
‘ಹೂ ಮನಸ್ಸಿನ ಕಥೆಗಾರ’ ಹಂಝಮಲಾರ್ ಅವರ ಕಥಾಸಂಕಲನವಾಗಿದೆ. ನಿರ್ಗತಿಕರ, ಅಸಹಾಯಕರ ಪರವಾಗಿ ದನಿಯೆತ್ತಿರುವ ಈ ಕಥೆಗಳು ಓದಿ ಮರೆಯುವಂಥವಲ್ಲ. ವಿವಿಧ ಬಗೆಯ ಜನರ ಸಂಪರ್ಕದಿಂದ ಸಂಗ್ರಹಿಸಿದ ಮಾಹಿತಿಯಿಂದ ಕಥೆಗಳು ನೈಜವಾಗಿ ಮೂಡಿಬಂದಿವೆ.

ಹಂಝ ಮಲಾರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಅವರು ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದಾರೆ. ಅನೇಕ ಗೋಷ್ಠಿಗಳಲ್ಲಿ ಕವನ ವಾಚನಗಳನ್ನು ಮಾಡಿದ್ದಾರೆ. ...
READ MORE
ಹೊಸತು- ಡಿಸೆಂಬರ್ -2003
ಎಳವೆಯಲ್ಲೇ ವಯಸ್ಸಿಗೂ ಮೀರಿದ ಸಾಧನೆಗೈದು "ಮೈಲಾಂಜಿ" ಎಂಬ ಬ್ಯಾರಿ ಭಾಷಾ ಪತ್ರಿಕೆಯನ್ನೂ ನಡೆಸುತ್ತ ಕಥೆಗಳನ್ನೂ ಬರೆಯುತ್ತಿರುವ ಹಂಝ ಮಲಾರ್ ತನ್ನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಾಗ ಸಂತಸವಾಗುತ್ತದೆ. 28ರ ಹರೆಯದ ಹುಡುಗನನ್ನು ಕತೆಗಾರರನ್ನಾಗಿ ಗುರುತಿಸಲು ನಮಗೂ ಹೆಮ್ಮೆಯೆನಿಸುತ್ತದೆ. ನಿರ್ಗತಿಕರ, ಅಸಹಾಯಕರ ಪರವಾಗಿ ದನಿಯೆತ್ತಿರುವ ಈ ಕಥೆಗಳು ಓದಿ ಮರೆಯುವಂಥವಲ್ಲ. ವಿವಿಧ ಬಗೆಯ ಜನರ ಸಂಪರ್ಕದಿಂದ ಸಂಗ್ರಹಿಸಿದ ಮಾಹಿತಿಯಿಂದ ಕಥೆಗಳು ನೈಜವಾಗಿ ಮೂಡಿಬಂದಿವೆ.
