ಇನ್ನಷ್ಟು ಹೊಸ ಕಥೆಗಳು

Author : ಜಿ. ಬಿ. ಜೋಶಿ

Pages 182

₹ 6.00
Year of Publication: 1972
Published by: ಮನೋಹರ ಗ್ರಂಥ ಮಾಲಾ
Address: ಮನೋಹರ ಗ್ರಂಥಮಾಲೆ ಲಕ್ಷ್ಮೀ ಭವನ, ಸುಭಾಸ ರೋಡ ಧಾರವಾಡ – 1

Synopsys

ಜಡಭರತ ಎಂಬ ಕಾವ್ಯ ನಾಮದಿಂದ ಪ್ರಖ್ಯಾತರಾದ ಜಿ.ಬಿ. ಅವರು ಕನ್ನಡ ಸಾಹಿತ್ಯ ಲೋಕದ ಅಗ್ರಗಣ್ಯರಲ್ಲಿ ಒಬ್ಬರುಕತೆಗಳನ್ನು ಓದಲು ಬಯಸಿ, ಒಟ್ಟಾರೆ  ಹನ್ನೊಂದು ಕತೆಗಾರರ ಕತೆಗಳನ್ನು ಒಂದೆಡೆ ಸಂಪಾದಿಸಿ ಹೊರತಂದಿರುವ ’ಇನ್ನಷ್ಟು ಹೊಸ ಕತೆಗಳು’ ಕೃತಿ ಕನ್ನಡ ಕಥಾ ಸಾಹಿತ್ಯಕ್ಕೆ ನೀಡಿದ ಅಪೂರ್ವ ಕೊಡುಗೆ.

ಎ.ಕೆ ರಾಮಾನುಜನ್ ಅವರು ಬರೆದ ’ಅಣ್ಣಯ್ಯನ  ಮಾನವಶಾಸ್ತ್ರ ’ ಕತೆಯು ಓದುಗರನ್ನು ಮೋಡಿ ಮಾಡುವಂತದ್ದು, ಟಿ.ಎನ್. ಕೃಷ್ಣರಾಜು ಅವರ ’ ನಾಯಿಗಳು’ ಕತೆ ಹೊಸ ಅನುಭವ ಲೋಕವನ್ನು ತೆರೆದಿಡುತ್ತದೆ. ಇನ್ನೊಬ್ಬರಿಗೆ ಜೀವ ಕೊಡಲು ತಮ್ಮ ಮರಣಕ್ಕಾಗಿ ನಿಂತ ನಾಯಿಗಳ ವೇದನೆಯನ್ನು ಕತೆಯೊಳಗೆ ಬಿಂಬಿಸಿದ್ದಾರೆ. ಕಾಮರೂಪಿಯವರ ’ಪರದೇಶಿ’ ಕತೆಯು ಹೊಸ ಪ್ರಜ್ಞೆಯನ್ನು ಬಿತ್ತರಿಸುವಂತದ್ದು.

ಕವಿ ಚಂದ್ರಶೇಖರ ಕಂಬಾರರ ’ನಾರ್ಸಿಸಸ್’ ಕತೆ ಭಾಷೆಯ ಸತ್ವವನ್ನು ಪಡೆದುಕೊಂಡಿದೆ.  ವಿಷ್ಣುಶರಣ ರ ಕತೆ ’ಆಮೆ’, ಬಿ.ಟಿ. ದೇಸಾಯಿ ಅವರ ’ಹೋರಿ’ ಕತೆ, ಬಿ.ಸಿ ರಾಮಚಂದ್ರ ಶರ್ಮ  ಅವರ ’ಕೊಡತಿಹುಳ’, ಕೀರ್ತಿನಾಥ ಕುರ್ತಕೋಟಿ ಅವರ ’ಕಲಾವಿಹೀನಃ’ ಕತೆಯು ವಿಶಿಷ್ಟ ಅನುಭವ ಕೊಡುವ ’ಯೇಟ್ಸಿಯನ್ ’ಕತೆಯಾಗಿದೆ. ರಾಘವೇಂದ್ರ ಖಾಸನೀಸ ಅವರ ’ಅಲ್ಲಾಉದ್ದೀನನ ಅದ್ಭುತದೀಪ’ , ಪೂರ್ಣಚಂದ್ರ ತೇಜಸ್ವಿ ಅವರ ’ಅಬಚೂರಿನ ಪೋಸ್ಟಾಫೀಸು’, ಮತ್ತು ಕೊನೆಯ ಕತೆಯಾದ ’ಏನೋ ದೇವರೇ ಬಲ್ಲ!’ ಆರ್ಯರ ಈ ಕತೆ ಸಾಕಷ್ಟು ವಿವರಗಳಿಂದ ಭಯವನ್ನು ಹುಟ್ಟಿಸಿದರೂ ಕುತೂಹಲವನ್ನು ಕೆರಳಿಸುವಂತಿದೆ.

About the Author

ಜಿ. ಬಿ. ಜೋಶಿ
(26 July 1904)

ಪದ್ಮಶ್ರೀ ಗೋವಿಂದ ಭೀಮಾಚಾರ್ಯ ಜೋಶಿ ಇವರು 1904 ಜುಲೈ 26 ರಂದು ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದರು. ಜಿ.ಬಿ.ಜೋಶಿಯವರು 1933 ರಲ್ಲಿ ಮನೋಹರ ಗ್ರಂಥಮಾಲೆಯನ್ನು ಬೆಟಗೇರಿ ಕೃಷ್ಣಶರ್ಮ ಹಾಗೂ ಚುಳಕಿ ಗೋವಿಂದರಾವ ಇವರ ಜೊತೆಗೂಡಿ ಪ್ರಾರಂಭಿಸಿದರು. ಈ ಪ್ರಕಾಶನ ಸಂಸ್ಥೆಯ ಮೂಲಕ ಅನೇಕ ಖ್ಯಾತ ಲೇಖಕರನ್ನುಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಪರಿಚಯಿಸಿದರು.  1959 ರಲ್ಲಿ  ಹೊರಬಂದ ರಜತ ವರ್ಷದ ಕಾಣಿಕೆಯಾದ “ನಡೆದು ಬಂದ ದಾರಿ” ಮೂರು ಸಂಪುಟಗಳಲ್ಲಿ ಪ್ರಕಟವಾಯಿತು. ಈ ಹೊತ್ತಿಗೆಯಲ್ಲಿ ಪ್ರಕಟವಾದ ಕೀರ್ತಿನಾಥ ಕುರ್ತಕೋಟಿಯವರ ಕನ್ನಡ ಸಾಹಿತ್ಯದ ಸಮಗ್ರ ವಿಮರ್ಶೆ, ವಿಮರ್ಶಾಲೋಕದಲ್ಲಿ ಹೊಸ ಆಯಾಮವನ್ನು ತೆರೆಯಿತು. ಆ ಬಳಿಕ ವಿಮರ್ಶೆಯ ನಿಯತಕಾಲಿಕೆ  “ಮನ್ವಂತರ”ವನ್ನು ಪ್ರಾರಂಭಿಸಿದರು. ಜಿ.ಬಿ.ಜೋಶಿಯವರು ...

READ MORE

Related Books