ಅನಾರ್ಕಲಿಯ ಸೇಫ್ಟಿಪಿನ್

Author : ಜಯಂತ ಕಾಯ್ಕಿಣಿ

Pages 176

₹ 175.00




Year of Publication: 2021
Published by: ಅಂಕಿತ ಪುಸ್ತಕ
Address: 53, ಶ್ಯಾಮಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 08026617100

Synopsys

‘ಅನಾರ್ಕಲಿಯ ಸೇಫ್ಟಿಪಿನ್’ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರ ಕತಾ ಸಂಕಲನ. ಅಂಕಿತ ಪುಸ್ತಕ ಪ್ರಕಟಿಸಿರುವ ಈ ಸಂಕಲನದಲ್ಲಿ ಜಯಂತ ಕಾಯ್ಕಿಣಿ ಅವರ ವಿಭಿನ್ನ ಕತೆಗಳು ಸಂಕಲನಗೊಂಡಿವೆ. ಇಲ್ಲಿ ಕುತನಿ ಕುಲಾವಿ, ಭಾಮೆ ಕೇಳೊಂದು ದಿನ, ಬೆಳಕಿನ ಬಿಡಾರ, ವಾಯಾ ಚಿನ್ನದ ಕೇರಿ, ಎವರ್ ಗ್ರೀನ್, ಕಾಗದದ ಚೂರು, ಹಲೋ..ಮೈಕ್ ಟೆಸ್ಟಿಂಗ್, ಅನಾರ್ಕಲಿಯ ಸೇಫ್ಟಿಪಿನ್ ಹಾಗೂ ಮೃಗನಯನಾ ಎಂಬ ಒಂಬತ್ತು ಕತೆಗಳು ಸಂಕಲನಗೊಂಡಿದ್ದು, ಕಾಯ್ಕಿಣಿಯವರ ಪದ್ಯಗಳಷ್ಟೇ ಈ ಕಥೆಗಳು  ಆಪ್ತವಾಗಿ ಓದುಗರನ್ನು ಹಿಡಿದಿಡುತ್ತವೆ.

About the Author

ಜಯಂತ ಕಾಯ್ಕಿಣಿ
(24 January 1955)

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಅವರ ತಂದೆ ಗೌರೀಶ ಕಾಯ್ಕಿಣಿ ಹೆಸರಾಂತ ವಿಚಾರವಾದಿ ಲೇಖಕ.  ಆಧುನಿಕ ಬದುಕಿನ ಆತಂಕಗಳನ್ನು ಕತೆಯಾಗಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು.  ’ಕತೆಗಾರ’ ಎಂಬ ವಿಶೇಷಣ ಇದೆಯಾದರೂ ಅವರೊಬ್ಬ ಪ್ರಮುಖ ಕವಿ ಕೂಡ ಹೌದು. ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ ಮತ್ತು ಗೀತರಚನೆ ಹೀಗೆ ಹಲವು ಪ್ರಕಾರಗಳಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ’ಭಾವನಾ’ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಅವರು ಈಟಿವಿ ವಾಹಿನಿಗಾಗಿ ’ನಮಸ್ಕಾರ’, ಬೇಂದ್ರೆ, ಕುವೆಂಪು, ಕಾರಂತ ನಮನ ಸರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ...

READ MORE

Related Books