ಕಡಲಾಚೆಯ ಕಥೆಗಳು

Author : ಲತಾ ಗುತ್ತಿ

Pages 140

₹ 50.00




Year of Publication: 2001
Published by: ಮಹಿಳಾ ಸಾಹಿತ್ಯಿಕಾ ಸಲಹಾ ಮಂಡಳಿ
Address: ನವನಗರ ಹುಬ್ಳಿ
Phone: 322089

Synopsis

ಮೂರು ಕವಿತಾ ಸಂಕಲನಗಳನ್ನು, ಎರಡು ಪ್ರವಾಸ ಕಥನಗಳನ್ನು ಕನ್ನಡಕ್ಕೆ ಕಾಣಿಕೆಯಾಗಿ ಕೊಟ್ಟ ಲತಾ ಗುತ್ತಿ ಓದುಗರಿಗೆ ಸಾಕಷ್ಟು ಪರಿಚಿತರು. ಕಡಲಾಚೆಯ ಕಥೆಗಳು ಲತಾ ಅವರ ವಿದೇಶಾನುಭವ ಮತ್ತು ಅಲ್ಲಿಯ ಸ್ವಾಭಾವಿಕವಾದ ಚಿಂತನೆಗಳಿಂದ ಕೂಡಿದ ಕೃತಿಯಾಗಿದೆ. ಕಡಲಾಚೆಯ ಕಥೆಯಲ್ಲಿ ಒಪ್ಪಂದದ ಮದುವೆ, ಅನಿರೀಕ್ಷಿತರು ಮತ್ತು ಹಾಗೆಂದುಕೊಂಡಂತೆ ಕಥೆಗಳು ಈ ಅಂಶವನ್ನು ತಿಳಿಸುತ್ತದೆ,. ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಭಾರತೀಯ ಹಾಗೂ ಪಾಶ್ಚಾತ್ಯ ಮೌಲ್ಯಗಳ ನಡುವಣ ವ್ಯತ್ಯಾಸವನ್ನು ನಿರೂಪಿಸುತ್ತದೆ. ಕಡಲಾಚೆಯ ಕಥೆಯಲ್ಲಿ ಸುಶಿಕ್ಷಿತ ವ್ಯಕ್ತಿಯ ಅಂತರಾಳದಲ್ಲಿ ಹೂಂಕರಿಸಿರುವ ಕರಾಳ ರಾಗವಿಕಾರ, ತನ್ನ ಸ್ವಾರ್ಥಸಾಧನೆಗಾಗಿ ಅಮಾಯಕ ಹೆಣ್ಣುಮಕ್ಕಳ ಜೀವವನ್ನು ಹೇಗೆ ಬಲಿ ತೆಗೆದುಕೊಳ್ಳುತ್ತೆ ಎಂಬುವುದನ್ನು ಮತ್ತು ಕೌಟುಂಬಿಕ ದುರಂತಕ್ಕೆ ಕಾರಣವಾಗುವ ಸತ್ಯ ಓದುಗರ ಎದೆಯನ್ನು ತಲ್ಲಣಗೊಳಿಸುತ್ತದೆ. ಈ ಕಡಲಾಚೆಯಾ ಕಥೆಯ ನಾಯಕಿ ಕ್ಯಾಥರಿನ್ ತಾನೊಬ್ಬ ಉದ್ಧಟ, ಸರ್ವಸ್ವತಂತ್ರ ಸ್ತ್ರೀವಾದಿ ಹೆಣ್ಣಂತೆ ಉದ್ದಕ್ಕೂ ಚಿತ್ರಿಸಿದ್ದಾರೆ

About the Author

ಲತಾ ಗುತ್ತಿ
(12 August 1953)

ಮೂಲತಃ ಬೆಳಗಾವಿಯವರಾದ ಡಾ. ಲತಾ ಗುತ್ತಿ ಅವರು ತಮ್ಮ ಪ್ರವಾಸ ಕಥನ ಹಾಗೂ ಕವಿತೆಗಳ ಮೂಲಕ ಚಿರಪರಿಚಿತರಿದ್ದಾರೆ. ಲತಾ ಅವರು ಜನಿಸಿದ್ದು 1953ರ ಆಗಸ್ಟ್ 12ರಂದು. ಬೆಂಗಳೂರು ಕಂಪ್ಯೂಟರ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ತಂದೆ ನಾಗನಗೌಡ, ತಾಯಿ -ಶಾಂತಾದೇವಿ ಪಾಟೀಲ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪದವಿ ಪಡೆದಿರುವ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.  ಯುರೋನಾಡಿನಲ್ಲಿ (1993), ನಾ ಕಂಡಂತೆ ಅರೇಬಿಯಾ (1995), ಅಂಡಮಾನಿನ ಎಳೆಯನು ಹಿಡಿದು (2013), ಚಿರಾಪುಂಜಿಯವರೆಗೆ (2017) ಅವರ ಪ್ರವಾಸ ಕಥನಗಳಾದರೆ ಹೆಜ್ಜೆ (2004), ಕರಿನೀರು (2015) ಕಾದಂಬರಿಗಳು.  “ಪ್ರವಾಸ ಸಾಹಿತ್ಯ ...

READ MORE

Related Books