ಧೂಪದ ಮಕ್ಕಳು

Author : ಮಹದೇವಸ್ವಾಮಿ ಕೆ.ಎಸ್ (ಸ್ವಾಮಿ ಪೊನ್ನಾಚಿ)

Pages 108

₹ 110.00
Year of Publication: 2018
Published by: ಛಂದ ಪುಸ್ತಕ
Address: ಐ-004, ಮಂತ್ರಿ ಪ್ಯಾರಡೈಸ್‌, ಬನ್ನೇರುಘಟ್ಟ ರಸ್ತೆ, ಬೆಂಗಳೂರು.

Synopsys

ಧೂಪದ ಮಕ್ಕಳು ಕಥಾ ಸಂಕಲನವು ಛಂದ ಪುಸ್ತಕ ಪ್ರಶಸ್ತಿ ಮತ್ತು ಪಾಪು ಕಥಾ ಪುರಸ್ಕಾರವನ್ನು ಪಡೆದಿದೆ.ಈ ಕಥಾ ಸಂಕಲನದಲ್ಲಿ ಒಂಬತ್ತು ವೈವಿಧ್ಯಮಯ ಕಥೆಗಳಿವೆ. ಆಧುನಿಕ ಜಗತ್ತಿನಲ್ಲಿ ಗಿರಿಜನ ಮಕ್ಕಳು ಕಾಯಕ, ಶಿಕ್ಷಣಕ್ಕೆ ನಡೆಸುವ ಹೋರಾಟವನ್ನು ಸಮರ್ಥವಾಗಿ ವಿವರಿಸುತ್ತದೆ. ರಾಜಕೀಯ, ಮೋಸ, ಸಾಮಾಜಿಕ ಬದುಕು ಎಲ್ಲವನ್ನೂ ನಮ್ಮ ಮುಂದೆ ಶಿವನಜ್ಜಿಕತೆ ಬಿಚ್ಚಿಡುತ್ತದೆ, ಮನುಷ್ಯ, ಮನುಷ್ಯನ ಬದುಕಿನಲ್ಲಿ ನಿರ್ವಹಿಸುವ ಪಾತ್ರ, ಅದರ ವಿರೋಧಾಭಾಸಗಳು, ನಮ್ಮ ಭಾವನೆಗಳಾದ ಸುಖ-ದುಃಖ, ಮದ-ಮತ್ಸರ, ಕಾಮಗಳನ್ನು ಹೇಗೆ ನಿಭಾಯಿಸುತ್ತೇವೆ ಎಂಬುದನ್ನು ವಿವರಿಸಲಾಗಿದೆ.ಈ ಕಥೆಯು ನೈಜ ಬದುಕಿಗೆ ಹತ್ತಿರವಾಗಿರುದರಿಂದ ಓದುಗರನ್ನು ಆಕರ್ಷಿಸುತ್ತದೆ. 

About the Author

ಮಹದೇವಸ್ವಾಮಿ ಕೆ.ಎಸ್ (ಸ್ವಾಮಿ ಪೊನ್ನಾಚಿ)

ಕವಿ, ಕಥೆಗಾರ ಮಹದೇವಸ್ವಾಮಿ ಕೆ.ಎಸ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸ್ವಾಮಿ ಪೊನ್ನಾಚಿ ಎಂದೇ ಗುರುತಿಸಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪೊನ್ನಾಚಿಯಲ್ಲಿ 1986ರಲ್ಲಿ ಜನಿಸಿದ ಅವರು, ಪ್ರಾಥಮಿಕ ಶಿಕ್ಷಣವನ್ನು ಪೊನ್ನಾಚಿ ಯಲ್ಲಿ. ಕೊಳ್ಳೇಗಾಲ ಮತ್ತು  ಮೈಸೂರಿನಲ್ಲಿ ಉನ್ನತ ವ್ಯಾಸಂಗವನ್ನು ಮುಗಿಸಿ ಪ್ರಸ್ತುತ ಚಾಮರಾಜನಗರ ಜಿಲ್ಲೆ ಯಳಂದೂರು ಇಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕನ್ನಡ ಪುಸ್ತಕ ಪ್ರಾಧಿಕಾರ ದಿಂದ ಧನ ಸಹಾಯ ಪಡೆದು 2015ರಲ್ಲಿ "ಸಾವೊಂದನ್ನು ಬಿಟ್ಟು " ಮೊದಲ ಕವನ ಸಂಕಲನ ಪ್ರಕಟಣೆಯಾಗಿದೆ. ಈ ಕೃತಿಗೆ ಬೇಂದ್ರೆ ಗ್ರಂಥ ಬಹುಮಾನ ದೊರೆತಿದೆ ಹಾಗೂ ಮಂಡ್ಯದ adviser ಪತ್ರಿಕೆಯವರು adviser ...

READ MORE

Awards & Recognitions

Related Books