ಯೌವನದವರೆಗೆ ಭದ್ರಾವತಿಯ ಕೊಡುಗೆ ತುಂಬಾ ಇರುವುದರಿಂದ ದೀಪ್ತಿ ಭದ್ರಾವತಿ ಎಂಬ ಹೆಸರಿನಿಂದ ಕಾವ್ಯವನ್ನು ಬರೆಯುತ್ತಾರೆ. ದೀಪ್ತಿಯವರು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವೀಧರರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನೂ ಹಾಗೂ ಹಿಂದಿಯಲ್ಲಿ ವಿಶಾರದ ಪದವಿಯನ್ನು ಪಡೆದಿದ್ದಾರೆ. ಪದವಿಪೂರ್ವದಲ್ಲಿ ವಿಜ್ಞಾನದ ವಿದ್ಯಾರ್ಥಿನಿಯಾಗಿದ್ದ ಇವರಿಗೆ ಸಾಹಿತ್ಯ ಕ್ಷೇತ್ರದ ಆಕರ್ಷಣೆ ಬೇರೆ ಬೇರೆ ಪದವಿಗಳಿಗೆ ಅನುವು ಮಾಡಿಕೊಟ್ಟಿತ್ತು. ಪ್ರಸ್ತುತ ಸರಕಾರಿ ...

READ MORE

Related Books