ಸವಾರಿ ಹಾಗೂ ಇತರ ಕತೆಗಳು

Author : ಅಮರೇಶ ನುಗಡೋಣಿ

Pages 207

₹ 180.00
Year of Publication: 2021
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಪೋಸ್ಟ್, ಎಮ್ಮಿಗನೂರು-583113, ಬಳ್ಳಾರಿ.
Phone: 9480353507

Synopsys

`ಸವಾರಿ ಹಾಗೂ ಇತರ ಕತೆಗಳು’ ಖ್ಯಾತ ಕಥೆಗಾರ ಅಮರೇಶ ನುಗಡೋಣಿ ಅವರ ಕತಾಸಂಕಲನ. ಕೃತಿಗೆ ಬೆನ್ನುಡಿ ಬರೆದಿರುವ ಕೆ.ವಿ ನಾರಾಯಣ ಅವರು, ‘ಕತೆಯ ಭಿತ್ತಿ ಸಾಮಾಜಿಕವಾಗಿದ್ದು, ಸಾಮಾಜಿಕತೆಯನ್ನೇ ಮುಖ್ಯ ಆಸಕ್ತಿಯನ್ನಾಗಿ ಮಾಡಿಕೊಂಡಿದೆ. ಅಮರೇಶ ನುಗಡೋಣಿಯವರ ಕತನದ ಕೇಂದ್ರದಲ್ಲಿಈಗಲೂ ಮನುಷ್ಯರಾಗಿದ್ದಾರೆ. ಆ ಮನುಷ್ಯರಿಗೆ ಸಾಮಾಜಿಕ ಚಹರೆಗಳಿವೆ. ಆದರೆ ಅವರ ಮೂಲಕ ಅಮರೇಶ ಹುಡುಕುತ್ತಿರುವುದು ಆ ಜನರ ಸಾಮಾಜಿಕ ವ್ಯಕ್ತಿತ್ವವನ್ನಲ್ಲ; ಬದಲಿಗೆ ಮನುಷ್ಯತ್ವದ ತಿರುಳನ್ನು ಕಾಣಬಯಸುತ್ತಿದ್ದಾರೆ. ಇದೆಲ್ಲದರ ಜೊತೆಗೆ, ತಮ್ಮ ಸೃಷ್ಠಿಗೆ ತಾನೇ ಎಂದೂ ಬೆರಗಾಗದಿರುವ , ಅದನ್ನೊಮ್ಮೆ ನಿಂತು ನೋಡ ಬಯಸದ ವಿಶಿಷ್ಠತೆ ಅವರಲ್ಲಿದೆ. ಇದು ಅವರ ಕತನದ ಹಾದಿಗೆ ಬೇರೆಯದೇ ಆದ ಮೆರುಗನ್ನು ತಂದಿದೆ. ಅವರು ರಾಯಚೂರಿನ ಆಸುಪಾಸಿನ ಕನ್ನಡವನ್ನು ತಮ್ಮ ಕತೆಗಳಲ್ಲಿ ಬಳಸುತ್ತಾರೆ. ಇವರ ಕತಾನಕವು ಭಾಷಾ ಸೊಗಡನ್ನು ಎತ್ತಿಹಿಡಿಯುವಂತಿರುತ್ತದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಅಮರೇಶ ನುಗಡೋಣಿ
(02 June 1969)

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...

READ MORE

Related Books