ಗೋಪಾಲ ಸ್ವಾಮಿ ಹೊಂಡವೂ ಜಲನಾರಾಯಣನೂ...

Author : ಬಿ.ಎಲ್.ವೇಣು

Pages 136

₹ 85.00




Year of Publication: 2009
Published by: ಗೀತಾಂಜಲಿ ಪಬ್ಲಿಕೇಷನ್ಸ್
Address: ನಂ.134, ಎಂಟನೇ ಅಡ್ಡರಸ್ತೆ, ಗೋವಿಂದರಾಜನಗರ, ಬೆಂಗಳೂರು- 560040

Synopsys

ಸಾಹಿತ್ಯ ಹಾಗೂ ಸಿನಿಮಾ ರಂಗದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದ ಡಾ. ಬಿ ಎಲ್ ವೇಣು ನಾಲ್ಕು ದಶಕಗಳಿಂದ ಸತತವಾಗಿ ಬರೆಯುತ್ತಿರುವವರು.ಇಂದಿಗೂ ಎಪ್ಪತ್ತೇಳರ ಹರಯದಲ್ಲೂ ಅವರ ಉತ್ಸಾಹ ಕುಗ್ಗಿಲ್ಲ, ಅವರ ಕೃತಿಗಳಿಗೆ ಬೇಡಿಕೆ ತಗ್ಗಿಲ್ಲ.. ಬಡತನ, ಜಾತಿ ಮತ್ತು ಪ್ರೀತಿಯ ವಸ್ತುಗಳನ್ನಿಟ್ಟುಕೊಂಡು ಬರಹಗಳ ಮೂಲಕ ದಂಗೆ ಎದ್ದರು, ಕ್ರಾಂತಿ ಮಾಡಿದರು, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಲೆತ್ನಿಸಿದರು. ಸಮಕಾಲೀನತೆಗೆ ಮಿಡಿಯುತ್ತಲೇ ಬಂದವರು ವೇಣು.

ಕಥೆ, ಕಾದಂಬರಿ, ನಾಟಕ, ಅಂಕಣ, ಲೇಖನ, ಚಲನ ಚಿತ್ರ ಕಥೆಗಾರರಾಗಿ ಹೆಸರು ಹಾಗೂ ಜನಪ್ರಿಯತೆಯನ್ನು, ಜನಪರತೆಯನ್ನೂ ಉಳಿಸಿಕೊಂಡವರು. ನವೋದಯ, ನವ್ಯ, ಪ್ರಗತಿ ಶೀಲ, ನವ್ಯೋತ್ತರ, ಬಂಡಾಯ ಹೀಗೆ ಯಾವುದೇ ಇಸಂಗಳಿಗೆ ಸಿಲುಕದ ಸಮಾಜಮುಖಿ ಡಾ. ವೇಣು ಧೈರ್ಯವನ್ನು ಬಂಡವಾಳ ಮಾಡಿಕೊಂಡು ತಾವು ಕಂಡದ್ದನ್ನು, ತಮಗನ್ನಿಸಿದ್ದನ್ನು ಮುಲಾಜಿಲ್ಲದೆ , ಕಲಾತ್ಮಕವಾಗಿ ಬರೆದವರು. ಹಾಗಾಗಿ ಅವರಿಗೆ ಮುಖಸ್ತುತಿ ಮಾಡುವವರು ಇರುವಂತೆ ಹಿತಶತ್ರುಗಳೂ ಇದ್ದಾರೆ.

ಮೂವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು, ಅರವತ್ತು ಚಲನಚಿತ್ರಗಳಿಗೆ ಸಂಭಾಷಣೆಗಳನ್ನು ಬರೆದ ವೇಣು ವಾದಕ, ಗಾಯಕ ಡಾ. ವೇಣು ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅಸಂಖ್ಯಾತ ಮನ್ನಣೆ, ಗೌರವಗಳು ಅವರ ಯೋಗ್ಯತೆಯನ್ನು ಹುಡುಕಿಕೊಂಡು ಬಂದಿವೆ. ಸುಮಾರು ನೂರ ಮೂವತ್ತಕ್ಕೂ ಹೆಚ್ಚು ಕಥೆಗಳನ್ನು ಬರೆದಿರುವ ಡಾ. ಬಿ ಎಲ್ ವೇಣು ಅವರ ಎಂಟನೇ ಕಥಾಸಂಕಲನ, 'ಗೋಪಾಲ ಸ್ವಾಮಿ ಹೊಂಡವೂ ಜಲನಾರಾಯಣನೂ...'

ಈ ಸಂಕಲನದಲ್ಲಿ ಹದಿನೈದು ಕಥೆಗಳಿವೆ. ಪ್ರೇಮ ಕಥೆಗಳಿವೆ, ತುಳಿತಕ್ಕೊಳಗಾಗಿ ನೊಂದವರ ಕಥೆಗಳಿವೆ, ಮಠಾಧೀಶರ ಕಥೆಗಳಿವೆ, ಸ್ತ್ರೀ ಸಂವೇದನೆಯ ಕಥೆಗಳಿವೆ, ವೃದ್ದಾಪ್ಯದ ಕಥೆಗಳಿವೆ, ಧರ್ಮ ಸೂಕ್ಷ್ಮಕ್ಕೆ ಸಂಬಂಧಿಸಿದ ಕಥೆಗಳಿವೆ. ಈ ಕಥೆಗಳೆಲ್ಲಾ ಪ್ರಜಾವಾಣಿ, ಕನ್ನಡಪ್ರಭ, ಸುಧಾ, ತರಂಗ, ಮಯೂರ ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟವಾಗಿ ಓದುಗ ಮಹಾಶಯನ ಮೆಚ್ಚುಗೆ ಗಳಿಸಿವೆ. ಸಮಾಜದ ಓರೆ- ಕೋರೆಗಳಿಗೆ, ಹುಳುಕುಗಳಿಗೆ ಕನ್ನಡಿ ಹಿಡಿಯುವ ಇಲ್ಲಿನ ಕಥೆಗಳು ಸಾರ್ವಕಾಲೀಕ. ಚರ್ಚೆಗೆ, ಸಂಘರ್ಷಕ್ಕೆ ತೆರೆದುಕೊಳ್ಳುವ ವಸ್ತುಗಳು ಅವರ ಕಥಾ ಸಾಮಾಗ್ರಿಗಳು! ಅನುಭವವೇ ಮೂಲದ್ರವ್ಯವಾಗುಳ್ಳ ಕಥೆಗಳು ಓದುಗನ ಮನಸ್ಸಿನಲ್ಲಿ ಉಳಿದು ಚಿಂತನೆ ಗೈಯಲು ಅನುವು ಮಾಡಿಕೊಡುತ್ತವೆ. ಆಡು ಭಾಷೆ, ಸಹಜ ಭಾಷೆ, ಮೊನಚು ಭಾಷೆ,ಚುಚ್ಚು ಭಾಷೆ, ಮಡಿವಂತಿಕೆ ಮರೆತ ಭಾಷೆ, ಸಾಮಾಜಿಕ ಅವ್ಯವಸ್ಥೆಯನ್ನು ಝಾಡಿಸಲು ಕೋಪವೇ ಅಕ್ಷರಗಳಾದಂತೆ ಕತ್ತಿಯಂತೆ ಹರಿತವಾದ ಭಾಷೆಗಳ ಚಿತ್ರಮಯ ಭಾಷೆ ಮನಸ್ಸನ್ನು ಸೆರೆಹಿಡಿಯುತ್ತದೆ. ಕುತೂಹಲವನ್ನು ಹಿಡಿದಿಟ್ಟು ಅನೂಹ್ಯ ತಿರುವನ್ನೂ ಅಂತ್ಯದಲ್ಲಿ ಕಾಣಬಹುದಾದ ಕಥೆಗಳಿದ್ದರೂ ತಂತ್ರಗಾರಿಕೆ ವಿಪುಲವಾಗಿ ಕಂಡು ಬಂದಿಲ್ಲ.

About the Author

ಬಿ.ಎಲ್.ವೇಣು
(05 May 1945)

ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ. ಬಣ್ಣಗಳು, ದೊಡ್ಡ ಮನೆ, ಪ್ರೇಮ ಮದುವೆ ಮತ್ತು ಶೀಲ, ನೀಲವರ್ಣ, ದಲಿತಾವತಾರ, ಬಣ್ಣದ ಗೊಂಬಿ (ಕಥಾ ಸಂಕಲನಗಳು), ಪರಾಜಿತ, ಪ್ರೇಮಪರ್ವ, ಅಜೇಯ, ಬೆತ್ತಲೆ ಸೇವೆ, ಅತಂತ್ರರು, ಗಂಡುಗಲಿ ಮದಕರಿ ನಾಯಕ, ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ದ, ಹೆಬ್ಬುಲಿ ಹಿರೇಮದಕರಿನಾಯಕ (ಮುಂತಾದ 26 ಕಾದಂಬರಿಗಳು), ಸಹೃದಯಿ, ಬೇರುಬಿಟ್ಟವರು, ಶೋಧನೆ, ವೀರವನಿತೆ ಓಬವ್ವ, ಕ್ರಾಂತಿ (ಮಿನಿ ಕಾದಂಬರಿಗಳು), ಯಮಲೋಕದಲ್ಲಿ ಮಾನವ, ಭೂಲೋಕಕ್ಕೆ ಬಂದ ಬಸವಣ್ಣ, ...

READ MORE

Related Books