“ಮೋಹ”- ಮಧ್ಯಮ ಕುಟುಂಬದ ಮೂವರು ಹೆಣ್ಣು ಮಕ್ಕಳ ಬದುಕಿನ ಕಥಾಹಂದರವಾಗಿದೆ ಈ ಕಥೆ. ಆದರೆ. ಆಳದಲ್ಲಿ, ಪುರುಷ ಸಂವೇದನೆಗೂ ಪ್ರಾಮುಖ್ಯತೆ ಇದೆ. ತಂದೆ ತಾಯಿಯರು ಹೆಮ್ಮೆಯಿಂದ ಹೆಣ್ಣು ಮಕ್ಕಳನ್ನು ಬೆಳೆಸಿ ಮದುವೆ ಮಾಡುತ್ತಾರೆ. ಅವರಿಗೆ ಮಕ್ಕಳಾಗುತ್ತವೆ. ಈ ಮಕ್ಕಳ ಕಾಳಜಿ., ಬಾಣಂತನ ಹೀಗೆ ಸಮಯ ಕಳೆದುಕೊಂಡ ’ಶ್ರೀಕರ’ನ ದಾಂಪತ್ಯದ ಮೇಲಾಗುವ ಪರಿಣಾಮವೂ ಈ ಕಥೆ ಕಟ್ಟಿಕೊಡುತ್ತದೆ.
ಕನ್ನಡದ ಪ್ರಮುಖ ಕಾದಂಬರಿಗಾರ್ತಿ ಎನ್. ಶೈಲಜಾ ಮೂಲತಃ ಹಾಸನದವರು. ಅವರ ಅನೇಕ ಕಾದಂಬರಿಗಳು ಸುಧಾ, ತರಂಗ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಓದುಗರನ್ನು ತಲುಪಿ ಅಪಾರ ಮೆಚ್ಚುಗೆ ಪಡೆದಿವೆ. ಚಿಲ್ಲರೆ ಪುರಾಣ - ಹಾಸ್ಯ ಸಂಕಲನ, ಮತ್ತೊಂದು ಅಂಗಳ - ಕಥಾ ಸಂಕಲನ, ಬೊಗಸೆಯೊಳಗಿನ ಬಿಂದು - ಕವನ ಸಂಕಲನ. ’ಮಂಥನ, ಇಳಾ, ಮೋಹ, ಮುಸ್ಸಂಜೆಯ ಮಿಂಚು’ ಅವರ ಪ್ರಮುಖ ಕಾದಂಬರಿಗಳು. ಶಿಕ್ಷಣದತ್ತ ಒಂದು ನೋಟ ಎಂಬ ಲೇಖನ ಸಂಗ್ರಹ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯ ಸಮಾಜಮುಖಿಯಾಗಿದ್ದು, ಸಾಮಾಜಿಕ ಸಮಸ್ಯೆಗಳಾದ ವೃದ್ಯಾಪ್ಯ, ವೃದ್ಧಾಶ್ರಮ, ರೈತರ ಆತ್ಮಹತ್ಯೆ, ಅದಕ್ಕೆ ಪರಿಹಾರ,ಸಾವಯುವ ...
READ MORE