ಪ್ರವೃತ್ತಿಯಿಂದ ಲೇಖಕಿಯಾಗಿರುವ ಸಿಂಧು ರಾವ್ ಟಿ ಅವರ ಕಥಾ ಸಂಕಲನ ’ಸರ್ವಋತು ಬಂದರು’.
ಆರ್ಥಿಕ ಸಾಮಾಜಿಕ ಸ್ವಾವಲಂಬನೆ ಪಡೆದ ಹೆಣ್ಣಿನ ಬದಲಾಗಿರುವ ಭಾವಕೋಶಕ್ಕೆ ಬೇಕಾದ ಸ್ಪಂದನೆ ಪೋಷಣೆ ಇನ್ನೂ ಸಿಕ್ಕಿಲ್ಲ ಗಂಡು-ಹೆಣ್ಣಿನ ನಡುವಿನ ಬಿರುಕು ಮತ್ತು ಬೆಸುಗೆಗಳ ವಿಚಿತ್ರ ಆಟ ಯಾವತ್ತಿನಂತೆ ಮುಂದುವರೆದಿದೆ ಎಂಬ ಕಥಾ ಹಂದರಗಳು ಈ ಕೃತಿಯಲ್ಲಿವೆ.
ಆಧುನಿಕ ಕ್ರೀಡಾಂಗಣದಲ್ಲಿ ಜರಗುತ್ತಿರುವ ಈ ಆಟದಲ್ಲಿ ಹೆಣ್ಣಿನ ಭಾವಯಾನ, ಮನೋಭಿಲಾಷೆ, ಒಂಟಿತನದ ಸಂಕಟಗಳು ನಿರುದ್ವಿಗ್ನವಾಗಿ, ನವಿರಾಗಿ, ನಿಷ್ಕಲ್ಮಶವಾಗಿ ಮತ್ತು ಸಹಜ ಮರುಳುತನದಲ್ಲಿ ಕತೆಗಳ ರೂಪ ಪಡೆದಿವೆ.
ಯುವ ಬರಹಗಾರ್ತಿ ಟಿ. ಸಿಂಧು ರಾವ್ ಅವರು ಮೂಲತಃ ಸಾಗರದವರು. ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಇವರು ಮಲ್ಟಿ ಮೀಡಿಯಾ ಮತ್ತು ವೆಬ್ ವಿನ್ಯಾಸ, ಇಂಗ್ಲಿಷ್ ಲಿಟರೇಚರ್ ಶಿಕ್ಷಣ ಪಡೆದಿರುವ ಪ್ರಸ್ತುತ ಅಡೋಬ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಥೆ, ಕವಿತೆಗಳು, ಅಂಕಣಗಳು, ಪ್ರಬಂಧಗಳು ಕನ್ನಡ ದಿನ ಪತ್ರಿಕೆಗಳಾದ ಕನ್ನಡಪ್ರಭ, ವಿಜಯ ಕರ್ನಾಟಕ, ಉದಯವಾಣಿ, ಪ್ರಜಾವಾಣಿ, ಉದಯವಾಣಿ, ಪ್ರಜಾವಾಣಿ, ವಿಶ್ವವಾಣಿ ಮತ್ತು ನಿಯತಕಾಲಿಕೆಗಳಾದ ತುಷಾರ, ಸಖಿ, ಸಂಡೇ ಇಂಡಿಯನ್, ಕನ್ನಡ ಮಾಣಿಕ್ಯ, ಇವುಗಳಲ್ಲಿ ಪ್ರಕಟವಾಗಿದೆ. ಕೆಂಡಸಂಪಿಗೆ ಮತ್ತು ಚುಕ್ಕುಬುಕ್ಕು ವೆಬ್ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ...
READ MORE