ಪಾಪಪ್ರಜ್ಞೆ

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 64

₹ 60.00




Published by: ಜೋಳಿಗೆ ಪ್ರಕಾಶನ
Address: ನಂ. 13, ಕರಿನಂಜನಪುರ ಹೊಸ ಬಡಾವಣೆ, ಬುದ್ಧನಗರ, ಚಾಮರಾಜನಗರ ಟೌನ್ - 571313
Phone: 9845993527

Synopsys

‘ಪಾಪಪ್ರಜ್ಞೆ’ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕತಾಸಂಕಲನ. ಮೋಹನ ದೀಪ(1999) ಕಥಾ ಸಂಕಲನದ ನಂತರ ಇವರು ಬರೆದಿರುವ ಕತೆಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ. ಸಾಮಾಜಿಕ ತುಡಿತ ಹಾಗೂ ಸಂಯಮ ಎರಡನ್ನೂ ಸಾಧಿಸಿಕೊಂಡಿರುವ ಇವರ ಬರವಣಿಗೆ, ಈ ಸಂಕಲನದಲ್ಲಿ ಹೆಚ್ಚಿನ ಆಯಾಮ ಮತ್ತು ವ್ಯಾಪ್ತಿಯನ್ನು ಗಳಿಸಿಕೊಳ್ಳುವತ್ತ ಯತ್ನಿಸಿವೆ. ಈ ಕತೆಗಳು ಸಹೃದಯರ ಮೆಚ್ಚುಗೆಗಳಿಸುವುದರಲ್ಲಿ ಸಂದೇಹವಿಲ್ಲ. ಈ ಸಂಕಲನದಲ್ಲಿ ನಿಯೋಗ, ಹೀಗೊಂದು ಪ್ರಕರಣ, ಪಾಪಪ್ರಜ್ಞೆ, ಅಣ್ಣಾಜಿ, ನೀಲಿ ಬಾವುಟಗಳು ಕತೆಗಳು ಸಂಕಲನಗೊಂಡಿವೆ.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books