ಬೆತ್ತಲೆ ಸಂತ

Author : ಇಸ್ಮಾಯಿಲ್ ತಳಕಲ್

Pages 96

₹ 80.00
Year of Publication: 2021
Published by: ಕಥನ ಪುಸ್ತಕ
Address: ಕೇಶವ ಮಳಗಿ, 15ನೇ ಕ್ರಾಸ್, 7ನೇ ’ಬಿ’ ಕ್ರಾಸ್. ಗಾರ್ಡನ್ ವಿಲ್ಲಾಸ್, ನಾಗರಬಾವಿ, ಬೆಂಗಳೂರು-560072
Phone: 9448334622

Synopsys

’ಬೆತ್ತಲೆ ಸಂತ’ ಇಸ್ಮಾಯಿಲ್ ತಳಕಲ್ ಅವರ ಕತಾಸಂಕಲನವಾಗಿದೆ. ಮೆಲ್ನೋಟಕ್ಕೆ ‘ಬೆತ್ತಲೆ ಸಂತ’ ಕತೆಯು ಸಂಸಾರದ ಜಂಜಾಟಗಳಿಗೆ ಬೇಸತ್ತು ವಿಮುಖನಾಗಿ ಯಾವುದೋ ಅನೂಹ್ಯಕ್ಕೆ ತುಡಿಯುವ ಸಾಮಾನ್ಯನ ಕತೆಯಂತೆ ಕಂಡರೂ ಆಳದಲ್ಲಿ ಆರ್ದ್ರ ಭಾವನೆಗಳನ್ನು ಎಬ್ಬಿಸುತ್ತದೆ. ಕಾಯ ಜೀವಗಳ ಗಂಟುಗಳನ್ನು ಬಿಡಿಸುವಲ್ಲಿ ಪ್ರಾಮಾಣಿಕವಾಗಿ ತುಡಿಯುವ ಕಥಾನಾಯಕ ಶಂಕ್ರ, ಲೋಕದ ಕಣ್ಣಿಗೆ ಹುಚ್ಚನಂತೆ ಕಂಡರೂ ತಾನು ಬಯಸದ ಬೆತ್ತಲೆಯ ಬಯಲಿನೊಳಗೆ ಆಪರಿಮಿತದ ಆನಂದವನ್ನು ಕಂಡುಕೊಳ್ಳುವಲ್ಲಿ ಕತೆಗೊಂದು ತಾರ್ಕಿಕ ಅಂತ್ಯ ಸಿಕ್ಕಿದೆ. ವಾಸ್ತವದೊಂದಿಗೆ ಸತತ ಹಣಾಹಣಿ ಮಾಡಿಕೊಂಡೇ ಬೆತ್ತಲಾಗುವ, ಸಂತನಾಗುವ ಪ್ರಕ್ರಿಯೆಯನ್ನು ಎಳೆಯಾಗಿ ಬಿಚ್ಚಿಡುವಲ್ಲಿ ಇಸ್ಮಾಯಿಲ್ ಅವರು ತಿಳಿಗೊಳದ ಮೇಲೆ ಹೊಂಗಿರಣ ಬಿದ್ದು ಹೊಳೆಯುವಂತೆ ಪ್ರಶಾಂತವಾಗಿ ಅಷ್ಟೇ ಸ್ಪಷ್ಟವಾಗಿ ನಿರೂಪಿಸಿದ್ದಾರೆ. 

ಇಲ್ಲಿನ ಗುಲಾಬಿ ಹೂವಿನ ಫ್ರಾಕು, ರೋಗಗ್ರಸ್ತ, ಜಸ್ಟೀಸ್ ಫಾರ್ ದುರುಗಿ, ಬೆತ್ತಲೆ ಸಂತ, ಮುರಿದ ಕೊಳಲಿನ ನಾದ ಕತೆಗಳಲ್ಲಿ ಆ ಬಗೆಯ ಮೂರ್ತರೂಪದ ಪಾತ್ರಗಳನ್ನು ಎದುರುಗೊಳ್ಳುವುದನ್ನು ಕಾಣಬಹುದು. ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಬೆಳೆದ ಕತೆಗಾರರ ಲೇಖನಿಯಲ್ಲಿ ಮೂಡುವ ಹೆಣ್ಣಿನ ಚಿತ್ರಣ ನಮ್ಮ ಸಾಮಾಜಿಕ ಸ್ಥಿತಿಗತಿಯ ಪ್ರತಿಬಿಂಬವಾಗಿರುತ್ತದೆ ಎಂಬುದನ್ನು ಕಾಣಬಹುದು. ಲೇಖಕ ’ಜಸ್ಟಿಸ್ ಫಾರ್ ದುರುಗಿ’ ಕತೆಯಲ್ಲಿ ವಾಸ್ತವವನ್ನು ಸೂಕ್ಷ್ಮವಾಗಿ ಗ್ರಹಿಸಿ ಹಿಡಿದಿಟ್ಟಿದ್ದಾರೆ. ’ಗುಲಾಬಿ ಹೂವಿನ ಫ್ರಾಕ್’ ಕತೆಯಲ್ಲಿ ಬದುಕನ್ನು ಅವುಡುಗಚ್ಚಿ ಸಹಿಸಿ ನಾಳೆಯ ಭರವಸೆಯೊಂದಿಗೆ ಬದುಕುವ ಪರ್ವೀನ್ ಳ ಚಿತ್ರ, ಗ್ರಾಮೀಣ ಭಾಗದ ಅದೆಷ್ಟೊ ಮಹಿಳೆಯರ ಜೀವನದ ಪ್ರತಿಬಿಂಬವಾಗಿ ಈ ಕೃತಿ ಇದೆ. 

 

About the Author

ಇಸ್ಮಾಯಿಲ್ ತಳಕಲ್
(01 June 1986)

ಇಸ್ಮಾಯಿಲ್ ತಳಕಲ್ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಗೊಂಡಬಾಳ ಗ್ರಾಮದವರು. 1986 ಜೂನ್ 1 ರಂದು ಜನನ. ಪ್ರಸ್ತುತ ಬೆಳಗಾವಿ ಜಲ್ಲೆಯ ಗೋಕಾಕ ತಾಲೂಕಿನ ಖನಗಾಂವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಕನ್ನಡ ಶಿಕ್ಷಕರು ಮೊದಲ ಕವನ ಸಂಕಲನ `ಮಾರಾಟವಾಗದ ಗೊಂಬೆ'. ನಾಡಿನ ಹಲವಾರು ಪತ್ರಿಕೆಗಳಲ್ಲಿ ಕಥೆಗಳು ಪ್ರಕಟಗೊಂಡಿವೆ. ಕೃತಿಗಳು: ಬೆತ್ತಲೆ ಸಂತ ...

READ MORE

Related Books